ಭಾನುವಾರ, ಏಪ್ರಿಲ್ 27, 2025
Homekarnatakaಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ : ಯಾರಿಗೆಲ್ಲಾ ಸಚಿವ ಸ್ಥಾನ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ : ಯಾರಿಗೆಲ್ಲಾ ಸಚಿವ ಸ್ಥಾನ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

- Advertisement -

ಬೆಂಗಳೂರು : ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah CM) ನಡುವೆ ಮುಖ್ಯಮಂತ್ರಿಗಾದಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ವೀಕ್ಷಕರು ಸಿದ್ದಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿರುವ ಪಟ್ಟಿ ಬಯಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡನೇ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಯಾಗಲಿದ್ದಾರಂತೆ. ಇನ್ನು ಯಾವ ಶಾಸಕರು ಸಂಪುಟ ಸೇರುತ್ತಾರೆ ಅನ್ನುವ ಕುರಿತು ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿದ್ದು, ಗೃಹ ಖಾತೆಯ ಜೊತೆಗೆ ಪವರ್‌ ಖಾತೆ ಕೂಡ ಡಿಕೆ ಶಿವಕುಮಾರ್‌ ಅವರ ಪಾಲಾಗಲಿದೆ. ಇನ್ನು ಕಾಂಗ್ರೆಸ್‌ ಹಿರಿಯ ನಾಯಕರಾದ ರಾಮಲಿಂಗ ರೆಡ್ಡಿ, ಟಿ.ಬಿ.ಜಯಚಂದ್ರ, ಆರ್.‌ ವಿ. ದೇಶಪಾಂಡೆ, ಸತೀಶ್‌ ಜಾರಕಿಹೊಳೆ, ಪ್ರಿಯಾಂಕ ಖರ್ಗೆ, ಎಂ.ಬಿ. ಪಾಟೀಲ್‌, ಈಶ್ವರ ಖಂಡ್ರೆ, ಎಸ್‌.ಎಸ್.‌ ಮಲ್ಲಿಕಾರ್ಜುನ್‌, ದಿನೇಶ್‌ ಗುಂಡೂರಾವ್‌, ಪರಮೇಶ್ವರ ನಾಯಕ್, ಕೆ.ಜೆ.ಚಾರ್ಜ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಜಮೀರ್‌ ಅಹ್ಮದ್‌, ಸಂತೋಷ್‌ ಲಾಡ್‌, ಎಚ್.ಆರ್.‌ಗವಿಯಪ್ಪ, ವಿನಯ ಕುಲಕರ್ಣಿ, ಯು.ಟಿ.ಖಾದರ್‌, ಕೃಷ್ಣ ಬೈರೇಗೌಡ, ಕೆ.ರಾಘವೇಂದ್ರ, ಬಿ. ನಾಗೇಂದ್ರ, ಎಸ್.‌ ಮಧು ಬಂಗಾರಪ್ಪ, ಮಹಾಂತೇಶ್‌ ಶಿವಾನಂದ ಕೌಲಜಗಿ, ಡಾ.ಅಜಯ್‌ ಸಿಂಗ್‌, ರುದ್ರಪ್ಪ ಲಮಾಣಿ, ಬಸವರಾಜ್‌ ಎನ್.‌ ಶಿವಣ್ಣೂರ, ಕೆ.ಎನ್.‌ ರಾಜಣ್ಣ, ರೂಪಕಲಾ ಎಂ., ಶಾಮನೂರು ಶಿವಶಂಕರಪ್ಪ, ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಈಗಾಗಲೇ ಹಲವರು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರೇ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ಮಂದಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೆಲ್ಲಾ ಮಣೆ ಹಾಕಲಿದೆ ಅನ್ನೋ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ. ಗುರುವಾರ ರಾಜ್ಯದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ : ಬೈಂದೂರಿನಲ್ಲಿ ಗೋಪಾಲ ಪೂಜಾರಿ ಮಿನಿಸ್ಟರ್‌ ಆಗಿ ಆಯ್ತು!

ಇದನ್ನೂ ಓದಿ : Karnataka Politics live: ಡಿಕೆ ಶಿವಕುಮಾರ್‌ ದೆಹಲಿ ಪ್ರವಾಸ ರದ್ದು, ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಬಸವರಾಜ್‌ ಬೊಮ್ಮಾಯಿ

Siddaramaiah CM Dk Shivakumar DCM where is Karnataka Cabinet List Karnataka Politics

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular