ಶಿವಮೊಗ್ಗ (Shivamogga live) : ಮಲೆನಾಡು ಶಿವಮೊಗ್ಗದಲ್ಲಿ ಚುನಾವಣಾ ಕಾವು ರಂಗೇರಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿಯ ಚನ್ನಬಸಪ್ಪ ಪರ ಮತಯಾಚನೆ ನಡೆಸಲಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರೋಡ್ ಹಾಗೂ ಲಕ್ಷ್ಮೀ ಟಾಕೀಸ್ ವರೆಗೂ ಕೂಡ ರೋಡ್ ಶೋ ನಡೆಸಲಿದ್ದಾರೆ. ಬಿಜೆಪಿ ಹಿರಿಯ ನಾಯಕರ ಕೆ.ಎಸ್. ಈಶ್ವರಪ್ಪ ಅವರ ಬದಲು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿದೆ. ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಾಯಕತ್ವದ ಕಿತ್ತಾಟ : ಯಾರಾಗ್ತಾರೆ ಮುಂದಿನ ಸಿಎಂ ?
ಕರ್ನಾಟಕ ಚುನಾವಣೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಈಗಾಗಲೇ ರಾಜ್ಯದಲ್ಲಿ ಅಬ್ಬರದ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಆರಂಭಗೊಂಡ ಬಿಜೆಪಿಯ ನಾಯಕರ ಪ್ರಚಾರ ಕಾರ್ಯ ಇದೀಗ ಹಳೆ ಮೈಸೂರು ಹಾಗೂ ಕರಾವಳಿ ಭಾಗವನ್ನು ತಲುಪಿದೆ. ಇನ್ನೊಂದೆಡೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕಾಗಿ ಈಗಾಗಲೇ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ
ಕರ್ನಾಟಕ ಚುನಾವಣೆ 2023: ಪ್ರಮುಖ ದಿನಾಂಕ ಪರಿಶೀಲಿಸಿ :
ಗೆಜೆಟ್ ಅಧಿಸೂಚನೆಯ ದಿನಾಂಕ : 13ನೇ ಏಪ್ರಿಲ್, 2023 (ಗುರುವಾರ)
ನಾಮನಿರ್ದೇಶನಗಳ ಕೊನೆಯ ದಿನಾಂಕ : 20ನೇ ಏಪ್ರಿಲ್, 2023 (ಗುರುವಾರ)
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ : 21ನೇ ಏಪ್ರಿಲ್, 2023 (ಶುಕ್ರವಾರ)
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ : 24ನೇ ಏಪ್ರಿಲ್, 2023(ಸೋಮವಾರ)
ಮತದಾನದ ದಿನಾಂಕ: 10ನೇ ಮೇ, 2023 (ಬುಧವಾರ)
ಎಣಿಕೆಯ ದಿನಾಂಕ : 13 ಮೇ, 2023 (ಶನಿವಾರ)
ಚುನಾವಣೆ ಪೂರ್ಣಗೊಳ್ಳುವ ಮೊದಲು ದಿನಾಂಕ : 15ನೇ ಮೇ, 2023 (ಸೋಮವಾರ)
Shivamogga live Karnataka Assembly Elections Amit Shah Road Show