ಭಾನುವಾರ, ಏಪ್ರಿಲ್ 27, 2025
HomekarnatakaPanditharadhy Shivacharya Swamiji : ಪಠ್ಯಕ್ರಮ ಬದಲಿಸದಿದ್ದರೇ ಉಗ್ರ ಹೋರಾಟ: ಸಿಎಂಗೆ ಪತ್ರ ಬರೆದು ಎಚ್ಚರಿಸಿದ...

Panditharadhy Shivacharya Swamiji : ಪಠ್ಯಕ್ರಮ ಬದಲಿಸದಿದ್ದರೇ ಉಗ್ರ ಹೋರಾಟ: ಸಿಎಂಗೆ ಪತ್ರ ಬರೆದು ಎಚ್ಚರಿಸಿದ ಸಾಣೆಹಳ್ಳಿಶ್ರೀ

- Advertisement -

ಬೆಂಗಳೂರು : ಒಂದೆಡೆ ರೋಹಿತ್ ಚಕ್ರತೀರ್ಥ ತಮ್ಮ ನಡೆಯನ್ನು ಹಾಗೂ ಪಠ್ಯಪುಸ್ತಕ ಸಮಿತಿಯ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದರೇ, ಇನ್ನೊಂದೆಡೆ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ಈಗ ಬ್ರಾಹ್ಮಣ್ಯದ ಸ್ಪರ್ಶ ಪಡೆದುಕೊಂಡಿದೆ. ಒಂದೇ ಸಮಾಜದ ಸದಸ್ಯರಿದ್ದಾರೆ ಎಂದು ಹಲವರು ಅಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಸಾಣೆಹಳ್ಳಿ ಶಿವಾಚಾರ್ಯಶ್ರೀಗಳು (Panditharadhy Shivacharya Swamiji) ಅಸಮಧಾನ ವ್ಯಕ್ತಪಡಿಸಿದ್ದು, ಸಿಎಂಗೆ ಪತ್ರ ಬರೆದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಗೆ ಲಿಂಗಾಯತ ಮಠಾಧೀಶರ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂಗೆ ಎಚ್ಚರಿಕೆ ಪತ್ರ ಬರೆದ ಸಾಣೆಹಳ್ಳಿ ಶ್ರೀಗಳು ( Panditharadhy Shivacharya Swamiji ), ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ.ಶಿಕ್ಷಣ ತಜ್ಞರು, ಸಾಮಾಜಿಕ‌ ಕಾಳಜಿಯುಳ್ಳವರು ಪರಿಷ್ಕರಣ ಸಮಿತಿಯಲ್ಲಿ ಇರಬೇಕು. ಸಾಮಾಜಿಕ ಕಾಳಜಿಯುಳ್ಳ ಎಲ್ಲ ಸಮುದಾಯದ ಸದಸ್ಯರಿಗೆ, ತಜ್ಞರಿಗೆ ಅವಕಾಶ ನೀಡಬೇಕು. ಆದರೆ ಈ ಸಮಿತಿಯಲ್ಲಿ ಒಂದು ವರ್ಗದವರೇ ಇದ್ದಾರೆ. ಇದು ಮೇಲ್ನೋಟಕ್ಕೆ‌ ಬಹಳ‌ ಸ್ಪಷ್ಟವಾಗಿದೆ ಎಂದಿದ್ದಾರೆ.

