CM Bommai hits back : ‘ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎನ್ನುವವರು ಮೂರ್ಖರು’ : ಸಿಎಂ ಬೊಮ್ಮಾಯಿ ತಿರುಗೇಟು

ಬಾಗಲಕೋಟೆ : CM Bommai hits back : ಪಿಎಫ್​ಐ ಬ್ಯಾನ್​ ವಿಚಾರವಾಗಿ ಕಾಂಗ್ರೆಸ್​ ನಾಯಕರ ಹೇಳಿಕೆಗಳಿಗೆ ಇಂದು ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷಗಳ ಟೀಕೆ, ಟಿಪ್ಪಣಿಗಳೇ ನನ್ನ ಯಶಸ್ಸಿನ ಮೆಟ್ಟಿಲು ಎಂದಿದ್ದಾರೆ. ಬಾಗಲಕೋಟೆಯ ಆಲಮಟ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ರೀತಿಯ ಹೇಳಿಕೆಗಳಿಂದ ಕಾಂಗ್ರೆಸ್​ಗೆ ಲಾಭವಾಗಲ್ಲ. ಬೇಳೆ ಬೇಯಲ್ಲ. ಎಲೆಕ್ಷನ್​ ಅವಧಿಯಾಗಿರುವದರಿಂದ ಇನ್ನೂ ಜಾಸ್ತಿ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತವೆ. ಕಾಂಗ್ರೆಸ್​ ನಾಯಕರೇ ವಿಧಾನಸಭೆಯಲ್ಲಿ ಪಿಎಫ್​ಐ ಬ್ಯಾನ್​ ಮಾಡಿ ಎಂದು ಆಗ್ರಹಿಸಿದ್ದರು. ಸದನದ ಒಳಗಡೆ ಹಾಗೂ ಹೊರಗಡೆ ಬ್ಯಾನ್​ ಮಾಡಿ ಎಂದು ಕೂಗಿದ್ದರು. ಈಗ ಬ್ಯಾನ್​ ಮಾಡಿದ್ದೇವಲ್ಲ ಎಂದು ಹೇಳಿದ್ದಾರೆ.

ಹತ್ತು ಹಲವಾರು ವರ್ಷಗಳಿಂದ ಈ ಸಂಘಟನೆಗಳು ಏನೇನೋ ದೇಶದ್ರೋಹದ ಕೆಲಸವನ್ನು ಮಾಡಿದ್ದವು. ಹವಾಲಾದಿಂದ ದುಡ್ಡು ತಂದಿದ್ದರು. ಹೊರಗಡೆಯಿಂದ ಭಯೋತ್ಪಾದನೆ ನಡೆಸಲು ಟ್ರೇನಿಂಗ್​ ಪಡೆದುಕೊಂಡು ಬರುತ್ತಿದ್ದರು. ಇವರು ಭಯೋತ್ಪಾದನೆಯಲ್ಲಿ ಏನೆಲ್ಲ ಕೆಲಸ ಮಾಡಿದ್ದಾರೆ ಅನ್ನೋದು ಸಾಕ್ಷಿ ಸಮೇತವಾಗಿ ತಿಳಿದ ಬಳಿಕವೇ ವ್ಯವಸ್ಥಿತವಾಗಿ ಅವರನ್ನು ಬ್ಯಾನ್​ ಮಾಡಿದ್ದೇವೆ ಎಂದು ಹೇಳಿದರು.

ಆರ್​ಎಸ್​ಎಸ್​ ಹಾಗೂ ಭಜರಂಗದಳವನ್ನು ಏಕೆ ಬ್ಯಾನ್​ ಮಾಡಿಲ್ಲ ಎಂಬ ಕಾಂಗ್ರೆಸ್​ ನಾಯಕರ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಅವರು, ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎಂಬುದು ಮೂರ್ಖತನದ ವಿಚಾರ. ದೇಶಭಕ್ತಿಯ ಸಂಘಟನೆಯೊಂದನ್ನು ಪಿಎಫ್​ಐಗೆ ಹೋಲಿಕೆ ಮಾಡುವುದು ಸರಿಯಲ್ಲ. ಯಾರಿಗೆ ಪಿಎಫ್​ಐ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೋ ಅವರೆಲ್ಲ ಈ ರೀತಿಯ ಬೇಡಿಕೆ ಇಡ್ತಿದ್ದಾರೆ ಎಂದು ಕುಹಕವಾಡಿದ್ದಾರೆ.

ರಾಹುಲ್ ಗಾಂಧಿ ಭಾರತ್​ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ವಿಚಾರವಾಗಿ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ ಸಿಎಂ ಬೊಮ್ಮಾಯಿ, ರಾಜ್ಯಕ್ಕೆ ಬೇಕಾಗಿರುವ ಯುಕೆಪಿ ಯೋಜನೆಗಾಗಿ ನಾನು ಬಂದಿರುವೆ.ಈ ಸಂದರ್ಭದಲ್ಲಿ ನಾನು ರಾಜಕಾರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.

ಇದನ್ನು ಓದಿ : Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು

ಇದನ್ನೂ ಓದಿ : Shobha Karandlaje:ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್​​ನಿಂದ ಆರ್​ಎಸ್​ಎಸ್​ ಬ್ಯಾನ್​ ಹೇಳಿಕೆ : ಶೋಭಾ ಕರಂದ್ಲಾಜೆ ಗುಡುಗು

‘Those who say ban RSS are fools CM Bommai hits back

Comments are closed.