ಮಂಗಳವಾರ, ಏಪ್ರಿಲ್ 29, 2025
HomekarnatakaDog B ites : ಒಂದೇ ದಿನ 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು...

Dog B ites : ಒಂದೇ ದಿನ 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ

- Advertisement -

ಮಂಡ್ಯ : ಸಾಮಾನ್ಯವಾಗಿ ನಾಯಿಗಳೆಂದರೆ ಭಯ ಪಡ್ತಾರೆ. ಆದ್ರೆ ಇಲ್ಲೊಂದು ಹುಚ್ಚು ನಾಯಿ ಇನ್ನಿಲ್ಲದಂತೆ ಅವಾಂತರ ಸೃಷ್ಟಿಸಿದೆ. ಒಂದೇ ದಿನ ಬರೋಬ್ಬರಿ 40 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.

ಕೆ.ಆರ್. ಪೇಟೆ ತಾಲೂಕಿನ ಸುತ್ತಮುತ್ತಲ ಗ್ರಾಮದಲ್ಲಿ ಹುಚ್ಚು ನಾಯಿಯ ಹಾವಳಿ ಹೆಚ್ಚಾಗಿದ್ದು, ಸುಮಾರು 40 ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Iron Egg : ಮೊಟ್ಟೆಯೊಳಗೆ ಕಬ್ಬಿಣದ ಚೂರು ಪತ್ತೆ : ಆಹಾರ ಇಲಾಖೆಗೆ ದೂರು ಕೊಟ್ಟ ಗ್ರಾಹಕ

ಕೆ.ಆರ್. ಪೇಟೆ ಪಟ್ಟಣ, ಮಾಕವಳ್ಳಿ, ಕುಂದನಹಳ್ಳಿ, ಹೆಗ್ಗಡ, ಪುರಗೇಟ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 40 ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಚ್ಚಿದ್ದು, ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಹಲವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: NCB : ದೇವರ ಪ್ರಸಾದದ ಹೆಸರಲ್ಲಿ ವಿದೇಶಕ್ಕೆ ಡ್ರಗ್ಸ್‌ ಸಾಗಾಟ : ಮೂವರ ಬಂಧನ

(A mad dog that bites more than 40 people in a single day)

RELATED ARTICLES

Most Popular