Shivamogga Bus Car Accident : ಬಸ್‌ – ಕಾರು ನಡುವೆ ಭೀಕರ ಅಪಘಾತ : 2 ಸಾವು, 5 ಮಂದಿ ಗಂಭೀರ

ಶಿವಮೊಗ್ಗ : (Shivamogga Bus Car Accident) ಕಾರು ಹಾಗೂ ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ2 ಮಂದಿ ಸಾವನ್ನಪ್ಪಿದ್ದು, 5cಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಲ್ಲಳ್ಳಿ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಪಟ್ಟವರನ್ನು ದಾವಣಗೆರೆಯ ಚೆನ್ನಗಿರಿ ಮೂಲದವರು ಎಂದು ತಿಳಿದು ಬಂದಿದೆ. ಜೋಗ ಜಲಪಾತ ವೀಕ್ಷಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕಾರು ಚಾಲಕ ಶಬಾಜ್‌ ( 23 ವರ್ಷ)ಕಾರಿನಲ್ಲಿದ್ದ ರಿಹಾನ್‌ ( 14 ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ. ತಬಬ್ಸುಮ್‌ ( 23 ವರ್ಷ), ಶಿಫಾ (27 ವರ್ಷ), ಖಮರುನ್ನಿಸಾ ( 45 ವರ್ಷ), ಜಬ್ರುನ್‌ ( 55 ವರ್ಷ), ಮಹಮ್ಮದ್‌ ಉಸ್ಮಾನ್‌ ( 25 ವರ್ಷ)ಉಳಿದ ಗಾಯಾಳುಗಳನ್ನು ಆರಂಭದಲ್ಲಿ ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಬೆನ್ನಲ್ಲೇ ಬಸ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತದ ಕುರಿತು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : fire breaks out at hospital : ಆಸ್ಪತ್ರೆಯಲ್ಲಿ ಅಗ್ನಿ ಅವಘಡ : ಎಂಟು ಮಂದಿ ಸಜೀವ ದಹನ

ಇದನ್ನೂ ಓದಿ : Tasteless Kebabs : ಪತ್ನಿ ಮಾಡಿಕೊಟ್ಟ ಕಬಾಬ್​ ರುಚಿಯಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ..!

Shivamogga Bus Car accident 4 dead, 3 people critical condition

Comments are closed.