ಸೋಮವಾರ, ಏಪ್ರಿಲ್ 28, 2025
HomeCrimeDhaneshwari : ಮದುವೆಯಾಗೋಣ ಎಂದು ಕರೆದು ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ : ಪ್ರೇಮಿಯ ಹುಚ್ಚಾಟಕ್ಕೆ...

Dhaneshwari : ಮದುವೆಯಾಗೋಣ ಎಂದು ಕರೆದು ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ : ಪ್ರೇಮಿಯ ಹುಚ್ಚಾಟಕ್ಕೆ ತಹಶೀಲ್ದಾರ ಪುತ್ರಿ ಬಲಿ

- Advertisement -

ಬೆಂಗಳೂರು : ಪರಸ್ಪರ ಪ್ರೀತಿಸಿದ್ದ ಜೋಡಿಯೊಂದು ಮದುವೆ ವಿಚಾರದಲ್ಲಿ ಜಗಳವಾಡಿಕೊಂಡ ಪರಿಣಾಮ ಯುವತಿ ಸುಟ್ಟಗಾಯಗಳ ಜೊತೆ ಆಸ್ಪತ್ರೆ ಸೇರಿದ್ದಾಳೆ. ಪ್ರಿಯಕರನೇ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ದಾನೇಶ್ವರಿ (Dhaneshwari) ಎಂಬ ಯುವತಿ ಹಾಗೂ ಬಾದಾಮಿ ಮೂಲದ ಶಿವಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಪ್ರೀತಿಸಿದ ಬಳಿಕ ಆಕೆಯನ್ನು ಮದುವೆಯಾಗಲು ಶಿವಕುಮಾರ್ ನಿರಾಕರಿಸಿದ್ದಾನೆ. ಇದರಿಂದ ಮನನೊಂದ ಯುವತಿ ಆತನ ಕಚೇರಿ ಬಳಿ ನ್ಯಾಯಕೇಳಲು ಹೋಗಿದ್ದಾಳೆ.

ಇದಕ್ಕೆ ಸಿಟ್ಟಿಗೆದ್ದ ಯುವಕ ಶಿವಕುಮಾರ್ ಆಕೆ‌ ಮೇಲೆ ಪೆಟ್ರೋಲ್ ಎರಚಿ ಬೆಂಕಿ‌ ಹಚ್ಚಿದ್ದಾನಂತೆ.‌ ಇದರಿಂದ ಗಾಯಗೊಂಡಿರೋ ದಾನೇಶ್ವರಿಯನ್ನು (Dhaneshwari) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಮಾರ್ಚ್ 15 ರಂದು ಘಟನೆ ನಡೆದಿತ್ತು. ಕಳೆದ ಎರಡು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಾನೇಶ್ವರಿ ಇಂದು ಸಾವನ್ನಪ್ಪಿದ್ದಾಳೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.IPC 307 ಮತ್ತು SC -ST ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನು ಈ ಘಟನೆ ಬಗ್ಗೆ, ಯುವತಿ ತಂದೆ ಅಶೋಕ್ ಶರ್ಮ ಮಾತನಾಡಿದ್ದು, ಮದುವೆ ಮಾಡಲು ಸಿದ್ದತೆ ನಡೆಸಿದ್ದೆವು. ಈವೇಳೆ ದಾನೇಶ್ವರಿ (Dhaneshwari) ತನ್ನ ಪ್ರೇಮದ ಬಗ್ಗೆ ಹೇಳಿದ್ಲು. ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ರು. ಈ ವೇಳೆ ಇಬ್ಬರು ಪ್ರೀತಿ ಮಾಡಿದ್ದಾರೆ.ಅವನನ್ನೆ ಮದುವೆಯಾಗ್ತಿನಿ ಅಂದ್ಲು, ಅದ್ರೆ ಅವನು ಒಪ್ತಿಲ್ಲ ಅಂದ್ಲು. ಅಲ್ಲದೇ ಮದುವೆಯಾಗಲು ಕೇಳಿದಾಗ ಜಾತಿ ವಿಚಾರ ಹೇಳ್ತಿದ್ದಾನೆ. ನಿನ್ನ ಮದುವೆಯಾದರೆ ನನ್ನ ತಾಯಿ ತಂದೆ ಸೇರೋದಿಲ್ಲ ಅಂತ ಹೇಳ್ತಿದ್ದಾನೆ ಎಂದಿದ್ದಳು. ಪೊಲೀಸರು ಆಕೆನೇ ಹಾಕ್ಕೊಂಡಿದ್ದಾಳೆ ಅಂತಾರೆ. ಅದ್ರೆ ಅವನೇ ಮೇನ್ ರೋಡ್ ಖಾಲಿ ಜಾಗದಲ್ಲಿ ಪೆಟ್ರೋಲ್ ಹಾಕಿದ್ದಾನೆ. ಅವನೇ ಬಂದು ಅಸ್ಪತ್ರೆಗೆ ಸೇರಿಸಿ ನಮ್ಮ ನಂಬರ್ ಕೊಟ್ಟಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.

ಪೊಲೀಸರು ಆರೋಪಿ ಶಿವಕುಮಾರ್ ನನ್ನು ಹಿಡಿತಾ ಇಲ್ಲ, ಅವನಿಗೆ ಶಿಕ್ಷೆ ಆಗಬೇಕು.ನಾನು ಉಪ ತಹಸೀಲ್ದಾರ್, ಸರ್ಕಾರಿ ಅಧಿಕಾರಿ ನನಗು ಕಾನೂನು ಗೊತ್ತಿದೆ. ಪೊಲೀಸರು ನಮ್ಮನ್ನೆ ವಿಚಾರಣೆ ಮಾಡ್ತಾರೆ.ನಮಗೆ ನ್ಯಾಯ ಬೇಕು. ಯುವತಿ ತಂದೆ ಅಶೋಕ್ ಶರ್ಮ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿದ ಕಾರಣಕ್ಕೆ ಯುವತಿ ಮಸಣ ಸೇರಿದ್ದು ಬಾಳಿ ಬದುಕಬೇಕಿದ್ದ ಹೂವು ಬಾಡಿ ಹೋಗಿದೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್

ಇದನ್ನೂ ಓದಿ : ಹಿಜಾಬ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ ಸಲ್ಲಿಸಿದ 66 ವರ್ಷದ ವೃದ್ಧೆ

( Sivakumar Murdered Girl friend Dhaneshwari by pouring petrol over her and setting her on fire)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular