ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನೂರಿಗೆ ಬಸ್ ಸಂಪರ್ಕ ಪಡೆದ 8 ನೇ ತರಗತಿ ಬಾಲಕಿ !

ಹೈದ್ರಾಬಾದ್ : ಕೋವಿಡ್‌ ಸಾಂಕ್ರಾಮಿಕ ರೋಗದ ನಂತರದಲ್ಲಿ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಂಡಿವೆ. ಆದರೆ ಬಹುತೇಕ ಗ್ರಾಮಗಳಲ್ಲಿ ಬಸ್‌ ಸೌಕರ್ಯ ಆರಂಭವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಇದೀಗ ಎಂಟನೇ ತರಗತಿ ವಿದ್ಯಾರ್ಥಿನಿಯೋರ್ವಳು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ತನ್ನೂರಿಗೆ ಬಸ್‌ ಸೌಕರ್ಯವನ್ನು ಕಲ್ಪಿಸಿಕೊಂಡಿದ್ದಾರೆ.

ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಗ್ರಾಮದಲ್ಲಿ ಕೊರೊನಾ ವೈರಸ್‌ ಸೋಂಕಿನ ನಂತರ ಬಸ್‌ ಸಂಚರಿಸುತ್ತಿಲ್ಲ. ಈ ಕಾರಣದಿಂದ ಆ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಬಹಳ ಕಷ್ಟವಾಗುತ್ತಿತ್ತು. ನಂತರ ಅದೇ ಗ್ರಾಮದ 8 ನೇ ತರಗತಿ ಪುಟ್ಟ ಬಾಲಕಿ ಈ ಸಮಸ್ಯೆಯನ್ನು ಬಗೆಹರಿಸಿದ್ದಾಳೆ. ಪಿ. ವೈಷ್ಣವಿ ಭಾರತದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಗೆ ಪತ್ರ ಬರೆದಿದ್ದಾಳೆ.

ಇದನ್ನೂ ಓದಿ: PM Modi- Soldiers Diwali : ಸೈನಿಕರೊಂದಿಗೆ ದೀಪಗಳ ಹಬ್ಬವನ್ನು ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ಕೊರೊನಾದಿಂದ ನನ್ನ ತಂದೆ ಸಾವನ್ನಪ್ಪಿದ್ದಾರೆ. ಅಂದಿನಿಂದಲೂ ನನ್ನ ತಾಯಿಯೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ನಾವು ಶಾಲೆ, ಕಾಲೇಜಿಗೆ ಹೋಗಬೇಕೆಂದರೆ 18 ಕಿ.ಮೀ ದೂರವನ್ನು ಕ್ರಮಿಸಿ ನಂತರ ಶಾಲೆಗೆ ತೆರಳಬೇಕು. ಈಗ ಶಾಲೆಗೆ ತೆರಳಲು ದಿನಕ್ಕೆ ಆಟೋಗೆ 150 ರೂ ಖರ್ಚು ಮಾಡಬೇಕಾಗಿದೆ. ನಮ್ಮ ಊರಿನ ಬಹುತೇಕ ಮಕ್ಕಳು ಈ ಕಾರಣದಿಂದ ಶಾಲಾ- ಕಾಲೇಜಿಗೆ ಹೋಗದೆ ಮನೆಯಲ್ಲಿದ್ದಾರೆ.

ಈ ರೀತಿಯಾಗಿ ಪತ್ರ ಬರೆದು ಪಿ. ವೈಷ್ಣವಿ ಭಾರತದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಯಾದ ಎಸ್‌.ವಿ. ರಮಣ್‌ ಅವರಿಗೆ ಪತ್ರವನ್ನು ಕಳುಹಿಸಿದ್ದಾಳೆ. ಈ ವಿಷಯದ ಕುರಿತು ಸಿಜೆಐ ಎನ್.ವಿ.ರಮಣ್‌ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ (ಟಿ ಎಸ್‌ ಆರ್‌ ಟಿ ಸಿ) ಪತ್ರವನ್ನು ಕಳುಹಿಸಿದ್ದಾರೆ. ಬಳಿಕ ರಂಗಾ ರೆಡ್ಡಿ ಗ್ರಾಮಕ್ಕೆ ಬಸ್‌ ವ್ಯವಸ್ಥೆಯನ್ನು ಪುನಃ ಪ್ರಾರಂಭಿಸಲಾಯಿತು.

ಇದನ್ನೂ ಓದಿ: ನ್ಯಾಯಾಧೀಶರಿಂದ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ

ರಂಗಾ ರೆಡ್ಡಿ ಜಿಲ್ಲೆಯ ಮಂಚಾಲ್‌ ಮಂಡಲದ ಚಿಡೇಡು ಗ್ರಾಮದಲ್ಲಿ ವಾಸವಾಗಿರುವ ವೈಷ್ಣವಿ ತಮ್ಮ ಸ್ನೇಹಿತರು ಮತ್ತು ಇತರ ಗ್ರಾಮಸ್ಥರು ಸಹ ಬಸ್‌ ಸೇವೆಯಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಅವಳ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಮಕ್ಕಳ ಶಿಕ್ಷಣದ ಹಕ್ಕನ್ನು ಗೌರವಿಸಲು ಬಸ್‌ ಸೇವೆಯನ್ನು ಮರು ಸ್ಥಾಪಿಸುವಂತೆ ಟಿ ಎಸ್‌ ಆರ್‌ ಟಿ ಸಿ ಯ ಎಂ.ಡಿ ವಿ.ಸಿ. ಸಜ್ಜನರ್‌ ಅವರಿಗೆ ಸೂಚಿಸಿದ್ದಾರೆ ಎಂದು ಟಿ ಎಸ್‌ ಆರ್‌ ಟಿ ಸಿ ತಿಳಿಸಿದೆ.

(8th standard girl writes to Chief Justice and gets bus connection to her hometown!)

Comments are closed.