Rahul Dravid : ಟೀಂ ಇಂಡಿಯಾ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ರಾಹುಲ್‌ ದ್ರಾವಿಡ್‌

ಮುಂಬೈ : ಭಾರತ ತಂಡ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರು ಟೀಂ ಇಂಡಿಯಾ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ, ಇದರಿಂದಾಗಿ ರಾಹುಲ್‌ ಕೋಚ್‌ ಆಗ್ತಾರೋ, ಇಲ್ಲವೋ ಅನ್ನೋ ಗೊಂದಲಕ್ಕೆ ತೆರೆಬಿದ್ದಿದೆ.

ಟೀಂ ಇಂಡಿಯಾ ಕೋಚ್‌ ಆಗಿರುವ ರವಿಶಾಸ್ತ್ರೀ ಅವರ ಒಪ್ಪಂದದ ಅವಧಿ ಟಿ20 ವಿಶ್ವಕಪ್‌ ಬೆನ್ನಲ್ಲೇ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಟೀಂ ಇಂಡಿಯಾ ಮುಖ್ಯ ಕೋಚ್‌ ಆಗುವಂತೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜೈಶಾ ಅವರು ರಾಹುಲ್‌ ದ್ರಾವಿಡ್‌ ಅವರ ಮನವೊಲಿಸಿದ್ದರು. ಇದೀಗ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಗೆ ಔಪಚಾರಿಕವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್‌ ದ್ರಾವಿಡ್‌ ಅವರು, ಭಾರತ ಕಿರಿಯರ ತಂಡ ಕೋಚ್‌ ಆಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆಯೇ ರಾಹುಲ್‌ ಅವರನ್ನು ಸೀನಿಯರ್‌ ತಂಡದ ಕೋಚ್‌ ಆಗುವಂತೆ ಬೇಡಿಕೆಯಿದ್ದರೂ ಕೂಡ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆ ಅಲಂಕರಿಸಲು ಹಿಂದೇಟು ಹಾಕಿದ್ದರು. ಆದ್ರೀಗ ರಾಹುಲ್‌ ಕೋಚ್‌ ಆಗುವ ಕಾಲ ಕೂಡಿಬಂದಿದೆ.

ಈಗಾಗಲೇ ಬಿಸಿಸಿಐ ಬೌಲಿಂಗ್‌ ಕೋಚ್‌ ಹುದ್ದೆಗೆ ಪಾರಸ್‌ ಮಾಂಬ್ರೆ, ಫೀಲ್ಡಿಂಗ್‌ ಕೋಚ್‌ ಅಭಯ್‌ ಶರ್ಮಾ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮುಂಬರುವ ನ್ಯೂಜಿಲೆಂಡ್‌ ವಿರುದ್ದದ ಸರಣಿಗೆ ಭಾರತ ತಂಡದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರು ಆಯ್ಕೆಯಾಗಲಿದ್ದಾರೆ. ಅಲ್ಲದೇ ಭಾರತ ಟೀಂ ಇಂಡಿಯಾದ ಚುಟುಕು ಕ್ರಿಕೆಟ್‌ ತಂಡದ ನಾಯಕನ ಹುದ್ದೆಗೆ ಹೊಸ ಆಯ್ಕೆ ನಡೆಯಲಿದೆ.

ರಾಹುಲ್‌ ದ್ರಾವಿಡ್‌ ಅವರು ಟೀಂ ಇಂಡಿಯಾ ಕೋಚ್‌ ಆದ್ರೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಭಾರತ ತಂಡ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರು ಆಯ್ಕೆ ಯಾಗುವ ಸಾಧ್ಯತೆಯಿದೆ. ಸದ್ಯ ಸನ್‌ ರೈಸಸ್‌ ಹೈದ್ರಾಬಾದ್‌ ತಂಡ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೇ ಕಾಮೆಂಟೇಟರ್‌ ಆಗಿಯೂ ಲಕ್ಷ್ಮಣ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗುತ್ತಿರುವುದರಿಂದಾಗಿ ಹಿರಿಯ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಕಿರಿಯರ ತಂಡ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಈಗಾಗಲೇ ಯುವ ಆಟಗಾರರಾದ ಸಂಜು ಸ್ಯಾಮ್ಸನ್‌, ರಿಷಬ್‌ ಪಂತ್‌ ಅವರಂತಹ ಆಟಗಾರರನ್ನು ಟೀಂ ಇಂಡಿಯಾಕ್ಕೆ ನೀಡಿದ ಹೆಗ್ಗಳಿಕೆಯಿದೆ.

ಇದನ್ನೂ ಓದಿ : ಸರಣಿ ಗೆಲುವಿನ ಬೆನ್ನಲ್ಲೇ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದೇನು : ವೈರಲ್‌ ಆಯ್ತು ವಿಡಿಯೋ

ಇದನ್ನೂ ಓದಿ : ಒಂದೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ತ್ರಿವಿಕ್ರಮರು : ಸಚಿನ್‌, ಗಂಗೂಲಿ, ರಾಹುಲ್‌ ದಾಖಲೆ ನಿಮಗೆ ಗೊತ್ತಾ

( Rahul Dravid has applied for the post of Team India Head Coach )

Comments are closed.