ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆ, ಯತ್ನಾಳ್‌ ಪ್ರತಿಪಕ್ಷ ನಾಯಕ : ಲಿಂಗಾಯಿತರ ಮುನಿಸು, ಇಬ್ಬಾಗವಾಗುತ್ತಾ ಬಿಜೆಪಿ

ಕರ್ನಾಟಕ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ‌ ಆಯ್ಕೆ ಮಾಡಲಾಗದೇ ಸೋತಿರೋ ಬಿಜೆಪಿ ಇನ್ನೂ ಯಾರ ಕೈಗೆ ಚುಕ್ಕಾಣಿ ನೀಡೋದು ಅನ್ನೋ ಲೆಕ್ಕಾಚಾರದಲ್ಲೇ ಇದೆ.

ಬೆಂಗಳೂರು : ಬಿಜೆಪಿ ಎಂದರೇ ಬಿಎಸ್‌ ಯಡಿಯೂರಪ್ಪ, (BS Yediyurapp) ಯಡಿಯೂರಪ್ಪ  ಅಂದರೆ ಬಿಜೆಪಿ ಅನ್ನೋ ಮಾತಿತ್ತು. ಆದರೆ ಈ ಮಾತನ್ನು ಕಡೆಗಣಿಸಿದ ಬಿಜೆಪಿ  (BJP) ಹೈಕಮಾಂಡ್ ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆ (Karnataka Assembly Election 2023)  ಸೋತು ಅಧಿಕಾರ ಕಳೆದುಕೊಂಡಿದೆ. ಆದರೆ ಈಗ ತಪ್ಪನ್ನು ತಿದ್ದಿಕೊಳ್ಳುವ ಇನ್ನೊಂದು ಅವಕಾಶವನ್ನು ಕಳೆದುಕೊಂಡು ಮತ್ತೆ ಲೋಕಸಭೆಯಲ್ಲೂ ಮುಖಭಂಗ ಅನುಭವಿಸುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಬಿಎಸ್‌ ಯಡಿಯೂರಪ್ಪ ಅವರನ್ನು ಕಡೆಗಣಿಸಿ, ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ( BJP State President) ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda patil yatnal)  ಬಿಜೆಪಿ ಶಾಸಕಕಾಂಗ ಪಕ್ಷದ (Bjp Leader of Opposition ಹೊಣೆಯನ್ನು ನೀಡಲಿದೆ ಅನ್ನೋ ಮಾತು ಕೇಳಿಬಂದಿದೆ. ಇದರಿಂದಾಗಿ ಲಿಂಗಾಯಿತರ ಮತ್ತೆ ಮುನಿಸಿಕೊಳ್ಳುವ ಸಾಧ್ಯತೆಯಿದ್ದು, ಬಿಜೆಪಿ ಪಕ್ಷ ಇಬ್ಬಾಗವಾಗುವ ಅನುಮಾನ ಮೂಡಿದೆ.

Shobha Karandlaje BJP State President, Basanagouda Patil Yatnal Leader of Opposition BS Yediyurappa and Lingayats frustration, BJP split
Image Credit to Original Source

ಕರ್ನಾಟಕ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ‌ ಆಯ್ಕೆ ಮಾಡಲಾಗದೇ ಸೋತಿರೋ ಬಿಜೆಪಿ ಇನ್ನೂ ಯಾರ ಕೈಗೆ ಚುಕ್ಕಾಣಿ ನೀಡೋದು ಅನ್ನೋ ಲೆಕ್ಕಾಚಾರದಲ್ಲೇ ಇದೆ. ಈ ಮಧ್ಯೆ ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ, ಲಿಂಗಾಯಿತರು ಅನ್ನೋ ಕಾರಣಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕು ಅನ್ನೋ ಲೆಕ್ಕಾಚಾರ ಬಿಜೆಪಿ ಪಕ್ಷದೊಳಗೆ ನಡೆಯುತ್ತಿದೆ.

ಒಂದೊಮ್ಮೆ ಈ ಮಾತು ನಿಜವಾದರೇ ಈಗಾಗಲೇ ಒಮ್ಮೆ ಬಿಎಸ್‌ ಯಡಿಯೂರಪ್ಪ ನಾಯಕತ್ವ, ಅನುಭವವನ್ನು ಕಡೆಗಣಿಸಿ ಕೈ ಸುಟ್ಟುಕೊಂಡಿರೋ ಬಿಜೆಪಿ ಮತ್ತೊಮ್ಮೆ ಕೈ ಸುಟ್ಟುಕೊಂಡು ಲೋಕಸಭೆ ಸ್ಥಾನಗಳನ್ನು ಕಳೆದುಕೊಂಡು ಕಂಗಾಲಾಗೋದು ಗ್ಯಾರಂಟಿ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ : ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಬೇಡ: ರಾಜ್ಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಚಾಟಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಹೇಳಿಕೊಳ್ಳುವಂತಹ ವರ್ಚಸ್ಸಿಲ್ಲ. ಸದ್ಯ ಅವರ ಲೋಕಸಭಾ ಕ್ಷೇತ್ರದಲ್ಲಿ ಸ್ಪಷ್ಟವಾಗಿ ಗೆಲುವು ಸಾಧಿಸೋದು ಕಷ್ಟ ಅನ್ನೋ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಜವಾಬ್ದಾರಿ ಹೊರುವುದು  ಕಷ್ಟ ಸಾಧ್ಯದ ಮಾತು ಎನ್ನುತ್ತಿದ್ದಾರೆ.

