Basavaraj Bommai Harsha Murder : ಎನ್ಐಎ ಹೆಗಲೇರುತ್ತಾ ಹರ್ಷ ಕೊಲೆ ಪ್ರಕರಣ : ಸಿಎಂ ಬೊಮ್ಮಾಯಿ ಹೇಳಿದ್ದೇನು ?

ಬೆಂಗಳೂರು : ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾಗಿ ಮೂರು ದಿನ ಕಳೆದಿದೆ. ಈಗಾಗಲೇ ಹತ್ಯೆಗೆ ಕಾರಣವಾದ ಒಟ್ಟು ಎಂಟು ಜನರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಆದರೆ ಇಂಥ ಪ್ರಕರಣಗಳ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಲೇ ಇದೆ. ಹೀಗಾಗಿ ಈ ಪ್ರಕರಣದ ಹಿನ್ನೆಲೆ ಹಾಗೂ ಭಾಗಿಯಾದವರ ಪತ್ತೆಗೆ ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆ ಮಾಡಿಸಬೇಕೆಂಬ ಒತ್ತಡ ವ್ಯಕ್ತವಾಗಿದೆ. ಆದರೆ ಇದಕ್ಕೆ ಸಿಎಂ ಬೊಮ್ಮಾಯಿ‌ (Basavaraj Bommai Harsha Murder) ಮಾತ್ರ ಆಸಕ್ತಿ ತೋರಿಲ್ಲ.

ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗದ ಸಿಗೇಹಟ್ಟಿ ನಿವಾಸಿ ಹರ್ಷ ಫೆ.,೨೦ ರಂದು ಶಿವಮೊಗ್ಗದ ಭಾರತೀನಗರದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಎರಡು ವರ್ಷಗಳ ಹಿಂದೆಯೂ ಹೀಗೆ ಶಿವಮೊಗ್ಗದಲ್ಲಿ ಇನ್ನೋರ್ವ ಹಿಂದೂ ಪರ ಕಾರ್ಯಕರ್ತನ ಹತ್ಯೆ ನಡೆದಿತ್ತು. ಮತ್ತೆ ಮತ್ತೆ ಹಿಂದೂಗಳ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ವನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಎನ್ ಐ ಎ ತನಿಖೆಗೆ ನೀಡಬೇಕೆಂಬ ಒತ್ತಡ ವ್ಯಕ್ತವಾಗಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದು, ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್ ಐಎ ಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದರು.

ಇನ್ನೊಂದೆಡೆ ಹರ್ಷ ಕೊಲೆ ಪ್ರಕರಣಕ್ಕೆ ಸಚಿವ ಈಶ್ವರಪ್ಪನವರೇ ಕಾರಣ. ಅವರೇ ಈ ಕೊಲೆ‌ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಸತ್ಯ ಬಹಿರಂಗ ಆಗಬೇಕು. ಅದಕ್ಕಾಗಿ ಎನ್ ಐಎ ತನಿಖೆಯೇ ಸೂಕ್ತ ಎಂದು ಸಚಿವ ಈಶ್ವರಪ್ಪ ಒತ್ತಾಯಿಸಿದ್ದರು. ಆದರೆ ಈ ಎಲ್ಲ ಒತ್ತಡಗಳಿಗೆ ಸಿಎಂ ಬೊಮ್ಮಾಯಿ ಮಣಿದಿಲ್ಲ. ಹರ್ಷ ಕೊಲೆ ಪ್ರಕರಣವನ್ನು ಎನ್ ಐಎ ತನಿಖೆಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಹಲವರ ಬಂಧನವಾಗಿದೆ. ತನಿಖೆ ಕೂಡ ನಡೀತಿದೆ. ತನಿಖೆಯಲ್ಲಿ ಬಂದ ವಿಚಾರಗಳ ಆಧಾರದ ಮೇಲೆ ಮುಂದಿನ ತನಿಖೆ ಯಾರಿಂದ ಮಾಡಿಸಬೇಕು ಎಂಬ ತೀರ್ಮಾನ ಮಾಡ್ತೀವಿ.

ಪೊಲೀಸ್ ತನಿಖೆ ಮಾಹಿತಿ‌‌ ಆಧರಿಸಿ ನಂತರ ಮುಂದಿನ ನಿರ್ಣಯ ಕೈಗೊಳ್ಳುತ್ತೀವಿ ಎಂದಿದ್ದಾರೆ‌. ಆ ಮೂಲಕ ಸದ್ಯ ಎನ್ ಐಎ ತನಿಖೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಸದ್ಯ ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಮುಂದೆಯೂ ಯಾವುದೇ ಅವಘಡಗಳಾಗದಂತೇ ಎಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚಿಸಿದ್ದೇವೆ ಎಂದರು.

ಇದನ್ನೂ ಓದಿ : ನ್ಯಾಯಾಂಗ ನಿಂದನೆ ಮಾಡಿ ಜೈಲು ಸೇರಿದ ನಟ ಚೇತನ್: ಇಂದು ನಡೆಯಲಿದೆ ಜಾಮೀನು ಅರ್ಜಿ ವಿಚಾರಣೆ

ಇದನ್ನೂ ಓದಿ : ಮುಸ್ಲಿಂರನ್ನು ಗೂಂಡಾ ಎಂದ ಸಚಿವ ಈಶ್ವರಪ್ಪ: ಶಿವಮೊಗ್ಗದಲ್ಲಿ ಸಚಿವರ ವಿರುದ್ಧ ದೂರು

(Shivamogga Harsha Murder Case, NIA investigation What Says Karnataka CM Basavaraj Bommai)

Comments are closed.