Cricket World Record : ಕ್ರಿಕೆಟ್‌ನಲ್ಲೊಂದು ಅಪರೂದ ವಿಶ್ವದಾಖಲೆ : ಒಂದೇ ಇನ್ನಿಂಗ್ಸ್‌ನಲ್ಲಿ 9 ಮಂದಿ ಅರ್ಧಶತಕ !

ಬೆಂಗಳೂರು: ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಒಂದೇ ತಂಡದ ಒಂದರಿಂದ 9ನೇ ಕ್ರಮಾಂಕದ ಆಟಗಾರರೆಲ್ಲಾ ಅರ್ಧಶತಕ ಬಾರಿಸಿದ್ದನ್ನು ಎಲ್ಲಾದ್ರೂ ಕೇಳಿದ್ದೀರಾ..? ಖಂಡಿತಾ ಸಾಧ್ಯವಿಲ್ಲ. ಯಾಕಂದ್ರೆ ಇದು ಈ ಹಿಂದೆ ಎಂದೂ ನಡೆದಿಲ್ಲ. ಇದೇ ಕಾರಣಕ್ಕೆ ಇದೊಂದು ವಿಶ್ವದಾಖಲೆ. ಈ ವಿಶ್ವದಾಖಲೆ (Cricket World Record) ಬರೆದಿರುವುದು ಬಂಗಾಳ ಕ್ರಿಕೆಟ್ ತಂಡ.

ಬೆಂಗಳೂರಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಅಪರೂಪದ ವಿಶ್ವದಾಖಲೆ ದಾಖಲಾಗಿದೆ. ಬಂಗಾಳ ತಂಡದ ಅಗ್ರ 9 ಮಂದಿ ಆಟಗಾರರು 50 ಅಥವಾ 50ಕ್ಕಿಂತ ಹೆಚ್ಚಿನ ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆರಂಭಿಕ ಆಟಗಾರರಾದ ಅಭಿಷೇಕ್ ರಾಮನ್(61), ಅಭಿಮನ್ಯು ಈಶ್ವರನ್(65), ಸುದೀಪ್ ಕುಮಾರ್ ಘರಮಿ(186). ಅನುಸ್ತೂಪ್ ಮಂಜುಮ್ದಾರ್(117), ಮನೋಜ್ ತಿವಾರಿ(73), ಅಭಿಷೇಕ್ ಪೊರೆಲ್(68), ಶಹಬಾಜ್ ಅಹ್ಮದ್(78), ಸಯಾನ್ ಮೊಂಡಲ್(ಅಜೇಯ 53) ಮತ್ತು ಆಕಾಶ್ ದೀಪ್(ಅಜೇಯ 53) ಒಂದೇ ಇನ್ನಿಂಗ್ಸ್’ನಲ್ಲಿ 50 ಅಥವಾ 50+ ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

Cricket World Record 9 Cricketers Half century in One match Ranaji Trophy 1

ಈ ಹಿಂದಿನ ವಿಶ್ವದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 1893ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡದ 8 ಮಂದಿ ಆಟಗಾರರು ಒಂದೇ ಇನ್ನಿಂಗ್ಸ್’ನಲ್ಲಿ 50 ಅಥವಾ 50+ ರನ್ ಗಳಿಸಿದ್ದರು. 129 ವರ್ಷಗಳ ಆ ವಿಶ್ವದಾಖಲೆಯನ್ನು ಬಂಗಾಳ ತಂಡದ ಆಟಗಾರರು ಪುಡಿಗಟ್ಟಿದ್ದಾರೆ.

Cricket World Record 9 Cricketers Half century in One match Ranaji Trophy 1

ಈ ವಿಶ್ವದಾಖಲೆ ಬರೆದ ಬಂಗಾಳದ ತಂಡದ ಆಟಗಾರರಲ್ಲಿ ಇಬ್ಬರು ಆರ್’ಸಿಬಿ ಸ್ಟಾರ್’ಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಶಹಬಾಜ್ ಅಹ್ಮದ್ 124 ಎಸೆತಗಳಲ್ಲಿ 78 ರನ್ ಗಳಿಸಿದ್ರೆ, ಮಧ್ಯಮ ವೇಗದ ಬೌಲರ್ ಆಕಾಶ್ ದೀಪ್ ಕೇವಲ 18 ಎಸೆತಗಳಲ್ಲಿ 8 ಸಿಕ್ಸರ್ಸ್ ನೆರವಿನಿಂದ ಸಿಡಿಲಬ್ಬರದ 53 ರನ್ ಸಿಡಿಸಿ ವಿಶ್ವದಾಖಲೆಯಲ್ಲಿ ತಮ್ಮ ಹೆಸರು ಬರೆಸಿಕೊಂಡಿದ್ದಾರೆ.

Cricket World Record  9 Cricketers Half century in One match Ranaji Trophy

ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

ಇದನ್ನೂ ಓದಿ : T20 World Cup Squad: ಟಿ20 ವಿಶ್ವಕಪ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಔಟ್

ಇದನ್ನೂ ಓದಿ : Mithali Raj : ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಕ್ಕೆ ಮಿಥಾಲಿ ರಾಜ್​ ರಾಜೀನಾಮೆ

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Cricket World Record : 9 Cricketers Half century in One match Ranaji Trophy

Comments are closed.