ಮಂಗಳವಾರ, ಏಪ್ರಿಲ್ 29, 2025
HomeeducationSC- ST ವಿದ್ಯಾರ್ಥಿಗಳಿಗೆ ಭರ್ಜರಿ GOOD NEWS : ಉನ್ನತ ಶಿಕ್ಷಣಕ್ಕೆ ಧನಸಹಾಯ ಪಡೆಯಲು ಇಲ್ಲಿ...

SC- ST ವಿದ್ಯಾರ್ಥಿಗಳಿಗೆ ಭರ್ಜರಿ GOOD NEWS : ಉನ್ನತ ಶಿಕ್ಷಣಕ್ಕೆ ಧನಸಹಾಯ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

- Advertisement -

ಬೆಂಗಳೂರು : ಕೊರೊನಾ ಸಂಕಷ್ಟದಿಂದಾಗಿ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಉನ್ನತ ಶಿಕ್ಷಣ ಮರಿಚಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ.

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಉತ್ತೇಜನ ನೀಡುವ ಸಲುವಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ವಿದೇಶದಲ್ಲಿ ಉನ್ನತ ವ್ಯಾಸಾಂಗಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: Delhi V V : ಈ ವಿವಿಯ 20,000 ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ 1.8 ಲಕ್ಷ ವಿದ್ಯಾರ್ಥಿಗಳು !

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ವಿದೇಶಿ ಉನ್ನತ ವ್ಯಾಸಂಗ ಯೋಜನೆ ಜಾರಿಗೆ ತಂದಿದ್ದು, ಈ ಯೊಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಹಾಗೂಉ ಪಿಹೆಚ್ ಡಿ ಪದವಿ ಅಧ್ಯಯನ ಮಾಡಲು ಧನಸಹಾಯ ನೀಡಲಿದೆ.

ಇಲಾಖೆ ಪ್ರಕಟಿಸಿರುವ ವಿದೇಶ ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪತ್ರ ಪಡೆದ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್‌ ಬಳಸಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಇಲಾಖೆಯ ವೆಬ್ ಸೈಟ್ www.sw.kar.nic.in ನಲ್ಲಿ ದಿನಾಂಕ 24-08-2021 ರಿಂದ 07-09-2021 ರ ಸಂಜೆ 5.30 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ : BIG NEWS : ಕರ್ನಾಟಕದ ಪ್ರತಿಷ್ಟಿತ 6 ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ : VTU ಮಹತ್ವದ ಆದೇಶ

RELATED ARTICLES

Most Popular