ಸೋಮವಾರ, ಏಪ್ರಿಲ್ 28, 2025
HomekarnatakaMonkeypox Apprehension : ಮಂಕಿಪಾಕ್ಸ್ ಆತಂಕದಲ್ಲಿ ರಾಜ್ಯ: ಮುನ್ನೆಚ್ಚರಿಕೆ ಕ್ರಮಗಳಿಗೆ ತಾಂತ್ರಿಕ ಸಮಿತಿ ಶಿಫಾರಸ್ಸು

Monkeypox Apprehension : ಮಂಕಿಪಾಕ್ಸ್ ಆತಂಕದಲ್ಲಿ ರಾಜ್ಯ: ಮುನ್ನೆಚ್ಚರಿಕೆ ಕ್ರಮಗಳಿಗೆ ತಾಂತ್ರಿಕ ಸಮಿತಿ ಶಿಫಾರಸ್ಸು

- Advertisement -

ಬೆಂಗಳೂರು : ದೇಶದಲ್ಲಿ ಎರಡು ಮಂಕಿಪಾಕ್ಸ್ ಪ್ರಕರಣಗಳು (monkeypox apprehension) ದಾಖಲಾದ ಬೆನ್ನಲ್ಲೇ ಕರ್ನಾಟಕಕ್ಕೆ ಆತಂಕ ಹೆಚ್ಚಿದೆ. ರಾಜ್ಯದ ಗಡಿ ಪ್ರದೇಶದಲ್ಲೇ ಎರಡೂ ಪ್ರಕರಣಗಳು ದಾಖಲಾಗಿರೋದರಿಂದ ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮಂಕಿಪಾಕ್ಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಮಾತ್ರವಲ್ಲ ಮಂಕಿಪಾಕ್ಸ್ ನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಗೌಪ್ಯ ಸಭೆ ಕೂಡ ನಡೆಸಿದೆ.

ಮಂಕಿಪಾಕ್ಸ್‌ನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ , ಈ ಬಗ್ಗೆ ಚರ್ಚಿಸಲು ಕಾನ್ಫಿಡೆನ್ಸಿಯಲ್ ಸಭೆಯನ್ನು ಕೂಡ ನಡೆಸಿದೆ. ತಾಂತ್ರಿಕ ಸಲಹಾ ಸಮತಿ (TAC) ಸಭೆ ನಡೆಸಿದ್ದು, ಸಭೆಯಲ್ಲಿ ಮಂಕಿಪಾಕ್ಸ್ ಕುರಿತು ಹಲವು ನಿರ್ಣಯಗಳನ್ನು ಸಮಿತಿ ತೆಗೆದುಕೊಂಡಿದೆ. ಹಾಗಿದ್ದರೇ ಸಮಿತಿಯಲ್ಲಿ ಕೈಗೊಂಡ ನಿರ್ಣಯಗಳೇನು ಅನ್ನೋದನ್ನು ನೋಡೋದಾದರೇ,
ರಾಜ್ಯದಲ್ಲಿವಹನ

  • ಮಂಕಿಪಾಕ್ಸ್‌ಗೆ ಪ್ರತ್ಯೇಕ ಗೈಡ್‌ಲೈನ್ಸ್ ಪಾಲಿಸಬೇಕು
  • ಜ್ವರ ಹಾಗೂ ರಾಷಸ್ ಇದ್ದವರ ಜೊತೆ ಇತರ ಸಾರ್ವಜನಿಕರು ಸಂಪರ್ಕ ಬೆಳೆಸದಂತೆ ನೋಡಿಕೊಳ್ಳಬೇಕು
  • ಯೂರೋಪ್, ಆಫ್ರಿಕಾ ಸೇರಿ 50 ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು.
  • ಬೆಂಗಳೂರು ಹಾಗೂ ಮಂಗಳೂರು ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರಿಗೆ ಸಿಂಪ್ಟಮ್ಸ್ ಚೆಕ್ ಮಾಡಿಸಬೇಕು ( ಜ್ವರ, ಬೆವರುವಿಕೆ, ಸ್ವೆಲ್ಲಿಂಗ್, ತಲೆನೋವು, ಕೀಲುನೋವು, ಕಫ, ಗಂಟಲುನೋವು, ಸ್ಕಿನ್ ರಾಷಸ್)
  • ಸಿಂಪ್ಟಮ್ಸ್ ಕಂಡುಬಂದವರನ್ನು ಕೂಡಲೇ PHC ಸೆಂಟರ್‌ಗೆ ಶಿಫ್ಟ್ ಮಾಡಬೇಕು
  • ಸಿಂಪ್ಟಮ್ಸ್ ಇರುವವರ ಬಳಿ N95 ಮಾಸ್ಕ್ ಧರಿಸಬೇಕು, ಪಿಪಿಇ ಕಿಟ್ ಬಳಕೆ ಮಾಡಬೇಕು, ಮಾಸ್ಕ್ ಶೀಲ್ಡ್ ಧರಿಸಬೇಕು
  • ಸಿಂಪ್ಟಮ್ಸ್ ಕಂಡು ಬಂದವರನ್ನು ತಕ್ಷಣ ಐಸೋಲೇಷನ್ ಮಾಡಬೇಕು
  • ಶಂಕಿತರ ಸ್ಯಾಂಪಲ್ಸ್‌ನ್ನು ಪರೀಕ್ಷೆಗೆ ಒಳಪಡಿಸಬೇಕು
  • ಶಂಕಿತರ ಕಾಂಟ್ರಾಕ್ಟ್ ಟ್ರೇಸ್ ಮಾಡಿ ಪರೀಕ್ಷೆಗೆ ಒಳಪಡಿಸಬೇಕು

ಇಷ್ಟು ನಿರ್ಣಯಗಳನ್ನು ತೆಗೆದುಕೊಂಡಿರೋ TAC ಸದಸ್ಯರು ಇಷ್ಟು ನಿರ್ಣಯಗಳನ್ನು ಆರೋಗ್ಯ ಇಲಾಖೆಗೆ ಟ್ಯಾಕ್ ಸಮಿತಿ ನೀಡಿದ್ದು, ಮಂಕಿಪಾಕ್ಸ್ ಹರಡದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅದರಲ್ಲೂ ಏರ್ಪೋರ್ಟ್ ಸುತ್ತಮುತ್ತಲಿನ ಪ್ರದೇಶ ಹಾಗೂ ಕೇರಳದ ಗಡಿಭಾಗವಾಗಿರೋ ಮಂಗಳೂರು, ಚಾಮರಾಜನಗರದಲ್ಲೂ ಹೆಚ್ಚಿನ ಕಾಳಹಿಯ ವಹಿಸಲಾಗುತ್ತಿದೆ. ಇದುವರೆಗೂ ಕೇರಳದಲ್ಲಿ ಎರಡು ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ : big relief to ks eshwarappa : ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪಗೆ ಬಿಗ್​ ರಿಲೀಫ್​

State in monkeypox apprehension, technical committee recommendation for precautionary measures

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular