LPG Price : ಎಲ್‌ಪಿಜಿ ಗ್ರಾಹಕರಿಗೆ ಗುಡ್‌ ನ್ಯೂಸ್‌, ಸಿಲಿಂಡರ್‌ ಬೆಲೆಯಲ್ಲಿ 171.50 ರೂ. ಇಳಿಕೆ

ನವದೆಹಲಿ : ಕರ್ನಾಟಕ ಚುನಾವಣೆಯ ನಡುವಲ್ಲೇ ಕೇಂದ್ರ ಸರಕಾರ ಗ್ಯಾಸ್‌ ಬೆಲೆಯಲ್ಲಿ ಬಾರೀ ಕಡಿತ ಮಾಡಿದೆ. ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು (LPG Price ) ಪರಿಷ್ಕರಿಸಿವೆ. 19 ಕೆಜಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ. 171.50 ಕಡಿತಗೊಳಿಸಲಾಗಿದೆ (Commercial LPG gas cylinder Down) . ಆದರೆ ಗೃಹ ಬಳಕೆಯ ಗ್ಯಾಸ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ ರೂ. 1856.50 ಆಗಲಿದೆ. ಆದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾದಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಹಿಂದಿನ ರೂ. 2132.00 ರಿಂದ ರೂ. 1960.50 ಆಗಲಿದೆ. ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹಿಂದಿನ ರೂ. 1980 ರಿಂದ ರೂ. 1808 ಆಗಲಿದೆ. ಚೆನ್ನೈನಲ್ಲಿ, ಕಳೆದ ತಿಂಗಳು ರೂ. 2192 ರಿಂದ ರೂ. 2021 ರಷ್ಟಿದೆ.

ಇದನ್ನೂ ಓದಿ : ಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

ಇದನ್ನೂ ಓದಿ : ಸರಕಾರಿ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಿಸಿರುವ ರಾಜ್ಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಮೂಲಗಳ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು (LPG Price ) ರೂ. 171.50 ಕಡಿತಗೊಳಿಸಿವೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆಯನ್ನು ರೂ. 1856.50ಕ್ಕೆ ಹೆಚ್ಚಿಸಲಾಗಿದೆ. ದೇಶೀಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಲವು ದಿನಗಳಿಂದಲೂ ಏರಿಕೆಯನ್ನು ಕಾಣುತ್ತಿದ್ದ ಸಿಲಿಂಡರ್‌ ಬೆಲೆ ಇದೀಗ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಗೃಹ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : SBI SCO ನೇಮಕಾತಿ 2023 : 217 ಮ್ಯಾನೇಜರ್ ಹುದ್ದೆಗಳಿಗೆ ಉದ್ಯೋಗಾವಕಾಶ

ಇದನ್ನೂ ಓದಿ : Bank Holidays In May 2023 : ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ

Commercial LPG Price Attention of LPG customers: Price reduction on gas cylinder by Rs 171.50

Comments are closed.