ಅಲ್ಲದೇ ಪಠ್ಯದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಗಳು, 9 ನೇ ತರಗತಿಯಲ್ಲಿ ಬಸವಣ್ಣನವರ ಪಾಠವಿತ್ತು. ಈಗಲೂ ಪಾಠ ಇದೆ ಆದರೆ ಪ್ರಮುಖ ಸಾಲುಗಳನ್ನೇ ತೆಗೆಯಲಾಗಿದೆ. ಬಸವಣ್ಣ ಸಮಾಜ ಸುಧಾರಣೆಗೆ ಹೋರಾಡಿದವರು. ವೈದಿಕ ಧರ್ಮದ ಆಚರಣೆಗಳನ್ನ ಕಡಿಮೆ ಮಾಡಿದವರು. ಮೌಲ್ಯಾಧರಿತ ಸರಳ ವೀರಶೈವ ಸಿದ್ಧಾಂತ ಅಳವಡಿಸಿದವರು. ಜಾತಿ ವ್ಯವಸ್ಥೆಯ ಕಡು ವಿರೋಧಿಯಾಗಿದ್ದರು. ತಮ್ಮ ಯಜ್ಙೋಪವೀತವನ್ನೇ ಕಿತ್ತೆಸೆದವರು. ಕಿತ್ತೆಸೆದು ಅನುಭವ ಮಂಟಪದ ಕಡೆ ಹೊರಟವರು ಆದರೆ ಅವರಿಗೆ ಅವಮಾನ ವಾಗಿದೆ.

Text Book Contraversy Panditharadhy Shivacharya Swamiji Letter to CM 2

ಬಸವಣ್ಣ ಹಣ,ಅಧಿಕಾರ ಎಲ್ಲವನ್ನೂ ಬಿಟ್ಟವರು.ಸಮಾಜ ಸುಧಾರಣೆಗಾಗಿ ಶ್ರಮಿಸಿದವರು.ಈ ವಾಕ್ಯಗಳನ್ನೇ ಪಠ್ಯದಿಂದ ತೆಗೆಯಲಾಗಿದೆ. ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ.ತಕ್ಷಣ ಈ ಪಠ್ಯವನ್ನ ತಡೆಹಿಡಿಯಬೇಕು.ಇಲ್ಲವಾದರೆ ನಾಡಿನಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಪಂಡಿತಾರಾಧ್ಯ ಸಾಣೆಹಳ್ಳಿ ಜಗದ್ಗುರು ಶಿವಾಚಾರ್ಯರು ಎಚ್ಚರಿಕೆ ನೀಡಿದ್ದಾರೆ.

Text Book Contraversy Panditharadhy Shivacharya Swamiji Letter to CM 2

ಇನ್ನು ರಾಜ್ಯದಲ್ಲಿ ಪಠ್ಯಕ್ರಮದ ವಿರುದ್ಧ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ರೋಹಿತ್ ಚಕ್ರತೀರ್ಥರನ್ನು ಕೈಬಿಡುವಂತೆ ಹೋರಾಟ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಈ ಹೋರಾಟಗಳಿಗೆ ಈಗ ಮಠಾಧೀಶರುಗಳು ಬಲ ತುಂಬಲಾರಂಭಿಸಿದ್ದು, ಪಠ್ಯಪುಸ್ತಕ ಸಮಿತಿಯ ರಚನೆ, ಪಠ್ಯಗಳಲ್ಲಿ ಆದ ಬದಲಾವಣೆ ವಿರೋಧಿಸಿ ರಸ್ತೆಗಿಳಿದು ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಒಂದೆಡೆ ಹೊಸ ಪಠ್ಯಗಳು ಶಾಲೆಯನ್ನು ತಲುಪಿಲ್ಲ. ಇನ್ನೊಂದೆಡೆ ಪಠ್ಯಕ್ಕೆ ವಿರೋಧವೂ ತಪ್ಪಿಲ್ಲ. ಹೀಗಾಗಿ ಸರಕಾರ ಸಂದಿಗ್ಧಕ್ಕೆ ಸಿಲುಕಿದೆ.

ಇದನ್ನೂ ಓದಿ : ಸರ್ಕಾರಕ್ಕೆ ಸೆಡ್ಡು ಹೊಡೆದ ಮಾಜಿ ಸಚಿವ: ಕೆಪಿಎಸ್ ಸಿ ಮುಂದೆ ಸುರೇಶ್ ಕುಮಾರ್ ಪ್ರತಿಭಟನೆ

ಇದನ್ನೂ ಓದಿ : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್​ ಹಾಕಿದ ಆಸ್ಪತ್ರೆ ಸಿಬ್ಬಂದಿ

Text Book Contraversy Panditharadhy Shivacharya Swamiji Letter to CM

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular