postpone hijab case : ಹಿಜಾಬ್ ಪ್ರಕರಣದಲ್ಲಿ ಅಚ್ಚರಿಯ ಬೆಳವಣಿಗೆ : ವಿಚಾರಣೆ ಮುಂದೂಡಲು ಹೈಕೋರ್ಟ್ ಗೆ ವಿದ್ಯಾರ್ಥಿನಿಯರ ಮನವಿ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿ ಸಂಚಲನ‌ ಮೂಡಿಸಿರುವ ಹಿಜಾಬ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಹೈಕೋರ್ಟ್ ತ್ರೀಸದಸ್ಯ ಪೀಠದ ಎದುರು ವಿಚಾರಣೆ ಹಂತದಲ್ಲಿರೋ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ ಎಂದು ಅರ್ಜಿದಾರ ವಿದ್ಯಾರ್ಥಿನಿಯರು ಅಭಿಪ್ರಾಯಿಸಿದ್ದು, ಅದಕ್ಕಾಗಿ ಅರ್ಜಿ‌ವಿಚಾರಣೆಯನ್ನು ಮುಂದೂಡುವಂತೆ (postpone hijab case) ಹೈಕೋರ್ಟ್ ಎದುರು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಆರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ತಮ್ಮ ಧಾರ್ಮಿಕ ಹಕ್ಕು. ಅದನ್ನು ತರಗತಿಯಲ್ಲೂ ಧರಿಸಲು ಅವಕಾಶ ನೀಡಬೇಕೆಂದು ವಾದಿಸಿದ್ದರು. ಇದಕ್ಕೆ ಅವಕಾಶ ನೀಡದ ಕಾಲೇಜು ಅಡಳಿತ ಮಂಡಳಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಮೊದಲು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಬಳಿಕ ಇದಕ್ಕೆ ವಿಸ್ಕೃತ ಪೀಠವೇ ಸೂಕ್ತವೆಂದು ಅಭಿಪ್ರಾಯಿಸಿತ್ತು.

ಬಳಿಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಖಾಜಿ ಹಾಗೂ ಕೃಷ್ಣ ದೀಕ್ಷಿತ್ ಸಮ್ಮುಖದಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಈ‌ ಮಧ್ಯೆ ವಸ್ತ್ರ ಸಂಹಿತೆ ವಿವಾದದ ವಿಚಾರಣೆಯನ್ನು ಮುಂದೂಡುವಂತೆ ಹಿಜಾಬ್ ಅರ್ಜಿದಾರ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆ ನಡೆಸುವುದು ಬೇಡ. ಪಂಚ ರಾಜ್ಯ ಚುನಾವಣೆ ನಡೆದ ಬಳಿಕ ಪ್ರಕರಣದ ವಿಚಾರಣೆ ನಡೆಸಿ ಎಂದು ನ್ಯಾಯಾಲಯಕ್ಕೆ ಅರ್ಜಿದಾರ ಪರ ವಕೀಲರು ಮನವಿ ಮಾಡಿದ್ದಾರೆ. ನಮ್ಮ ಧರ್ಮದ ಹಕ್ಕಿಗಾಗಿ‌ನಾವು ನಡೆಸುತ್ತಿರುವ ಹೋರಾಟ ಈಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಇಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆ ಪಂಚ ರಾಜ್ಯ ಚುನಾವಣೆ ಮೇಲೆ ಪರಿಣಾಮ ಬೀರುತ್ತಿದೆ. ಧರ್ಮದ ಲೆಕ್ಕಾಚಾರ, ರಾಜಕೀಯ ಲೆಕ್ಕಾಚಾರಗಳಿಗೆ ನಮ್ಮ ಹೋರಾಟವನ್ನು ಬಳಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಈ ಸಂದರ್ಭದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಬೇಡ. ಫೆ.28 ರ ಬಳಿಕ ಅರ್ಜಿ ವಿಚಾರಣೆ ನಡೆಸಿ ಎಂದು ಅರ್ಜಿದಾರ ವಿದ್ಯಾರ್ಥಿನಿಯರ ಪರ ಮೊಹಮ್ಮದ್ ತಾಹೀರ್ ನ್ಯಾಯಾಲಯಕ್ಕೆ ಮನವಿ‌ ಮಾಡಿದ್ದಾರೆ. ಆದರೆ ಸದ್ಯ ನ್ಯಾಯಾಲಯ ಈ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ, ಸೂಚನೆ, ಆದೇಶ ನೀಡಿಲ್ಲ. ಒಟ್ಟಿನಲ್ಲಿ ರಾಜ್ಯದ ಶಾಲೆಗಳು, ಕಾಲೇಜುಗಳು ಈಗ ಕೇಸರಿ ಹಾಗೂ ಹಿಜಾಬ್ ನಡುವಿನ ಫೈಟ್ ಗೆ ವೇದಿಕೆಯಾಗಿದ್ದು, ನ್ಯಾಯಾಲಯ ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡುವ ನೀರಿಕ್ಷೆ ಇದೆ.

ಇದನ್ನೂ ಓದಿ :  ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’

ಇದನ್ನೂ ಓದಿ : ನಾಳೆಯಿಂದ ಬಾಗಿಲು ತೆರೆಯಲಿದೆ ಕಾಲೇಜು : ಮಹತ್ವದ ಮಾಹಿತಿ ನೀಡಿದ ಸಚಿವ ಬಿ.ಸಿ.ನಾಗೇಶ್

(students appeal to High Court to postpone hijab case proceedings)

Comments are closed.