ಸೋಮವಾರ, ಏಪ್ರಿಲ್ 28, 2025
Homekarnatakaಹಾಸನಾಂಬ ಭಕ್ತರಿಗೆ ನಿರಾಸೆ : ಈ ಬಾರಿಯೂ ಇಲ್ಲ ಸಾರ್ವಜನಿಕರಿಗೆ ಪ್ರವೇಶ

ಹಾಸನಾಂಬ ಭಕ್ತರಿಗೆ ನಿರಾಸೆ : ಈ ಬಾರಿಯೂ ಇಲ್ಲ ಸಾರ್ವಜನಿಕರಿಗೆ ಪ್ರವೇಶ

- Advertisement -

ಹಾಸನ : ಕಳೆದ ವರ್ಷ ಹಾಸನಾಂಬ ದೇವಾಲಯಕ್ಕೆ ಕೋವಿಡ್‌ ಕಾರಣದಿಂದ ಸಾರ್ವಜನಿಕರಿಗೆ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಈ ವರ್ಷ ಅಕ್ಟೋಬರ್ 28 ರಿಂದ ಹಾಸನದಲ್ಲಿನ ಪ್ರಸಿದ್ಧ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದೆ. ಆದರೆ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ವರ್ಷವೂ ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರಳ ರೀತಿಯ ಆಚರಣೆಯನ್ನು ನಡೆಸಲು ಹಾಗೂ ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ನೀಡದಿರಲು ಕಂದಾಯ, ಪೊಲೀಸ್ ಮತ್ತು ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Mysore Dasara : 411ನೇ ಮೈಸೂರು ದಸರಾ ಉತ್ಸವಕ್ಕೆ ಚಾಲನೆ : ಯಾವ ಜನ್ಮದ ಪುಣ್ಯವೋ ಎಂದ ಎಸ್‌ಎಂಕೆ

ಕೊರೊನಾ ಹಿನ್ನೆಲೆಯಲ್ಲಿ ಭಕ್ತರರಿಗೆ ಪ್ರವೇಶವಕಾಶ ಕಲ್ಪಿಸಲಾಗುತ್ತಿಲ್ಲ, ಜತೆಗೆ ದೇಗುಲದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹೊರತಾಗಿ ಅವರ ಕುಟುಂಬಕ್ಕೆ ಪ್ರವೇಶ ಇರುವುದಿಲ್ಲ. ಶಾಂತಿಯುತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ತಲಕಾವೇರಿ ತೀರ್ಥೋದ್ಭವ : ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿದ ಸರಕಾರ

(Hassanamba devotees are let down: this time there is no access to the public)

RELATED ARTICLES

Most Popular