Karnataka Politics live: ಡಿಕೆ ಶಿವಕುಮಾರ್‌ ದೆಹಲಿ ಪ್ರವಾಸ ರದ್ದು, ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು : Karnataka Politics live : ಕರ್ನಾಟಕದಲ್ಲಿ ಮುಂದಿನ ಸಿಎಂ ಯಾರಾಗಬೇಕು ಅನ್ನೋ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಮ್ಮ ಬೆಂಬಲಿಗ ಶಾಸಕರ ಜೊತೆಗೆ ದೆಹಲಿ ತಲುಪಿದ್ದಾರೆ. ಇನ್ನೊಂದೆಡೆಯಲ್ಲಿ ದೆಹಲಿಗೆ ಹೊರಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸವನ್ನು ರದ್ದು ಮಾಡಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಮುಖ್ಯಮಂತ್ರಿ ಆಯ್ಕೆಯ ಕುರಿತು ಈಗಾಗಲೇ ಕಾಂಗ್ರೆಸ್‌ ವೀಕ್ಷಕರು ಕರ್ನಾಟಕಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಬಹುತೇಕ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ವರಿಷ್ಠರನ್ನು ಭೇಟಿಯಾಗುವ ಮೊದಲೇ ಸಿದ್ದರಾಮಯ್ಯ ತನ್ನ ಆಪ್ತ ಶಾಸಕರ ಜೊತೆಗೆ ರಹಸ್ಯ ಸಭೆ ನಡೆಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ತಂತ್ರವನ್ನು ನಡೆಸಿದೆ.

ಇನ್ನೊಂದೆಡೆಯಲ್ಲಿ ಡಿಕೆ ಶಿವಕುಮಾರ್‌ ಸಿಎಂ ಆಗುವಂತೆ ಬೆಂಬಲಿಗರ ಒತ್ತಡ ಹೆಚ್ಚಾಗುತ್ತಿದೆ. ಡಿಕೆ ಶಿವಕುಮಾರ್‌ ಇಂದು ಅಜ್ಜಯ್ಯನ ಮಠಕ್ಕೆ ಭೇಟಿಯಾಗಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷನಾಗಿರುವ ನೆಲೆಯಲ್ಲಿ ತನಗೆ ಸಿಎಂ ಹುದ್ದೆ ನೀಡಬೇಕು ಎಂದು ಒತ್ತಡವನ್ನೂ ಹಾಕಿದ್ದಾರೆ. ಚುನಾವಣಾ ವೀಕ್ಷಕರು ಕೂಡ ಡಿಕೆ ಶಿವಕುಮಾರ್‌ ಅವರ ಬೇಡಿಕೆಯನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಡಿಕೆ ಶಿವಕುಮಾರ್‌ ಆಪ್ತ ಶಾಸಕರು ಕೂಡ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಮಾಡುತ್ತಿದ್ದಾರೆ. ಇಂದು ಸಂಜೆ 7.39ಕ್ಕೆ ದೆಹಲಿಗೆ ತೆರಳಲು ಡಿಕೆ ಶಿವಕುಮಾರ್‌ ಅವರು ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಡಿಕೆ ಶಿವಕುಮಾರ್‌ ಅಂತಿಮ ಹಂತದಲ್ಲಿ ಹೊಟ್ಟೆ ನೋವಿನ ಕಾರಣ ಕೊಟ್ಟು ವಿಮಾನದ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಾರೆ. ಇದು ಕುತೂಹಲ ಮೂಡಿಸಿದೆ.

ಇನ್ನೊಂದೆಡೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಬೆಂಗಳೂರಲ್ಲಿ ಆರ್‌ಎಸ್ಎಸ್‌ ನಾಯಕರನ್ನು ಭೇಟಿಯಾಗಿದ್ದಾರೆ. ಯಾವ ಕಾರಣಕ್ಕೆ ಬೊಮ್ಮಾಯಿ ಭೇಟಿಯಾಗಲಿದ್ದಾರೆ ಅನ್ನೋದು ಖಚಿತವಾಗಿಲ್ಲ. ಆದರೆ ಚುನಾವಣೆ ಸೋಲಿನ ಕುರಿತು ಈ ಭೇಟಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : Karnataka Next CM : ಡಿಕೆ ಶಿವಕುಮಾರ್‌ ಸಿಎಂ, ಜಗದೀಶ್‌ ಶೆಟ್ಟರ್‌ ಡಿಸಿಎಂ ?

ಇದನ್ನೂ ಓದಿ : ಟ್ಯಾಕ್ಸ್‌ ಕಟ್ಟುವವರಿಗೆ ಇಲ್ವಂತೆ ಉಚಿತ ಕರೆಂಟ್‌ : ಕಾಂಗ್ರೆಸ್‌ ಹೇಳಿದ್ದೇನು ? ಮಾಡುವುದೇನು ?

Karnataka Politics live KPCC President DK Shivakumar cancels Delhi trip Basavaraj Bommai meets RSS leaders

Comments are closed.