ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ : ಪುನೀತ್ ಸಾವಿನ ಬೆನ್ನಲ್ಲೇ ಹೃದಯ ತಪಾಸಣೆಗೆ ಮುಗಿಬಿದ್ದ ಬೆಂಗಳೂರು ಜನ

ಬೆಂಗಳೂರು :  ನಟ  ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನರಾದ ಬಳಿಕ  ಜನರಲ್ಲಿ ತಮ್ಮ ಆರೋಗ್ಯದ ಕಾಳಜಿ ಹೆಚ್ಚಾಗಿದೆ.  ಬೆಂಗಳೂರು ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ಹೃದಯ ಸಂಬಂಧಿ ತಪಾಸಣೆಗೆ ಶೇಕಡಾ 25 ರಷ್ಟು ಜನರು ಬರುವುದು ಹೆಚ್ಚಾಗಿದೆ. ಈಗ ದಿನಕ್ಕೆ 1500 ರಷ್ಟು ಮಂದಿ ಬರುತ್ತಿದ್ದಾರೆ. ಈ ಕುರಿತಂತೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದಂತ ಡಾ|| ಸಿ.ಎನ್. ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪುನೀತ್ ರಾಜ್‍ಕುಮಾರ್ ಮೃತರಾದ ಘಟನೆ ಹೆಚ್ಚಿನ ಜನರಿಗೆ ಸಿಡಿಲು ಬಡಿದಂತ ಅನುಭವವಾಗಿದೆ. ಅಲ್ಲದೇ ಈ ಹಿಂದೆ ಕನ್ನಡ ಚಿತ್ರ ರಂಗದ ಇನ್ನೊಬ್ಬ ನಟ ಚಿರಂಜೀವಿ ಸರ್ಜ ಕೂಡ ಹೃದಯಾಘಾತದಿಂದ ಮೃತರಾಗಿದ್ದರು ಇವರಿಬ್ಬರು ಹೆಚ್ಚು ವಯಸ್ಸಾಗದೆ, ಯಾವ ಮುನ್ಸೂಚನೆಯೂ ಇಲ್ಲದೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಇವೆರಡು ಅರಗಿಸಲಾಗದ ಸತ್ಯವಾದರೂ ಕೂಡ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ. ನಿನ್ನೇ ಇದ್ದವರು ಇವತ್ತು ಇಲ್ಲಾ ಎನ್ನುವ ಕಟು ಸತ್ಯವನ್ನು ಯಾರೂ ಊಹಿಸಿರಲಿಲ್ಲಾ.

ಇದನ್ನೂ ಓದಿ: Big Shock : ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ರದ್ದು

ಇವರಿಬ್ಬರ ಸಾವು ಹೆಚ್ಚಿನ ಜನರನ್ನು ಭಯದ ರೂಪದಲ್ಲಿ ಕಾಡುತ್ತಿದೆ ಇದರಿಂದಲೇ ಹೆಚ್ಚಿನ ಜನರು ಆಸ್ಪತ್ರೆಗೆ ದಾವಿಸಿ ಹೃದಕ್ಕೆ  ಸಂಭಂದಿಸಿದ ಹೆಚ್ಚಿನ ಚೆಕಪ್ ಗಳನನ್ನು ಮಾಡಿಸುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಕುಟುಂಬಸ್ತರು ತಮ್ಮ ಮನೆಯವರನ್ನು ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ವತ್ತಾಯಿಸುತ್ತಿದ್ದಾರೆ. ಇದರಿಂದ ಬೆಂಗಳೂರು ಹಾಗೂ ಮೈಸೂರು  ನಗರದ ಹಲವು ಆಸ್ಪತ್ರೆಗಳಲ್ಲಿ ಹೃದಯ ಸಂಭಂದಿ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದಂತ ಡಾ|| ಸಿ, ಎನ್. ಮಂಜುನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿ : ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿದ ಪತಿ !

(Heart attack at a young age: Bengaluru people get heart check-up after Puneet’s death)

Comments are closed.