ಭಾನುವಾರ, ಏಪ್ರಿಲ್ 27, 2025
Homeeducationಶಾಲಾ ಪಠ್ಯಕ್ರಮ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು ?

ಶಾಲಾ ಪಠ್ಯಕ್ರಮ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು ?

- Advertisement -

ಶಿವಮ್ಮೊಗ್ಗ : ರಾಜ್ಯದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿದ್ದರೂ ಕೂಡ ಸಿಲೆಬಸ್‌ ನಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ. ಪಠ್ಯ ಕ್ರಮವನ್ನು ಪೂರ್ಣಗೊಳಿಸಲು ರಜಾ ದಿನಗಳಲ್ಲಿ ತರಗತಿ ನಡೆಸುವ ಚಿಂತನೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.

ಶಿವಮ್ಮೊಗ್ಗದ ಮಲಗೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡದ ಸಚಿವ ನಾಗೇಶ್‌ ಅವರು,‌ ಮಾಧ್ಯಮದವರೊಂದಿಗೆ ಮಾತನಾಡಿ, ಕೊರೋನಾ ಸಾಂಕ್ರಾಮಿಕ ರೋಗದಿಂದ ಈಗ ತಾನೇ ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಇಷ್ಟು ದಿನ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ತರಗತಿಗಳು ನಡೆಯುತ್ತಿತ್ತು. ಮತ್ತೆ ಈಗ ಶಾಲಾ ಪ್ರಾರಂಭದಲ್ಲಿಯೇ ಪಠ್ಯ ಕ್ರಮವನ್ನು ಕಡಿತ ಗೊಳಿಸುವ ನಿರ್ಧಾರವನ್ನು ತೆಗೆದು ಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: GOOD NEWS : ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ : ಮುಂಬಡ್ತಿ ಕುರಿತು ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ‌ ನಾಗೇಶ್

ಈಗ ಉಳಿದ ಸಮಯದಲ್ಲೇ ಸಿಲೆಬಸ್‌ ಅನ್ನು ಪೂರ್ಣಗೊಳಿಸಲಾಗುವುದು. ಪರೀಕ್ಷಾ ಸಂಧರ್ಭಕ್ಕೆ ಅನುಗುಣವಾಗಿ ಪಠ್ಯಕ್ರಮದ ಕಡಿತದ ವಿಷಯದ ಕುರಿತು ಡಿಸೆಂಬರ್‌ ತಿಂಗಳಲ್ಲಿ ತಜ್ಞರ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಮಾತ್ರ ಪರೀಕ್ಷೆಗಾಗಿ ಸಿಲೆಬಸ್‌ ಕಡಿತ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದರು.

ಇದನ್ನೂ ಓದಿ: CCI : ಶಿಶುಪಾಲನಾ ಸಂಸ್ಥೆಗಳಲ್ಲಿ‌ ಇನ್ನು ಸೆಲೆಬ್ರಿಟಿಗಳ ಹುಟ್ಟುಹಬ್ಬ ಆಚರಿಸುವಂತಿಲ್ಲ : ರಾಜ್ಯ ಸರಕಾರದ‌‌ ಆದೇಶ

(School curriculum cut: What did Education Minister B.C. Nagesh say?)

RELATED ARTICLES

Most Popular