Statue of prosperity: ‘World Book of Records’ ಸೇರಿದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ..!

ಬೆಂಗಳೂರು: Statue of prosperity: ವಿಶ್ವದ ಪ್ರಥಮ ಹಾಗೂ ಅತ್ಯಂತ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ವಲ್ರ್ಡ್ ಬುಕ್ ಆಫ್ ರೆಕಾರ್ಡ್ ಸೇರಿದೆ. ಬರೋಬ್ಬರಿ 84 ಕೋಟಿ ರೂ.ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಇದಾಗಿದೆ.

ಇದನ್ನೂ ಓದಿ: Jarakiholi controversy: ‘ಹಿಂದೂ ಪದದ ಅರ್ಥ ಅಶ್ಲೀಲ’ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ; ತನಿಖಾ ತಂಡ ರಚನೆಗೆ ಸಿಎಂರಲ್ಲಿ ಮನವಿ

ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆ ಪೈಕಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ ಉದ್ಘಾಟನೆ ಕಾರ್ಯಕ್ರಮವೂ ಸೇರಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಅಂತೆಯೇ ಪ್ರತಿಮೆಯ ಮುಂಭಾಗದಲ್ಲಿ ಸುಮಾರು 3 ಎಕರೆ ಜಾಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ತಲೆ ಎತ್ತಲಿದೆ. ಈ ಮೂಲಕ ಕೆಂಪೇಗೌಡರ ಜೀವನ ಚರಿತ್ರೆ, ಆಡಳಿತ ವೈಖರಿ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡಿದೆ.

ಅಂದಹಾಗೆ ನ.11ರಂದು ಲೋಕಾರ್ಪಣೆಗೆ ಸಿದ್ಧಗೊಂಡಿರುವ ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಗತಿಯ ಪ್ರತಿಮೆ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದ್ದು, ನಗರ ಸ್ಥಾಪಕರ ವಿಭಾಗದಲ್ಲಿ ಪ್ರಥಮ ಹಾಗೂ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರತಿಮೆ 108 ಅಡಿ ಎತ್ತರವಿದ್ದು, 4 ಟನ್ ತೂಕದ(4 ಸಾವಿರ ಕೆಜಿ) ಖಡ್ಗವನ್ನು ಕೆಂಪೇಗೌಡರ ಕೈಗೆ ಅಳವಡಿಸಲಾಗಿದೆ. ಏಕತೆ ಪ್ರತಿಮೆ ಮಾಡಿದ್ದ ರಾಮ್ ಸುತಾರ್ ಕ್ರಿಯೇಷನ್ಸ್ ಅವರಿಂದ ಪ್ರತಿಮೆಯ ನಿರ್ಮಾಣ ಹಾಗೂ ವಿನ್ಯಾಸ ಮಾಡಲಾಗಿದೆ.

ಇದನ್ನೂ ಓದಿ: PAK vs NZ T20 Semi-Final: ಟಿ20 ವಿಶ್ವಕಪ್ ಫೈನಲ್’ಗೆ ಪಾಕಿಸ್ತಾನ ಲಗ್ಗೆ, ಭಾನುವಾರ ನಡೆಯುತ್ತಾ ಭಾರತ Vs ಪಾಕ್ ಫೈನಲ್ ?

ಕಳೆದ 2008ರಲ್ಲಿ ದೇವನಹಳ್ಳಿ ಬಳಿ ಬೆಂಗಳೂರು ಇಂಟರ್ ನ್ಯಾಷನಲ್ ಏರ್‍ಪೋರ್ಟ್ ಸ್ಥಾಪನೆಗೊಂಡ ಬಳಿಕ ಏರ್ ಪೋರ್ಟ್‍ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲಾಗಿತ್ತು. ಇದೀಗ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಕೆಂಪೇಗೌಡರ ಬಗ್ಗೆ ಪರಿಚಯಿಸಲು ಈ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

Statue of prosperity:108 feet Kempegowda Statue, To Be The 1st Tallest Bronze Statue Of A City Founder

Comments are closed.