ಚಿತ್ರದುರ್ಗ : Swamiji of Muruga Math : ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿಯಲ್ಲಿ ಶ್ರೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರೀ ಭದ್ರತೆಯೊಂದಿಗೆ ಮುರುಘಾ ಶರಣರನ್ನು ಚಿತ್ರದುರ್ಗದ ಮಠಕ್ಕೆ ಕರೆದುಕೊಂಡು ಬರಲಾಗಿದೆ .
ಇನ್ನು ಭಾರಿ ಭದ್ರತೆಯೊಂದಿಗೆ ಮುರುಘಾ ಮಠಕ್ಕೆ ಮುರುಘಾ ಶರಣರು ಹಿಂದಿರುಗಿದ್ದಾರೆ. ಮಠಕ್ಕೆ ಸ್ವಾಮೀಜಿಗಳ ಕಾರು ಬರುತ್ತಿದ್ದಂತೆಯೇ ಭಕ್ತರು ಮುಗಿಬಿದ್ದಿದ್ದಾರೆ. ಭಾರೀ ಭದ್ರತೆಯೊಂದಿಗೆ ಪೊಲೀಸರು ಹಾವೇರಿಯಿಂದ ಚಿತ್ರದುರ್ಗಕ್ಕೆ ಮುರುಘಾ ಶರಣರನ್ನು ಕರೆತಂದಿದ್ದಾರೆ. ಎಲ್ಲಾ ವಿಚಾರಕ್ಕೂ ಸ್ವತಃ ಮುರುಘಾ ಶರಣರೇ ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.
ತಮ್ಮ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎದುರಾದ ಬಳಿಕ ಮುರುಘಾ ಶರಣರು ಸಾಕಷ್ಟು ಬಾರಿ ರಾಜಿ ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಅದು ಕೈಗೂಡದ ಹಿನ್ನೆಲೆಯಲ್ಲಿ ಅವರು ಇಂದು ಮುಂಜಾನೆಯೇ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಮಠದಿಂದ ಪಲಾಯನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಮತ್ತೊಂದು ಮೂಲಗಳ ಪ್ರಕಾರ ಮುರುಘಾ ಶ್ರೀಗಳು ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿಂದ ವಿದೇಶಕ್ಕೆ ಹಾರಲು ಪ್ಲಾನ್ ಮಾಡಿದ್ದಾರೆ ಎಂದೂ ಹೇಳಲಾಗಿತ್ತು.ಈ ಎಲ್ಲಾ ವದಂತಿಗಳ ಬಳಿಕ ಅಲರ್ಟ್ ಆಗಿದ್ದ ಪೊಲೀಸರು ಮುರುಘಾ ಶರಣರನ್ನು ಹಾವೇರಿಯಲ್ಲಿ ವಶಕ್ಕೆ ಪಡೆದು ಚಿತ್ರದುರ್ಗದ ಮಠಕ್ಕೆ ಕರೆದುಕೊಂಡು ಬಂದಿದ್ದಾರೆ.
ಈ ವಿಚಾರವಾಗಿ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಮುನ್ನ ಪ್ರತಿಕ್ರಿಯೆ ನೀಡಿದ ಮುರಘಾ ಮಠದ ಪರ ವಕೀಲರು, ಸ್ವಾಮೀಜಿಗಳು ಇನ್ನೇನು ಕೆಲವೇ ನಿಮಿಷಗಳಲ್ಲಿ ಮಠಕ್ಕೆ ಆಗಮಿಸಲಿದ್ದಾರೆ. ಅವರು ಎಲ್ಲಿಯೂ ಪಲಾಯನ ಮಾಡಬೇಕೆಂದು ಹಾವೇರಿಗೆ ತೆರಳಿರಲಿಲ್ಲ. ಮಠದ ಕಾರ್ಯಕ್ರಮದ ಪ್ರಯುಕ್ತ ಅವರು ಹಾವೇರಿಗೆ ಪ್ರಯಾಣ ಬೆಳೆಸಿದ್ದರು. ಅವರನ್ನು ಪೊಲೀಸರು ಬಂಧಿಸಿಲ್ಲ. ಅವರು ಮೇನ್ ರೋಡ್ನಲ್ಲಿದ್ದಾರೆ. ನೇರವಾಗಿ ಮಠಕ್ಕೆ ಬಂದು ನಿಮ್ಮೆಲ್ಲರ ಪ್ರಶ್ನೆಗಳಿಗೆ ಖುದ್ದು ಸ್ವಾಮೀಜಿಗಳೇ ಉತ್ತರ ನೀಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ : Muruga Swamiji in police custody :ಲೈಂಗಿಕ ದೌರ್ಜನ್ಯ ಪ್ರಕರಣ : ಮುರುಘಾ ಶರಣರು ಪೊಲೀಸ್ ವಶಕ್ಕೆ
Swamiji of Muruga Math returned to Math