ಬೆಂಗಳೂರು : ಸತತವಾಗಿ ಹಲವು ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಜನರು ಕಂಗೆಟ್ಟು ಹೋಗಿದ್ದರು. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಗೆ ಬೆಲೆ ಕಡಿಮೆ ಮಾಡಿದ ಬೆನ್ನಲೇ ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಕಡಿಮೆ ಮಾಡಿ ಗುಡ್ ನ್ಯೂಸ್ ಕೊಟ್ಟಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ 10 ರೂ ಹಾಗೂ ಡೀಸಿಲ್ ಬೆಲೆ 5 ರೂ ಕಡಿಮೆ ಮಾಡಿತ್ತು. ಇದಾದ ಬಳಿಕ ಕರ್ನಾಟಕ ಸರ್ಕಾರವು ತೈಲ ಬೆಲೆ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರ್ಧಾರವನ್ನು ಪ್ರಕಟಿಸಿದ್ದರು. ರಾಜ್ಯ ಸರ್ಕಾರವು ಪೆಟ್ರೋಲ್ ಮಾರಾಟ ತೆರಿಗೆ 35% ದಿಂದ 25% ಕ್ಕೆ ಹಾಗೂ ಡೀಸಿಲ್ ಮಾರಾಟ ತೆರಿಗೆ 24% ದಿಂದ 14.34% ಕ್ಕೆ ಇಳಿಸಿವೆ.
ನವೆಂಬರ್ 3 ರಂದು ಇದ್ದ ಪೆಟ್ರೋಲ್‌ನ ಬೆಲೆಯು 113.93 ರೂಪಾಯಿ ಇಂದ 100.63 ರೂಪಾಯಿಗೆ ಬಂದಿದೆ. ಕಡಿತವಾದ ಬೆಲೆ 13.30 ರೂಪಾಯಿ ಆಗಲಿದೆ. ಇನ್ನೂ ನವೆಂಬರ್ 3 ರಂದು ಇದ್ದ ಡೀಸೆಲ್ ನ ಮಾರಾಟ ಬೆಲೆಯು 104.50 ರೂಪಾಯಿಯಿಂದ 85.03 ರೂಪಾಯಿಗೆ ಇಳಿಕೆ ಆಗಲಿದೆ. 19.47 ರೂಪಾಯಿ ಬೆಲೆ ಕಡಿತವಾಗಲಿದೆ.
(Today Petrol price : State Govt gives good news to people of Karnataka: Petrol, diesel prices fall)