ಶಿವಮೊಗ್ಗ : ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶರಾವತಿ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಚಾಲುಕ್ಯ ಬಾರ್ ಎದುರಿನ ನರಸಿಂಹ ಎಂಬವರ ಮನೆಯಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ವಿನೋಬಾ ನಗರದ ಠಾಣೆಯ ಪೊಲೀಸರು ಈ ದಾಳಿಯನ್ನು ನಡೆಸಿದ್ದರು.
ಸ್ಥಳೀಯ ನಿವಾಸಿಗಳಾದ ನರಸಿಂಹ, ವೆಂಕಟೇಶ್, ಇಸ್ಮಾಯಿಲ್, ಕಿರಣ್, ಸಾಯಿಕುಮಾರ್, ಪ್ರವೀಣ್, ಯೋಗಿಶ ಮತ್ತು ಕೃಷ್ಣ ಎಂಬುವರು ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ. ಮನೆಯಲ್ಲಿ ಜೂಜಾಟವಾಡಲಾಗುತ್ತಿದೆ ಅನ್ನೋ ಮಾಹಿತಿಯ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ.
ಅಂದರ್ ಬಹಾರ್ ಜೂಜಾಟ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಂದ 3,025 ರೂ ನಗದು ಹಾಗೂ ಜೂಜಾಟಕ್ಕೆ ಬಳಸಿದ್ದ ವಿವಿಧ ಕಂಪೆನಿಗಳ 5 ಮೊಬೈಲ್ ಗಳನ್ನುವಶಕ್ಕೆ ಪಡೆಯಲಾಗಿದೆ ಎಂದು ವಿನೋಬನಗರದ ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಗೆ ತಂದೆಯೇ ವಿಲನ್ ! ಮಗಳನ್ನು ಕೊಲೆಗೈದು ಶವ ಎಸೆದ ಅಪ್ಪ
(8 arrested for gambling)