Shobha Karandlaje BJP State President, Basanagouda Patil Yatnal Leader of Opposition BS Yediyurappa and Lingayats frustration, BJP split
Image Credit To Original Source

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆಪರೇಷನ್‌ ಹಸ್ತದ ಹಿಂದೆ ಬಿದ್ದಿದ್ದಾರೆ. ಸಣ್ಣಪುಟ್ಟ ಅಸಮಾಧಾನಕ್ಕೂ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಅವರನ್ನು ಪಕ್ಷಕ್ಕೆ ಸೆಳೆಯೋ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲೇ ಬಿಜೆಪಿಯನ್ನು ರಾಜ್ಯದಲ್ಲಿ ಗಟ್ಟಿಯಾಗಿ ಕಟ್ಟಲು ಸಮರ್ಥ ನಾಯಕನ ಅಗತ್ಯವಿದೆ.

ವಿರೋಧ ಪಕ್ಷದ ನಾಯಕರನ್ನಾಗಿ ಬಸನಗೌಡ ಪಾಟೀಲ್‌ ಯತ್ನಾಳ್‌ ನೇಮಕದ ಮಾತು ಕೇಳಿಬಂದಿದೆ. ರಾಜಕೀಯವಾಗಿ ಯತ್ನಾಳ್‌ ಅನುಭವಿ, ಸಂಸದರಾಗಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ ಯತ್ನಾಳ್‌ ಮಾತಿನ ಮೇಲೆ ಹಿಡಿತ ಇಲ್ಲದ ಕಾರಣಕ್ಕೆ ಸ್ವಪಕ್ಷೀಯ ನಾಯಕರೇ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ವಿರೋಧಿಸುತ್ತಿದ್ದಾರೆ.

ಇದನ್ನೂ ಓದಿ : ಜೆಡಿಎಸ್‌ ಪಕ್ಷದಿಂದ ಎಚ್‌ಡಿ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಉಚ್ಚಾಟನೆ : ಸಿಎಂ ಇಬ್ರಾಹಿಂ ಹೇಳಿದ್ದೇನು ?

ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿರುವ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ತ ಬಿವೈ ವಿಜಯೇಂದ್ರ ಅವರ ವಿರುದ್ದ ಪದೇ ಪದೇ ಕಿಡಿಕಾರುವ ಮೂಲಕ ಲಿಂಗಾಯಿತರು, ವೀರಶೈವ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಹಲವು ನಾಯಕರು ಈಗಾಗಲೇ ಯತ್ನಾಳ್‌ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ಯತ್ನಾಳ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ರೆ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಪೋಟವಾಗುವ ಸಾಧ್ಯತೆಯಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ.

Shobha Karandlaje BJP State President, Basanagouda Patil Yatnal Leader of Opposition BS Yediyurappa and Lingayats frustration, BJP split
Image Credit to Original Source

ವಿಧಾನಸಭಾ ಚುನಾವಣೆಯಲ್ಲಿ ಬಿಎಲ್‌ ಸಂತೋಷ್‌ ಅವರ ಸಮೀಕ್ಷೆಗೆ ಬೆಲೆ ಕೊಟ್ಟಿದ್ದರ ಫಲವೇ ಇಂದು ಗೆಲ್ಲುವ, ಪ್ರಭಾವಿ ನಾಯಕರ ಕ್ಷೇತ್ರದಲ್ಲೂ ಸೋಲನ್ನು ಕಂಡಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನು ಬಿಜೆಪಿ ಹೈಕಮಾಂಡ್‌ ಸೋಲಿನಿಂದ ಬುದ್ದಿ ಕಲಿತಿದ್ದರೆ ಇಂದು ರಾಜ್ಯ ಬಿಜೆಪಿಗೆ ಬಿಎಸ್‌ ಯಡಿಯೂರಪ್ಪ ಅವರಿಂದ ರಾಜ್ಯ ಪ್ರವಾಸ ಮಾಡಿಸಬೇಕಾಗಿತ್ತು.

ಬಿಎಸ್‌ ಯಡಿಯೂರಪ್ಪ ಬದಲು ಬಿಎಲ್‌ ಸಂತೋಷ್‌ ಅವರಿಗೆ ಪಕ್ಷದಲ್ಲಿ ಹೆಚ್ಚು ಮನ್ನಣೆ ಸಿಗ್ತಿದೆ ಅನ್ನೋ ಆರೋಪವೂ ಕೇಳಿಬರುತ್ತಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಕಣ್ಣೀರು ಬಿಜೆಪಿಗೆ ಬಾರೀ ಹೊಡೆತವನ್ನೇ ಕೊಟ್ಟಿತ್ತು. ಲಿಂಗಾಯಿತರು, ವೀರಶೈವರ ಕೋಪಕ್ಕೆ ಬಿಜೆಪಿ ಕೈ ಸುಟ್ಟುಕೊಂಡಿತ್ತು. ಆದರೂ ಮತ್ತದೇ ಪುನರಾವರ್ತನೆ ಆದಂತೆ ಕಾಣಿಸುತ್ತಿದೆ.

ದಕ್ಷಿಣ ಭಾರತದಲ್ಲಿಯೆ ಕಮಲ ಪಾಳಯಕ್ಕೆ ಅಸ್ಥಿತ್ವವನ್ನು ತಂದುಕೊಟ್ಟಿದ್ದು ಬಿಎಸ್‌ ಯಡಿಯೂರಪ್ಪ. ಬಿಎಸ್‌ವೈ ಓರ್ವ ಚಾಣಾಕ್ಷ್ಯ ರಾಜಕಾರಣಿ. ಒಂದೊಮ್ಮೆ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಕ ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ಬಿಜೆಪಿ ಬುದ್ದಿವಂತಿಕೆಯ ತಂತ್ರಗಾರಿಕೆಯನ್ನು ಮಾಡಬೇಕಿತ್ತು.

ಇದನ್ನೂ ಓದಿ : ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ : ಸಿದ್ದರಾಮಯ್ಯ ಕಾಲದಲ್ಲೇ ಅನುದಾನವಿಲ್ಲದೆ ಬಾಗಿಲು ಮುಚ್ಚುತ್ತಿದೆ ಇಂದಿರಾ ಕ್ಯಾಂಟೀನ್‌

ಬಿವೈ ವಿಜಯೇಂದ್ರ ಅವರಿಗೆ ಪಕ್ಷದ ಹೊಣೆ ಹೊರಿಸಿದ್ದರೆ, ಬಿಎಸ್‌ ಯಡಿಯೂರಪ್ಪ ಸ್ವತಃ ರಾಜ್ಯಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಅಸಮಾಧಾನಿತರ ಮನವೊಲಿಕೆಯ ಜೊತೆಗೆ ಚುನಾವಣೆಯ ನಿರ್ವಹಣೆಯನ್ನು ಮಾಡುತ್ತಿದ್ದರು. ಈ ಮೂಲಕ ಬಿಜೆಪಿ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದಂತೆ ಆಗುತ್ತಿತ್ತು.

Shobha Karandlaje BJP State President, Basanagouda Patil Yatnal Leader of Opposition BS Yediyurappa and Lingayats frustration, BJP split
Image Credit To Original Source

ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿವೈ ವಿಜಯೇಂದ್ರ ಅವರ ಕಾಂಬಿಷೇನ್‌ನಿಂದಾಗಿ ಲಿಂಗಾಯಿತ, ವೀರಶೈವ ಹಾಗೂ ಒಕ್ಕಲಿಗರನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷದತ್ತ ಸೆಳೆಯಲು ಸಹಕಾರಿಯಾಗುತ್ತಿತ್ತು. ಚುನಾವಣೆಯ ಹೊತ್ತಲ್ಲೇ ಕಮಲ ಪಾಳಯ ಗೆಲುವಿನ ತಂತ್ರಗಾರಿಕೆ ಮಾಡುತ್ತಿಲ್ಲ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ರಾಜ್ಯದಲ್ಲಿ ಬಿಜೆಪಿಯ ಜೊತೆಗೆ ಜೆಡಿಎಸ್‌ ಸಾತ್‌ ಕೊಟ್ಟಿರುವುದು ಹಲವು ಕ್ಷೇತ್ರಗಳ ಮಟ್ಟಿಗೆ ಪ್ಲಸ್‌ ಪಾಯಿಂಟ್‌. ಆದರೆ ಪಕ್ಷದಲ್ಲಿನ ಆಂತಿಕ ಕಚ್ಚಾಟ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಬಿಜೆಪಿ ಹೈಕಮಾಂಡ್‌ ಅಳೆದು ತೂಗಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಯ ಮೇಲೆ ಲೋಕಸಭಾ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರ ನಿರ್ಧಾರವಾಗಲಿದೆ.

Shobha Karandlaje BJP State President, Basanagouda Patil Yatnal Leader of Opposition BS Yediyurappa and Lingayats’ frustration, BJP split

Comments are closed.