ಸಾಲಿಗ್ರಾಮ : Sowjanya Case : ಸೌಜನ್ಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಸಾಲಿಗ್ರಾಮ, ಸಾಸ್ತಾನ ಹಾಗೂ ಕೋಟ ಪರಿಸರದ ನಾಗರೀಕರಿಂದ ಸಾಲಿಗ್ರಾಮದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಸೌಜನ್ಯ ತಾಯಿ ಕುಸುಮಾವತಿ ಅವರು ಸಾಲಿಗ್ರಾಮದ ಶ್ರೀಗುರು ನರಸಿಂಹ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ನೈಜ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ಪ್ರಾರ್ಥಿಸಿದ್ದಾರೆ.

ಶ್ರೀ ಗುರುನರಸಿಂಹ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ನೂರಾರು ಸಾರ್ವಜನಿಕರು ಮೀನು ಮಾರುಕಟ್ಟೆಯ ಮಾರ್ಗವಾಗಿ ಸಾಗಿದ ಮೆರವಣಿಗೆಯು ಆಂಜನೇಯ ದೇವಸ್ಥಾನದ ವರೆಗೂ ಸಾಗಿತು. ಆಂಜನೇಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಅತ್ಯಾಚಾರಿಗಳಿ ಶಿಕ್ಷೆ ನೀಡುವಂತೆ ಈಡುಗಾಯಿ ಒಡೆಯಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಸಾಲಿಗ್ರಾಮದ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ತಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ರು. ಪ್ರತಿಭಟನೆಯಲ್ಲಿ ಸೌಜನ್ಯ ಮಾವ ವಿಠಲಗೌಡ, ನ್ಯಾಯವಾದಿ ಅಂಬಿಕಾ ಪ್ರಭು, ಸಾಮಾಜಿಕ ಹೋರಾಟಗಾರರಾದ ನಾಗರಾಜ ಗಾಣಿಗ, ದಿನೇಶ ಗಾಣಿಗ, ಸುಧೀರ್ ಮಲ್ಯಾಡಿ ಮುಂತಾದವರು ಉಪಸ್ಥಿತರಿದ್ದರು. ಧಾರಾಕಾರ ಮಳೆಯಲ್ಲಿಯೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : Heart Attack : ಮಂಗಳೂರು : ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿನಿ ಸಾವು
ಇದನ್ನೂ ಓದಿ : Justice Nagamohan Das : 40 ಪರ್ಸೆಂಟ್ ಕಮಿಷನ್ ಹಗರಣ : ನ್ಯಾಯಾಂಗ ತನಿಖೆಗೆ ಕರ್ನಾಟಕ ಸರಕಾರ ಆದೇಶ
Sowjanya Case Mother Pray Guru Narasimha and Anjaneya Temple Protest in Saligrama