MLA Ticket Harsha Mother : ಮೃತ ಹರ್ಷ ತಾಯಿಗೆ ಬಿಜೆಪಿ ಟಿಕೇಟ್ : ಈಶ್ವರಪ್ಪ, ಯಡಿಯೂರಪ್ಪ ಎದೆಯಲ್ಲಿ ನಡುಕ

ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತ ಹರ್ಷ (ಹಿಂದೂ ಹರ್ಷ) ಹತ್ಯೆಯಾಗಿ ನಾಲ್ಕೈದು ದಿನ ಕಳೆದಿದೆ. ಮನೆ ಮಗನನ್ನು ಕಳೆದುಕೊಂಡಂತೆ ಮರುಗಿರುವ ನಾಡಿನ ಜನತೆ ಹರ್ಷ ನ ಕುಟುಂಸ್ಥರ ನೋವಿಗೆ ಸ್ಪಂದಿಸುತ್ತಿದ್ದಾರೆ. ಬಿಜೆಪಿ ನಾಯಕರು , ಶಾಸಕರು ಸಂಸದರು ಹರ್ಷನ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಈ ಮಧ್ಯೆ ಹೊಸ ಸಂಗತಿಯೊಂದು (MLA Ticket Harsha Mother) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಿವಮೊಗ್ಗ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಶಿವಮೊಗ್ಗದ ಬಿಜೆಪಿಯ ನಾಯಕರಾದ ಈಶ್ವರಪ್ಪ, ಬಿಎಸ್ವೈ ತಮ್ಮ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಪ್ರಯತ್ನದಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿದ್ದಾರೆ. ಈಗ ಎರಡನೇ ಮಗ ಬಿ.ವೈ.ವಿಜಯೇಂದ್ರನನ್ನು ಶಾಸಕರನ್ನಾಗಿಸಲು ಬಿ.ಎಸ್.ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಹಿರಿಯ ಸಚಿವ ಈಶ್ವರಪ್ಪ ಕೂಡ ತಮ್ಮ ಪುತ್ರ ಕಾಂತೇಶ್ ನನ್ನು ಶಾಸಕನಾಗಿಸಲು ಸಿದ್ಧತೆ ನಡೆಸಿದ್ದಾರೆ. ಯಾವುದೇ ಸರ್ಕಾರಿ, ಖಾಸಗಿ ಕಾರ್ಯಕ್ರಮವಿದ್ದರೂ ಕಾಂತೇಶ್ ನನ್ನು ಜೊತೆಗೆ ಕರೆದೊಯ್ಯುತ್ತಾರೆ. ಹರ್ಷನ ಸಾವಿನ ಹೊತ್ತಿನಲ್ಲೂ ಕಾಂತೇಶ್ ಅವರ ಕುಟುಂಬಕ್ಕೆ ನೆರವಾಗಿದ್ದಾನೆ.

ಬಿಎಸ್ವೈ, ಈಶ್ವರಪ್ಪ ಕನಸಿಗೆ ಮುಳುವಾಯ್ತಾ ಹರ್ಷ ಸಾವು: ವೈರಲ್ ಪೋಸ್ಟ್ ಹೇಳ್ತಿರೋದೇನು?!

ಆದರೆ ಈ ಎಲ್ಲದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಚಾರವೊಂದು ಈ‌ ನಾಯಕರ ನಿದ್ದೆಗೆಡಿಸಿದೆ. ಹರ್ಷ ನ ಪೋಟೋ ಬಳಸಿ ಕಾರ್ಡ್ ವೊಂದನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಈ ಭಾರಿ ವಿಧಾನಸಭಾ ಚುನಾವಣೆಯ ಟಿಕೇಟ್ ಬಿ.ಎಸ್.ಯಡಿಯೂರಪ್ಪ ಪುತ್ರನಿಗೂ ಬೇಡ ಈಶ್ವರಪ್ಪನವರ ಮಗನಿಗೂ ಬೇಡ. ಬದಲಿಗೆ ಹಿಂದೂ ಹುಲಿ ಹರ್ಷನ ತಾಯಿಗೆ ಕೊಡೋಣ ಎಂದು ಬರೆಯಲಾಗಿದೆ.

