Crime News : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಾಮಾಚಾರದ ಹೆಸರಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮನೆಯಲ್ಲಿರುವ ಕುಟುಂಬ ವ್ಯಾಜ್ಯ ಸಮಸ್ಯೆ ಹಾಗೂ ಕಾನೂನು ಸಂಕಷ್ಟದಿಂದ ಪಾರಾಗುತ್ತೀರಿ. ಅದಕ್ಕೆ ವಾಮಾಚಾರ ಮಾಡಿಸಬೇಕೆಂದು ಹೇಳಿ ದಂಪತಿಯೋರ್ವರಿಂದ ಬರೋಬ್ಬರಿ 4.41 ಕೋಟಿ ಹಣ ಕಳೆದುಕೊಂಡ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿಯಾಗಿರುವ ಗೀತಾ ಅನ್ನುವವರ ಕುಟುಂಬ ಕಾನೂನು ವ್ಯಾಜ್ಯದಿಂದ ನೊಂದು ಹೋಗಿತ್ತು. ಅಲ್ಲದೇ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆಗಳಿತ್ತು. ಈ ವಿಚಾರವನ್ನು ತನ್ನ ಸ್ನೇಹಿತೆಯಾಗಿದ್ದ ಜಯಶ್ರೀ ಎಂಬಾಕೆಯ ಬಳಿಯಲ್ಲಿ ತಿಳಿಸಿದ್ದರು. ನಿಮಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ. ಇದಕ್ಕೆಲ್ಲಾ ಮರು ಮಾಟ ಮಂತ್ರವೇ ಸೂಕ್ತ. ಇಲ್ಲದಿದ್ರೆ ನಿಮ್ಮ ಸಂಬಂಧಿಕರು ರಕ್ತಕಾರಿ ಸಾವನ್ನಪ್ಪುತ್ತಾರೆ ಅಂತಾ ಹೆದರಿಸಿದ್ದಾಳೆ.

ವಾಮಾಚಾರಕ್ಕೆ ಹೆದರಿದ ಗೀತಾ ಅವರು ವಾಮಾಚಾರ ಮಾಡಿಸೋದಕ್ಕೆ ಒಪ್ಪಿಗೆಯನ್ನು ನೀಡಿದ್ದಾರೆ. ಬಳಿಕ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನ ಮನೆಯ ಮೂಲೆಗಳಲ್ಲಿ ಭೂಷಣ್ ಎಂಬಾತ ಇಟ್ಟು ಹೋಗಿದ್ದ. ನಂತರದಲ್ಲಿ ವಾಮಾಚಾರ ಮಾಡಿಸಿದ್ದಕ್ಕೆ ಜಯಶ್ರೀ ಹಣವನ್ನು ಕೇಳಿದ್ದಾಳೆ. 2020 ಜುಲೈ ನಿಂದ 2021 ಮಾರ್ಚ್ ವರೆಗೆ ಗೀತಾ ಎಂಬವರಿಂದ ಮೊದಲ ಕಂತಲ್ಲಿ 1.42 ಕೋಟಿ, ನಂತರ 30 ಲಕ್ಷ, ಬಳಿಕ 1.72 ಕೋಟಿ, ಮತ್ತೆ 1.90 ಕೋಟಿ, ಹೀಗೆ ಹಲವು ಕಂತುಗಳಲ್ಲಿ ಬರೋಬ್ಬರಿ 4.41 ಕೋಟಿ ಹಣ ಹಣವನ್ನು ಆರೋಪಿ ಜಯಶ್ರೀ ಸೇರಿದಂತೆ ಒಂಬತ್ತು ಮಂದಿ ಆರೋಪಿಗಳು ಸುಮಾರು 13 ಬ್ಯಾಂಕ್ ಖಾತೆಗಳಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಕೋಟಿ ಕೋಟಿ ಹಣ ಖರ್ಚು ಮಾಡಿದ್ರೂ ಕೂಡ ಮನೆಯಲ್ಲಿನ ಸಮಸ್ಯೆಗೆ ಪರಿಹಾರ ದೊರೆಯಲೇ ಇಲ್ಲ. ಇದರಿಂದಾಗಿ ಮಹಿಳೆಗೆ ಅನುಮಾನ ವ್ಯಕ್ತವಾಗಿತ್ತು. ತನ್ನ ಪತಿಯ ಜೊತೆಗೆ ಗೀತಾ ಆರೋಪಿ ಜಯಶ್ರೀ ಮನೆಗೆ ತೆರಳಿ ಹಣ, ಆಭರಣವನ್ನು ನೀಡುವಂತೆ ಕೇಳಿದ್ದಾರೆ. ಈ ವೇಳೆಯಲ್ಲಿ ಜಯಶ್ರೀ ದೌರ್ಜನ್ಯವೆಸಗಿ ಹಣ ಕೇಳಿದ್ರೆ ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದಾಳೆ. ನಂತರ ಆರೋಪಿಗಳಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಬಸವನಗುಡಿ ಠಾಣೆಯ ಪೊಲೀಸರು ಆರೋಪಿಗಳಾದ ಜಯಶ್ರೀ, ಭೂಷನ್, ರಾಕೇಶ್, ಮಂಜುನಾಥ್, ಪದ್ಮಾವತಿ ಸೇರಿ‌ 10 ಮಂದಿಯ ವಿರುದ್ದ ಮಹಿಳೆಗೆ ಮಾನ ಹಾನಿ, ಜೀವ ಬೆದರಿಕೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಬಸವಗುಡಿ ಮಹಿಳಾ ಠಾಣೆಗೆ ಒಂದು ದೂರು ಬಂದಿತ್ತು. ಮಹಿಳೆ ಮತ್ತು ಗಂಡ ಠಾಣೆಗೆ ಬಂದು, ಕಳೆದ ಒಂದೂವರೆ ವರ್ಷದಿಂದ ಒಬ್ರು ನಿಮ್ಮ ಮನೆಗೆ ಸಂಕಷ್ಟ ಇದೆ, ಪ್ರಾಣಕ್ಕೆ ಅಪಾಯವಿದೆ ಅಂತ ಹೇಳಿ, ದೇವರು ಪೂಜೆ ಮಾಡಿಸಬೇಕು, ದಾನ ಮಾಡಿಸಬೇಕು ಅಂತ ಹೇಳಿ ಭಯ ಹುಟ್ಟಿಸಿ ಮೋಸ ಮಾಡಿದ್ರು ಅಂತ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಆಟವಾಡುತ್ತಿದ್ದ ವೇಳೆ 8ನೇ ಮಹಡಿಯಿಂದ ಬಿದ್ದು2 ವರ್ಷದ ಮಗು ಸಾವು

ಮಾತ್ರವಲ್ಲ ಹಂತ ಹಂತವಾಗಿ ಸುಮಾರು 4.41 ಕೋಟಿ ಹಣವನ್ನುಆರೋಪಿಗಳು ಪಡೆದುಕೊಂಡಿದ್ದಾರೆ. ಅಲ್ಲದೇ ಆಭರಣ, ನಗದು ಹಣ, ಮನೆಯ ದಾಖಲೆಗಳನ್ನ ಪಡೆದುಕೊಂಡಿದ್ದಾರೆ. ದೂರು ಪರಿಶೀಲನೆ ಮಾಡಿ, ತನಿಖೆ ನಡೆಸಿದ್ವಿ. ಈ ವೇಳೆ ಇವರು ಇಬ್ಬರು ಮೂವರ ಟೀಮ್ ಇದೆ. ಒಬ್ಬರು ಅವದೂತ ತರ ಮಾತಾಡ್ತಾರೆ. ನೀವು ಪೂಜೆ ಮಾಡಿಸಬೇಕು, ವಾಮಚಾರ ಆಗಿದೆ ಅಂತ ಹೇಳಿರ್ತಾರೆ. ಪ್ರಾಪರ್ಟಿ ಬಗ್ಗೆ ತನಿಖೆ ಮಾಡಿದ್ದೇವೆ. ಒಂದು ಕೆಜಿ ಚಿನ್ನ, ಹತ್ತು ಲಕ್ಷ ನಗದು, ಬೆಳ್ಳಿ ವಸ್ತುಗಳು ವಶಕ್ಕೆ ಪಡೆದಿದ್ದೇವೆ. ಇಬ್ಬರ ಬಂಧನವಾಗಿದೆ, ಉಳಿದವರಿಗೆ ಶೋಧ ಅಗ್ತಿದೆ. ಭಯದ ವಾತಾವರಣದಲ್ಲಿ ದೂರುದಾರು ಇದ್ರು. ಪೊಲೀಸರು ಮಫ್ತಿಯಲ್ಲಿ ಹೋಗಿ ಪರಿಶೀಲನೆ ನಡೆಸಿದ್ರು. ಈ ವೇಳೆ ಹಣಕಾಸು ಸಮಸ್ಯೆ ಮತ್ತು ಇತರ ಸಮಸ್ಯೆಗಳನ್ನ ತಿಳಿದುಕೊಂಡು ಅವರು ಬೆದರಿಸ್ತಾ ಇದ್ರು. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ :  ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

(4.41 crore for the couple in the name of Black Magic in Tyagaraj Nagar Bangalore )

Comments are closed.