Muruga Swamiji in police custody :ಲೈಂಗಿಕ ದೌರ್ಜನ್ಯ ಪ್ರಕರಣ : ಮುರುಘಾ ಶರಣರು ಪೊಲೀಸ್​ ವಶಕ್ಕೆ

ಹಾವೇರಿ : Muruga Swamiji in police custody : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಸಂಚಲನವನ್ನು ಸೃಷ್ಟಿಸಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಕೊನೆಗೂ ಮುರುಘಾ ಶರಣರನ್ನು ವಶಕ್ಕೆ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್​ ಗೇಟ್​ ಬಳಿಯಲ್ಲಿ ಶ್ರೀಗಳನ್ನು ಪೊಲೀಸರು ಬಂಧಿಸಿದ್ದು ಭಾರೀ ಭದ್ರತೆಯಿಂದ ಕರೆದಕೊಂಡು ಬರ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಮುರುಘಾ ಶರಣರು ಇನ್ನೇನು ವಿದೇಶಕ್ಕೆ ಹಾರುತ್ತಾರೆ ಎಂಬ ವದಂತಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದರು. ಇಂದು ಮುಂಜಾನೆಯಿಂದಲೇ ಮುರುಘಾ ಶರಣರು ಮಠದ ಆವರಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಲಿಂಗಾಯತ ಸಮುದಾಯದ ಮುಖಂಡ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಸಿ ವೀರೇಂದ್ರಪಪ್ಪಿ ನೇತೃತ್ವದಲ್ಲಿ ಬೆಳಗ್ಗಿನ ಜಾವ ಸುಮಾರಿಗೆ ಮುರಘಾ ಶರಣರು ಮಠದಿಂದ ನಂಬರ್ ಪ್ಲೇಟ್​ ಇಲ್ಲದ ಕ್ರೆಟಾ ಕಾರಿನಿಂದ ಮಠದಿಂದ ಎಸ್ಕೇಪ್​ ಆಗಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು.


ಪೊಲೀಸರ ಬಂಧನದ ಸಂದರ್ಭದಲ್ಲಿ ಮುರುಘಾ ಶರಣರು ಬಿಗ್​ಬಾಸ್​ ಖ್ಯಾತಿಯ ಗುರುಲಿಂಗ ಸ್ವಾಮೀಜಿಗಳ ಜೊತೆ ಇದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ . ಮುರಘಾ ಶ್ರೀಗಳು ಅಗಡಿ ಮಠದ ಶ್ರೀಗಳಾದ ಗುರುಲಿಂಗಸ್ವಾಮಿಗಳ ಜೊತೆ ಹೈವೆಯಲ್ಲಿ ಇದ್ದರು ಎನ್ನಲಾಗಿದೆ. ಅಗಡಿ ಮಠವು ಮುರುಘಾ ಮಠದ ಶಾಖಾ ಮಠವಾಗಿರುವ ಹಿನ್ನೆಲೆಯಲ್ಲಿ ಗುರುಲಿಂಗ ಸ್ವಾಮಿಗಳು ಇವರ ಜೊತೆ ಇದ್ದರು ಎನ್ನಲಾಗಿದೆ.


ಕೆಲವೇ ಕ್ಷಣಗಳಲ್ಲಿ ಮುರುಘಾ ಶರಣರನ್ನು ಪೊಲೀಸರು ಮಠಕ್ಕೆ ಕರೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಠದಲ್ಲಿ ಪೊಲೀಸ್​ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ, ಸ್ವಾಮೀಜಿಗಳ ಮೇಲೆ ಇಂತದ್ದೊಂದು ಆರೋಪ ಕೇಳಿ ಬಂದ ಬಳಿಕ ಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಭಕ್ತರು ತೊಂದರೆ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಠಕ್ಕೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.


ಒಂದು ಕಡೆ ಮುರುಘಾ ಶರಣರು ಮಹಾರಾಷ್ಟ್ರ ಅಥವಾ ಗೋವಾ ಕಡೆಗೆ ಪಲಾಯನ ಮಾಡಲು ಯತ್ನಿಸಿದ್ದರು ಎಂಬ ವದಂತಿಯಿದೆ . ಇಲ್ಲಿಂದ ಅವರು ವಿದೇಶಕ್ಕೆ ಹಾರಲು ಪ್ಲಾನ್​ ಮಾಡಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಆದರೆ ಅವರು ಕೇವಲ ವಕೀಲರನ್ನು ಭೇಟಿಯಾಗಲೆಂದು ಮಠದಿಂದ ಹೊರ ನಡೆದಿದ್ದರು ಎಂದು ಮಠದ ಸಿಬ್ಬಂದಿ ಹೇಳ್ತಿದ್ದಾರೆ. ಇದರಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಎಂಬುದು ಸೂಕ್ತ ತನಿಖೆ ಬಳಿಕ ತಿಳಿಯಬೇಕಿದೆ.

ಇದನ್ನು ಓದಿ : Muruga Mutt : ಗೋವಾಕ್ಕೆ ಪಲಾಯನ ಮಾಡಿದ್ರಾ ಮರುಘಾ ಶರಣರು : ನಂಬರ್​ಪ್ಲೇಟ್​ ಇಲ್ಲದ ಕಾರಿನಿಂದ ಎಸ್ಕೇಪ್​

ಇದನ್ನೂ ಓದಿ : Minister Umesh Katti : ಗಾಲ್ಫ್​​ ಮೈದಾನದಲ್ಲಿ ಬಗೆಹರಿಯದ ಚಿರತೆ ಸಮಸ್ಯೆ : ನನ್ನ ರಾಜೀನಾಮೆಯಿಂದ ಚಿರತೆ ಸಿಗುತ್ತೆ ಎಂದರೆ ನಾನು ಸಿದ್ಧ : ಸಚಿವ ಕತ್ತಿ

Sexual assault case: Muruga Swamiji in police custody

Comments are closed.