WhatsApp ನಲ್ಲಿ ಈಗ ನೀವೇ ಸ್ಟಿಕ್ಕರ್‌ ಕ್ರಿಯೇಟ್‌ ಮಾಡಬಹುದು! ಹೇಗೆ ಅನ್ನುತ್ತೀರಾ

ಮೆಟಾ ಮಾಲಿಕತ್ವದ ಇನ್ಸ್‌ಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್ ಹೊಸದಾದ ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಅದೇನೆಂದರೆ ಬಳಕೆದಾರರೇ ಸ್ವತಃ ಸ್ಟಿಕ್ಕರ್‌(WhatsApp Stickers)ಗಳನ್ನು ರಚಿಸಬಹುದು. ಈ ಫೀಚರ್‌ ಸದ್ಯ ವಾಟ್ಸಾಪ್ ವೆಬ್‌ನಲ್ಲಿ ಮಾತ್ರ ಲಭ್ಯವಿದೆ. ಇನ್ನು ಕೆಲವು ವಾರಗಳಲ್ಲಿ ಅದು ಡೆಸ್ಕಟಾಪ್‌ ಆಧಾರಿತ ಅಪ್ಲಿಕೇನ್‌ಲ್ಲಿಯೂ ಸಿಗಲಿದೆ ಎಂದು ಕಂಪನಿ ಹೇಳಿದೆ. ಈ ಮೊದಲು ಸ್ಟಿಕ್ಕರ್‌ ರಚಿಸಲು ಥರ್ಡ್‌–ಪಾರ್ಟಿಯ ಅವಶ್ಯಕತೆ ಇತ್ತು. ಆದರೆ ಈಗ ವ್ಯಾಟ್ಸಪ್‌ ಅದನ್ನು ಸರಳವಾಗಿಯೇ ರಚಿಸಲು ಅನುವು ಮಾಡಿಕೊಟ್ಟಿದೆ. ಕೆಲವು ಸಿಂಪಲ್‌ ಸ್ಟೆಪ್ಸ್‌ ಉಪಯೋಗಿಸಿ ಸ್ಟಿಕ್ಕರ್‌ ರಚಿಸಬಹುದಾಗಿದೆ.

WhatsApp  How to Create your own stickers
ಪ್ರಾತಿನಿಧಿಕ ಚಿತ್ರ

ಸ್ಟಿಕ್ಕರ್‌ ಕ್ರಿಯೇಟ್‌ ಮಾಡಲು ಬಳಕೆದಾರರು ಚಾಟ್‌ ವಿಂಡೋವನ್ನೇ ಆಯ್ದುಕೊಳ್ಳಬೇಕಾಗಿದೆ. ಸದ್ಯ ಈ ಸ್ಟಿಕ್ಕರ್‌ ಮೇಕರ್‌ ವಾಟ್ಸಅಪ್‌ ವೆಬ್‌ ನಲ್ಲಿರುವುದರಿಂದ ವ್ಯಾಟ್ಸ್‌ಅಪ್‌ ವೆಬ್‌ನ ಹೊಸ ವರ್ಷನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಚಾಟ್‌ ವಿಂಡೋದಲ್ಲಿರುವ ಅಟ್ಯಾಚ್‌ಮೆಂಟ್‌ ಐಕಾನ್‌(ಪೇಪರ್‌ಕ್ಲಿಪ್‌) ಆರಿಸಿ, ನಂತರ ಸ್ಟಿಕ್ಕರ್‌ ಐಕಾನ್‌ ಅಲ್ಲಿ ನಿಮಗೆ ಬೇಕಾದ ಫೋಟೋ ಅಪ್‌ಲೋಡ್‌ ಮಾಡಿ ನಿಮ್ಮದೇ ಕೈಚಳಕದಲ್ಲಿ ಸ್ಟಿಕ್ಕರ್‌ ರಚಿಸಿ ಎಂದು ಕಂಪನಿ ಹೇಳಿದೆ. ಹಬ್ಬ, ಜನ್ಮದಿನದ ಶುಭಾಶಯಗಳನ್ನೆಲ್ಲಾ ಹೇಳಲು ಇದು ಬಹಳ ಉಪಯುಕ್ತವಾಗಿದೆ. ಹಾಗಾದರೆ, ನಿಮ್ಮದೇ ಸ್ವಂತ ಸ್ಟಿಕ್ಕರ್‌ ರಚಿಸುವುದು ಹೇಗೆ ? ಇಲ್ಲಿದೆ ಅದರ ಸರಳ ಹಂತಗಳು.

WhatsApp  How to Create your own stickers
ಸಾಂಕೇತಿಕ ಚಿತ್ರ

ಇದನ್ನೂ ಓದಿ : ವಾಟ್ಸಾಪ್ ಪೇಮೆಂಟ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸೋದು ಹೇಗಂತಿರ;ಇಲ್ಲಿದೆ ಸಂಪೂರ್ಣ ಮಾಹಿತಿ

ವ್ಯಾಟ್ಸ್‌ಅಪ್‌ನಲ್ಲಿ (WhatsApp) ನಿಮ್ಮದೇ ಸ್ಟಿಕ್ಕರ್‌ ರಚಿಸುವುದು ಹೇಗೆ?

  • ವ್ಯಾಟ್ಸ್‌ಅಪ್‌ ತೆರೆಯಿರಿ.
  • ಯಾವುದಾದರೂ ಒಂದು ಚಾಟ್‌ ತೆಗೆದುಕೊಳ್ಳಿ.
  • ಅಟ್ಯಾಚ್‌ ಮೇಲೆ ಕ್ಲಿಕ್ಕಿಸಿ.
  • ಸ್ಟಿಕ್ಕರ್‌ ಸಿಲೆಕ್ಟ್‌ ಮಾಡಿ.
  • ನಿಮಗೆ ವ್ಯಾಟ್ಸ್‌ಅಪ್‌ ಸ್ಟಿಕ್ಕರ್‌ ಆಗಿ ಪರಿವರ್ತಿಸ ಬೇಕೆಂದಿರುವ ಫೋಟೋವನ್ನು ಫೈಲ್‌ಎಕ್ಸಫ್ಲೋರರ್‌ ವಿಂಡೋದಿಂದ ಆಯ್ಕೆ ಮಾಡಿಕೊಳ್ಳಿ.
  • ಬಾಕ್ಸ್‌ನ ಮೂಲೆಗಳನ್ನು ಸರಿಹೊಂದಿಸಿ.
  • ನಂತರ ಸೆಂಡ್‌ ಬಟನ್‌(ಕಳುಹಿಸುವ ಚಿಹ್ನೆ)ಕ್ಕಿಕ್ಕಿಸಿ.
  • ಇದನ್ನು ದೀರ್ಘವಾಗಿ ಒತ್ತಿಹಿಡಿಯುವುದರಿಂದ ಮುಂದಿನ ಬಳಕೆಗಾಗಿ ಉಳಸಬಹುದು.
WhatsApp  How to Create your own stickers
ಸಾಂಕೇತಿಕ ಚಿತ್ರ

ಇನ್ನು ನಿಮ್ಮದೇ ಸ್ವಂತ ಸ್ಟಿಕ್ಕರ್‌ ರಚಿಸಿ ಶುಭಾಶಯಗಳನ್ನು ಕೋರಿ.

ಇದನ್ನೂ ಓದಿ: WhatsApp web ನ ಸುರಕ್ಷತೆಗಾಗಿ ಟ್ರಾಫಿಕ್‌ ಲೈಟ್‌! ಈ ಬ್ರೌಸರ್‌ ಎಕ್ಸಟೆಂನ್ಷನ್‌ ನ ಉಪಯೋಗ ನಿಮಗೆ ತಿಳಿದಿದೆಯೇ!

(WhatsApp How to Create your own stickers)

Comments are closed.