ಸೋಮವಾರ, ಏಪ್ರಿಲ್ 28, 2025
HomekarnatakaSiddaganga Shivakumara Swami : ಸಿದ್ಧಗಂಗಾ ಶ್ರೀಗಳ ಪಠ್ಯಕ್ಕೆ ಕತ್ತರಿ : ಸಮಿತಿ ಎಡವಟ್ಟಿಗೆ ವ್ಯಕ್ತವಾಗ್ತಿದೆ...

Siddaganga Shivakumara Swami : ಸಿದ್ಧಗಂಗಾ ಶ್ರೀಗಳ ಪಠ್ಯಕ್ಕೆ ಕತ್ತರಿ : ಸಮಿತಿ ಎಡವಟ್ಟಿಗೆ ವ್ಯಕ್ತವಾಗ್ತಿದೆ ಭಾರೀ ಆಕ್ರೋಶ

- Advertisement -

ಬೆಂಗಳೂರು : ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆಗಿಂತ ಹೆಚ್ಚು ಸದ್ದು‌ಮಾಡ್ತಿರೋದು ಪಠ್ಯಪುಸ್ತಕ ಪರಿಷ್ಕರಣೆ ವಿವಾದ. ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪುಸ್ತಕ ಪರಿಷ್ಕರಣ ಸಮಿತಿಯನ್ನೇ ರದ್ದು ಮಾಡಿದೆ. ಆದರೂ ಮಳೆ‌ ನಿಂತರೂ ಹನಿ ನಿಂತಿಲ್ಲ ಎಂಬಂತೆ ಇನ್ನಷ್ಟು ಪಠ್ಯಗಳು ವಿವಾದ ಸೃಷ್ಟಿಸಿವೆ. ಇದೀಗ ಸಿದ್ದಗಂಗಾ ಶ್ರೀಗಳ (Siddaganga Shivakumara Swami ) ಪಠ್ಯಕ್ಕೆ ಕತ್ತರಿ ಪ್ರಯೋಗ ಮಾಡುವ ಮೂಲಕ ಮತ್ತೊಂದು ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು ಇದುವರೆಗೂ ಬೇರೆ ಬೇರೆ ಪಠ್ಯಗಳು ವಿವಾದ ಮೂಡಿಸಿದ್ದವು. ಆದರೇ ಈಗ ಈ‌ ನಾಡಿಗೆ ಧರ್ಮದ ಮೌಲ್ಯದ ಹೇಳಿದ ಸ್ವಾಮೀಜಿಗಳ ಪಾಠವನ್ನೇ ಕೈ ಬಿಡಲಾಗಿರೋದು ಕರ್ನಾಟಕದ ಎಲ್ಲ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಸಿದ್ಧಗಂಗಾ ಶ್ರೀಗಳು ಅನ್ನದಾಸೋಹ, ಶಿಕ್ಷಣ ದಾಸೋಹದ ಮೂಲಕ ನಾಡಿನ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾದವರು. ಪಡಿಬೇಡಿ ಮಕ್ಕಳನ್ನು ಜ್ಞಾನದೀವಿಗೆಯತ್ತ ನಡೆಸಿದ ಶ್ರೀಗಳ ಬಗ್ಗೆ ವಿವರವಾದ ಪಾಠವನ್ನು ಪಠ್ಯದಲ್ಲಿ ಸೇರಿಸಲಾಗಿತ್ತು. ಆದರೆ ಈಗ ಆ ಪಠ್ಯವನ್ನು ವಿನಾಕಾರಣ ಚುಟುಕುಗೊಳಿಸಲಾಗಿದೆ.

ಇದು ಸಿದ್ಧಗಂಗಾ, ಆದಿಚುಂಚನಗಿರಿ, ಸುತ್ತೂರು ಸೇರಿದಂತೆ ಹಲವು ಮಠಗಳ ವಿವರವನ್ನು ಕತ್ತರಿಸಲಾಗಿದೆ. ಇದಕ್ಕೆ ಎಲ್ಲೆಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ನಾಡಿನ ಜನರಿಗೆ, ಸಂತ ಪರಂಪರೆಗೆ ಆದರ್ಶಪ್ರಾಯರಾಗಿರುವ ಶ್ರೀಗಳ ಪಠ್ಯ ಚುಟುಕುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಲವು ಶ್ರೀಗಳು ಈ ಪಠ್ಯಮತ್ತೊಮ್ಮೆ ಮೊದಲಿನ ರೂಪದಲ್ಲೇ ಮಕ್ಕಳ ಕೈಸೇರಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಸರ್ಕಾರದ ಈ ಎಡವಟ್ಟಿನ ಬಗ್ಗೆ ಕಾಂಗ್ರೆಸ್ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದು, ಸಿದ್ದಗಂಗೆ,ಆದಿಚುಂಚನಗಿರಿ ಶ್ರೀಗಳ ಪಠ್ಯಕ್ಕೆ‌ಬ್ರೇಕ್ ಹಾಕಿರೋದು ಖಂಡಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ವಾರ್ ನಡೆಸಿದೆ.

ಸರ್ಕಾರಕ್ಕೆ ವಿರುದ್ಧ ಕಾಂಗ್ರೆಸ್ ಟ್ವೀಟ್ ಟಾಂಗ್ ನೀಡಿದ್ದು ಶ್ರೀಗಳ‌ ವಿಚಾರದಲ್ಲೂ ಪಠ್ಯದಲ್ಲಿ ಲೋಪವಾಗಿದೆ. ಇಬ್ಬರು ಶ್ರೀಗಳ‌ ಬದುಕೇ ಸ್ಫೂರ್ತಿಯ ಚಿಲುಮೆ. ಅವರ ಪಾಠ ಓದಿದವರು ಯೋಗಿಗಳೇ ಆಗ್ತಾರೆ.ಕಾಯಕ ಯೋಗಿಗಳಾಗಿ‌ ಸಮಾಜ ಕಟ್ಟುತ್ತಾರೆ. ಮಕ್ಕಳು‌ ಸಮಾಜದ ಆಸ್ತಿಗಳಾಗಿ‌ ರೂಪುಗೊಳ್ತಾರೆ.ನಾಡಿನ ಮಠಗಳು ಜನರ ಕಣ್ಣುಗಳಿಂತಿವೆ. ಅನ್ನ, ಅಕ್ಷರ ದಾಸೋಹದ ಮೂಲಕ ಬೆಳಕು ಚೆಲ್ಲಿವೆ.

Siddaganga Shivakumara Swami Lesson cutoff Text Book Committee Massive outrage everywhere

ಸಿದ್ದಗಂಗೆ, ಸಿರೆಗೆರೆ, ಆದಿಚುಂಚನಗಿರಿ, ಮುರುಘಾಮಠ ಇನ್ನೂ‌ ಹಲವು ಮಠಗಳು ದಾಸೋಹ ಪರಂಪರೆಗೆ ಹೆಸರುವಾಸಿ. ಇಂತಹ ಸಮಾಜ ಪ್ರೇರಕ‌ ಶಕ್ತಿಗಳ‌ಬಗ್ಗೆ ತಿಳಿಸಬೇಕು. ಮಕ್ಕಳಿಗೆ ಹೆಚ್ಚೆಚ್ಚು ತಿಳಿಸುವ ಕೆಲಸ ಆಗಬೇಕು. ಆದರೆ ಪಾಠದಲ್ಲಿ ಪ್ರಮುಖ ವಾಕ್ಯಗಳೇ ಇಲ್ಲ. ಇದು ಆ ಮಹನೀಯರಿಗೆ ಮಾಡಿದ ಅಪಮಾನ. ನಾಡದ್ರೋಹಿ ಬಿಜೆಪಿ ಟ್ಯಾಗ್ ಮಾಡಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ.

Siddaganga Shivakumara Swami Lesson cutoff Text Book Committee Massive outrage everywhere

ಇನ್ನು ಈ ಸಂಗತಿಗೆ ನಾಡಿನಾದ್ಯಂತ ಇರುವ ಗುರುಭಕ್ತರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದು, ಈ ಪ್ರಕರಣ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡು ಬಿಜೆಪಿಗೆ ಮುಳುವಾಗೋದರಲ್ಲಿ ಅನುಮಾನವೇ ಇಲ್ಲ ಎಂದು ಅಂದಾಜಿಸಲಾಗುತ್ತಿದೆ.

ಇದನ್ನೂ ಓದಿ : rohith chakrathirtha : ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಇದನ್ನೂ ಓದಿ : Rohit Chakratirtha : ಸಂಶೋಧಕನಿಗೆ ಮತಕ್ಕಿಂತ ಸತ್ಯ ಮುಖ್ಯ: ಬಿಜೆಪಿ ವಿರುದ್ಧವೇ ತಿರುಗಿಬಿದ್ದ ರೋಹಿತ್ ಚಕ್ರತೀರ್ಥ

Siddaganga Shivakumara Swami Lesson cutoff Text Book Committee Massive outrage everywhere

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular