ದಸರಾ ಸಂಭ್ರಮ: ಗೊಂಬೆ ಹಬ್ಬದ ಮೆರುಗು ಹೆಚ್ಚಿಸುವ ಕಲಾ ಕೌಶಲ್ಯ, ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಮಾರಾಟ ಮೇಳ

ಬೆಂಗಳೂರು: ನವರಾತ್ರಿ ಹಾಗೂ ದಸರಾ ಪ್ರಯುಕ್ತ ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಅಕ್ಟೋಬರ್ 8ರಿಂದ 17ರವರೆಗೆ ಗೊಂಬೆಗಳು ಹಾಗೂ ವಿವಿಧ ಆಲಂಕಾರಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ಕರಕುಶಲಕರ್ಮಿಗಳು ಈ ಮೇಳದಲ್ಲಿ ತಮ್ಮ ಕಲಾ ಪ್ರದರ್ಶನ ನಡೆಸುತ್ತಿದ್ದಾರೆ. ಬಗೆಬಗೆಯ ದಸರಾ ಗೊಂಬೆಗಳು ಮೇಳದ ಪ್ರಮುಖ ಆಕರ್ಷಣೆ ಎನಿಸಿದೆ.

ಚಿತ್ತಾರ ಹಾಗೂ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಸಹಯೋಗದಲ್ಲಿ ನಡೆಯುತ್ತಿರುವ ಈ ಮಾರಾಟ ಮೇಳದಲ್ಲಿ ದಸರಾ ಆಲಂಕಾರಕ್ಕೆ ಬೇಕಾಗಿರುವ ವಿಶೇಷ ಗೊಂಬೆಗಳು ಹಾಗೂ ಇನ್ನಿತರ ವಸ್ತುಗಳು ಲಭ್ಯ. ಪ್ರತಿ ದಸರಾ ಸಂಧರ್ಭದಲ್ಲೂ ತಮ್ಮ ಬೊಂಬೆಗಳ ಸಂಗ್ರಹಕ್ಕೆ ಹೊಸಹೊಸತು ಸೇರ್ಪಡೆ ಮಾಡುವುದು ಹಲವರಿಗೆ ಇಷ್ಟ. ಕೆಲವರು ಪ್ರತಿ ವರ್ಷ ಹೊಸ ಥೀಮ್‌ಗಳನ್ನು ಜೋಡಿಸುತ್ತಾರೆ. ಇಂಥ ಆಸಕ್ತಿಗೆ ಪುಷ್ಟಿ ಕೊಡುವಂತೆ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗುವ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ಅ.8ರಿಂದ 17ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ‌ ಇಂಡಿಯನ್‌ ಆರ್ಟಿಸನ್ಸ್‌ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಮರ ಮತ್ತು ಲೋಹದ ಗೊಂಬೆಗಳು

ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಗೊಂಬೆಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ.

ಗೊಂಬೆ ನವಿಲು

ಮೇಳದಲ್ಲಿ 80ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿವೆ.

ಕಾರ್ಯಕ್ರಮ ವಿವರ: ದಸರಾ ಗೊಂಬೆಗಳು ಮತ್ತು ಇತರ ಕಲಾಕೃತಿಗಳ ಪ್ರದರ್ಶನ, ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಬೆಂಗಳೂರು. ಸಮಯ: ಬೆಳಿಗ್ಗೆ 11ರಿಂದ ಸಂಜೆ 7, ಪ್ರವೇಶ ಉಚಿತ.

ಮೀನಿಯೇಚರ್ ಶೈಲಿಯಲ್ಲಿ ಸೈಕಲ್ ಮತ್ತು ಮೊಪೆಡ್

Dasara Special Doll Exhibition in Chitrakala Parishat Bengaluru

ಆನೆ ಬಂತು ಆನೆ… ಮರದ ಕಲಾಕೃತಿಗಳು

ಇದನ್ನೂ ಓದಿ: Mysore Dasara : 411ನೇ ಮೈಸೂರು ದಸರಾ ಉತ್ಸವಕ್ಕೆ ಚಾಲನೆ : ಯಾವ ಜನ್ಮದ ಪುಣ್ಯವೋ ಎಂದ ಎಸ್‌ಎಂಕೆ
ಇದನ್ನೂ ಓದಿ: Dussehra Holiday : ಅಕ್ಟೋಬರ್ 11 -16ರ ವರೆಗೆ ಕರ್ನಾಟಕ ಹೈಕೋರ್ಟ್ ಗೆ ದಸರಾ ರಜೆ

Comments are closed.