2 Models death : ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ತಿರುವನಂತಪುರಂ : 2019 ಸಾಲಿನ ಮಿಸ್‌ ಕೇರಳ ಪ್ರಶಸ್ತಿ ವಿಜೇತೆ ಆನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನ ಶಾಜನ್‌ ಅಕ್ಟೋಬರ್‌ 31ರ ಮಧ್ಯರಾತ್ರಿ ವೈಟ್ವಿಲಾ-ಪಾಲಾರಿವಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದು  ನಂತರ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ  ಆನ್ಸಿ ಕಬೀರ್‌ ಮತ್ತು ಅಂಜಾನ ಶಾಜನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಳುಗಳನ್ನು ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಅಪಘಾತ : ಮೂವರು ರೈತ ಮಹಿಳೆಯರ ಸಾವು

ಆನ್ಸಿ ಕಬೀರ್‌ ಮತ್ತು ಅಂಜಾನ ಶಾಜನ್‌ ಶವಗಳನ್ನು ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಾಡೆಲಿಂಗ್‌ ಫೋಟೊ ಸೇಷನ್‌ಗಾಗಿ ಆನ್ಸಿ ಕಬೀರ್‌ ತಿರುವನಂತಪುರಂ ನಿಂದ ಮತ್ತು ಅಂಜಾನ ಶಾಜನ್‌ ತ್ರಿಶೂರ್‌ ನಿಂದ ತಮ್ಮ ತಮ್ಮ ಊರುಗಳಿಂದ ಕೊಟ್ಟಿಗೆ ಬಂದಿದ್ದರು. ನಂತರ ತ್ರಿಶೂರ್ ಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಕಾರು ಢಿಕ್ಕಿ ಹೊಡೆದ ರಭಸಕ್ಕೆ ಕಾರು ಗುರುತು ಹಿಡಿಯಲಾಗದಷ್ಟು ನುಜ್ಜುಗುಜ್ಜಾಗಿದೆ. ಮಾಜಿ ಮಿಸ್‌ ಕೇರಳ ಆನ್ಸಿ ಕಬೀರ್‌ ಮೃತಪಟ್ಟ ಘಟನೆ ಕೇಳಿ ಅವರ ತಾಯಿ ರಸೀನ ಕುಸಿದು ಬಿದ್ದಿದ್ದಾರೆ. ಇವರನ್ನು ತಿರುವನಂತಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಆನ್ಸಿ ಕಬೀರ್‌ ತಮ್ಮ ಕೊನೆಯ ಪೋಸ್ಟ್‌ ಅಲ್ಲಿ ʼಹೋಗುವ ಹೊತ್ತಾಯ್ತುʼ ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ

(Miss Kerala Ansi Kabir and runner-up Anjana Shajan killed in fatal accident)

Comments are closed.