shivamogga-bjp-mla-ticket-harsha-mother-campaign-fear-in-yediyurappa-and-eshwarappa

ಅಲ್ಲದೇ ಹೀಗೆ ಹರ್ಷನ ತಾಯಿಗೆ ಟಿಕೇಟ್ ನೀಡುವ ಮೂಲಕ ಬಿಜೆಪಿ ಹರ್ಷನ ತ್ಯಾಗ ಕ್ಕೆ ಬೆಲೆ ನೀಡಬೇಕೆಂದು ಬರೆಯಲಾಗಿದೆ. ಈ ಕಾರ್ಡ್ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಾವಿರಾರು ಜನರು ಇದೇ ಹರ್ಷನ ತ್ಯಾಗ ಕ್ಕೆ ಸರಿಯಾದ ಗೌರವ. ಯಾವಾಗಲೂ ಎಂಎಲ್ ಎ ಗಳ ಮಕ್ಕಳೇ ಶಾಸಕರಾಗಬೇಕಾ? ಜನಸಾಮಾನ್ಯರ ತ್ಯಾಗಕ್ಕೂ ಬೆಲೆ ಬೇಡವೇ ಎನ್ನುತ್ತಿದ್ದಾರೆ.

ಈಗ ಪೋಸ್ಟ್ ಈಶ್ವರಪ್ಪ ನಿದ್ದೆಗೆಡಿಸಿದೆ. ಬಿಜೆಪಿಯ ನಿಯಮಗಳ ಪ್ರಕಾರ ಈಶ್ವರಪ್ಪ ನವರಿಗೆ 2023 ರ ಚುನಾವಣೆಯಲ್ಲಿ ಪಕ್ಷದಿಂದ ಟಿಕೇಟ್ ಸಿಗೋದಿಲ್ಲ. ಹೀಗಾಗಿ ಮಗನನ್ನು ಗೆಲ್ಲಿಸಿ ತಮ್ಮ ಸ್ಥಾನ ಭದ್ರವಾಗಿಸುವ ಕನಸು ಕಂಡಿದ್ದರು.‌ಆದರೆ ಹರ್ಷನ ಸಾವು ಎಲ್ಲ ರೀತಿಯಲ್ಲೂ ಈಶ್ವರಪ್ಪ ನವರಿಗೆ ಕಂಟಕವಾಗೋ ಸಾಧ್ಯತೆ ಇದೆ. ಇನ್ನು ಹರ್ಷ ತಾಯಿ ಚುನಾವಣೆ ಗೆ ಸ್ಪರ್ಧಿಸಿದರೇ ಸಿಂಪತಿ ಓಟ್ ಕೆಲಸ‌ಮಾಡೋ ಸಾಧ್ಯತೆಗಳಿದ್ದು ಬಿಜೆಪಿ ಯೂ ಈ ಲೆಕ್ಕಾಚಾರಕ್ಕೆ ತಲೆದೂಗಿದರೇ ಅಚ್ಚರಿಯೇನಿಲ್ಲ.

ಇದನ್ನೂ ಓದಿ : ಹರ್ಷನ ಕತೆ‌ ಮುಗೀತು, ನೆಕ್ಸ್ಟ್ ನಿನ್ನ ಸರದಿ : ಹಿಂದೂಪರ ಕಾರ್ಯಕರ್ತನಿಗೆ ಬೆದರಿಕೆ ಕರೆ

ಇದನ್ನೂ ಓದಿ : ಮಗನನ್ನು ಕಳೆದುಕೊಂಡ ನೋವಲ್ಲೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ ಹರ್ಷ ಕುಟುಂಬ

(Shivamogga Bjp mla Ticket Harsha Mother Campaign, Fear in Yeddyurappa and Eshwarappa)

Comments are closed.