ಬೆಂಗಳೂರು : ನೋಟ್ ಬ್ಯಾನ್ ಆಗಿರುವ ಹಾಗೂ ಚಲಾವಣೆಯಲ್ಲಿ ಇಲ್ಲದ ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿ ಜೆರಾಕ್ಸ್ ಪ್ರಿಂಟ್ ಮಾಡಿದ ನೋಟ್ ಕೊಟ್ಟು ಜನರಿಗೆ ವಂಚಿಸುತ್ತಿದ್ದ ಜಾಲವೊಂದು ಪೋಲಿಸರ ಬಲೆಗೆ ಬಿದ್ದಿದೆ. ಖದೀಮರ ಬಳಿಯಲ್ಲಿದ್ದ ಒಂದು ಸಾವಿರದ ನಿಷೇಧಿತ ಕಲರ್ ಜೆರಾಕ್ಸ್ ಕಂತೆ ಕಂತೆ ನಕಲಿ ನೋಟುಗಳನ್ನು ಕಂಡು ಪೋಲಿಸರೇ ದಂಗಾಗಿದ್ದಾರೆ.
ಬೆಂಗಳೂರಿನ ಗೋವಿಂದಪುರದಲ್ಲಿ ನಕಲಿ ನೋಟಿನ ದಂಧೆ ಮಾಡುತ್ತಿರುವವರನ್ನು ಪೋಲಿಸರು ಬಂಧಿಸಿದ್ದಾರೆ. ಮೊದಲಿಗೆ 35 ಲಕ್ಷ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸಿದ್ದಾರೆ ಅನ್ನೋದು ತನಿಖೆಯಿಂದ ಬಯಲಾಗಿದೆ. ಅಲ್ಲದೇ ಐವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಿಂದ 1 ಸಾವಿರ ಹಾಗೂ 500 ರ ಮುಖ ಬೆಲೆಯ 70 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಂಧಿತ ಆರೋಪಿಗಳು ಬಾಕಿ ಹಣ ಕಾಸರಗೋಡಿನಲ್ಲಿ ಇದೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಕಾಸರಗೋಡಿಗೆ ತೆರಳಿ ಪರಿಶೀಲಿಸಿದಾಗ ಪೋಲೀಸರೇ ದಂಗಾಗಿದ್ದಾರೆ. ಕಾರಣ ಕಾಸರಗೋಡಿನಲ್ಲಿ 6 ಕೋಟಿ ಜೆರಾಕ್ಸ್ ನೋಟುಗಳ ಜೊತೆ 16 ಮೂಟೆ ಪೇಪರ್ ಗಳು ಪತ್ತೆಯಾಗಿವೆ. ಇವೆಲ್ಲವನ್ನುಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಈ 5 ಜನ ಆರೋಪಿಗಳು ನೋಟು ಸರಬರಾಜು ಮಾಡುವ ಇನ್ನು ಹಲವು ಮಂದಿಯ ಹೆಸರನ್ನು ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: Madikeri : ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಮ್‌ಸ್ಟೇನಲ್ಲಿ ನಿಗೂಢ ಸಾವು
(5 arrested for giving Xerox notes on the pretext of changing old notes)