ಸೋಮವಾರ, ಏಪ್ರಿಲ್ 28, 2025
Homekarnatakaಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಆರೋಪ : ಕ್ಯಾಬ್‌ ಚಾಲಕ ಅರೆಸ್ಟ್‌

ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಆರೋಪ : ಕ್ಯಾಬ್‌ ಚಾಲಕ ಅರೆಸ್ಟ್‌

- Advertisement -

ಬೆಂಗಳೂರು : ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಈ ಪ್ರಕರಣದ ಬೆನ್ನಲ್ಲೇ ಜೀವನ್​ ಭೀಮಾ ನಗರ ಠಾಣೆಯ ಪೊಲೀಸರು ಕೇಸು ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತ್ರಸ್ತೆ ನೀಡಿರುವ ದೂರನ್ನು ಆಧರಿಸಿ ತನಿಖೆ ಕೈಗೊಂಡು ಪೊಲೀಸರು ಆರೋಪಿ ದೇವರಾಜು ಎಂಬಾತನನ್ನು ಬಂಧಿಸಿದ್ದು ಬೈಯಪ್ಪನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಯುವತಿ ಮಲ್ಲೇಶ್​ ಪಾಳ್ಯಕ್ಕೆ ತೆರಳಲು ಕ್ಯಾಬ್​ ಬುಕ್ ಮಾಡಿದ್ದಳು.

ಇದನ್ನೂ ಓದಿ: ಗೀತ ಗೋವಿಂದಂ ಸ್ಟೈಲ್‌ನಲ್ಲಿ ಬಸ್ಸಿನಲ್ಲಿ ಕಿಸ್‌ : ಬಳ್ಳಾರಿ ಮೂಲದ ಇಂಜಿನಿಯರ್‌ ಅರೆಸ್ಟ್‌

ಆಕೆ ಕ್ಯಾಬ್​ ಏರುತ್ತಿದ್ದಂತೆಯೇ ಪಾನಮತ್ತಳಾಗಿದ್ದನ್ನು ಗಮನಿಸಿದ ಚಾಲಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೇ ಈ ಕುರಿತು ಯುವತಿ ಜೀವನ್​ಭೀಮಾ ನಗರದ ಠಾಣೆಯಲ್ಲಿ ದೂರನ್ನು ನೀಡಿದ್ದಳು.

ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಗೆ ಡ್ರಾಪ್‌ ವೇಳೆ ಹಲ್ಲೆ : ಆರೋಪಿಗಳ ವಿರುದ್ದ7 ಸೆಕ್ಷನ್ ಅಡಿ ಪ್ರಕರಣ ದಾಖಲು

ಆರೋಪಿ ದೇವರಾಜು ಇಟಿಯೋಸ್​ ಕಾರನ್ನು ಲೀಸ್​ಗೆ ಪಡೆದು ಕ್ಯಾಬ್​ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಸದ್ಯ ಕಾರನ್ನೂ ವಶಕ್ಕೆ ಪಡೆದಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ ಎನ್ನಲಾಗುತ್ತಿದೆ.

(Cab driver Arrest accused of raping young woman)

RELATED ARTICLES

Most Popular