ಸದ್ಯ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡ್ತಿರೋದು ಬೆಲೆ ಏರಿಕೆ. ಪೆಟ್ರೋಲ್ ನಿಂದ ಆರಂಭಿಸಿ ಅಡುಗೆ ಎಣ್ಣೆ, ವಾಹನ ಸೇರಿದಂತೆ ಎಲ್ಲದರ ದರ ಏರಿಕೆಯಾಯ್ತು. ಕೊನೆಗೆ ವಿದ್ಯುತ್ ದರವೂ ಆಯ್ತು ಈಗ ಹೊಟೇಲ್ ಊಟ (Hotel Food Price Hike) ತಿಂಡಿಯೂ ಕೈ ಸುಡಲಿದೆ.
ಹೌದು ಪೆಟ್ರೋಲ್, ಡಿಸೇಲ್ ಅಡುಗೆ ಎಣ್ಣೆ ದರ ಏರಿಕೆಯನ್ನು ಕಾರಣವಾಗಿಟ್ಟುಕೊಂಡು ಹೊಟೇಲ್ ಮಾಲೀಕರು ದರ ಏರಿಕೆಗೆ ನಿರ್ಧರಿಸಿದ್ದಾರೆ. ಕೊರೋನಾದಿಂದ ಕಳೆದ ಎರಡು ವರ್ಷದಿಂದ ಹೊಟೇಲ್ ಮಾಲೀಕರು ನಷ್ಟದಲ್ಲಿದ್ದರು. ಈಗ ನಿಧಾನಕ್ಕೆ ವ್ಯಾಪಾರ ಚೇತರಿಸಿಕೊಳ್ಳುತ್ತಿರುವಾಗ ಬೆಲೆ ಏರಿಕೆ ಬಿಸಿ ತುಪ್ಪವಾಗಿದೆ. ಹೀಗಾಗಿ ಇಂದು ಸಭೆ ನಡೆಸಿದ ಹೊಟೇಲ್ ಅಸೋಶಿಯೇಶನ್ ಸದಸ್ಯರು ಬೆಲೆ ಏರಿಕೆಗೆ ನಿರ್ಧರಿಸಿದ್ದಾರೆ.
ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ. ಈ ಬಗ್ಗೆ ವಿವರಣೆ ನೀಡಿರುವ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ.ರಾವ್, ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಶೇಕಡ 10ರಷ್ಟು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಬೇಕೆಂಬ ಇಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುತ್ತೇವೆ, ಬೆಂಗಳೂರಿನ ದರ್ಶಿನಿ ಹೋಟೆಲ್ ಗಳಲ್ಲಿಯೂ ಏರಿಕೆ ಆಗಲಿದೆ ತಿಂಡಿ ಊಟದ ದರ ಹೆಚ್ಚಳವಾಗುತ್ತದೆ ಎಂದಿದ್ದಾರೆ.
ಇನ್ನೂ ಹೋಟೆಲ್ ತಿಸಿಸುಗಳ ಸಧ್ಯದ ದರ ಎಷ್ಟಿದೆ, ಏರಿಕೆ ಆದ್ರೆ ಎಷ್ಟು ಆಗಬಹುದು ಅನ್ನೋ ಲೆಕ್ಕಾಚಾರ ಇಲ್ಲಿದೆ.
- ಒಂದು ಪ್ಲೇಟ್ ಪೂರಿ – 40 ರೂ ಇಂದ 45 ರೂಪಾಯಿ
- ಒಂದು ಉದ್ದಿನ ವಡೆ 20 ರೂ ಇಂದ – 25ರೂಪಾಯಿ
- ಒಂದು ಪ್ಲೇಟ್ ಇಡ್ಲಿ – 40 ರೂ ಇಂದ- 45 ರೂಪಾಯಿ
- ರೈಸ್ ಬಾತ್ – 40ರೂ ಇಂದ – 45 ರೂ
- ಚೌಚೌ ಬಾತ್ 40 ರೂ ಇಂದ – 45 ರೂ
- ಕಾಫೀ & ಟೀ ದರ 10 ರೂ ಇಂದ 15-18 ರೂ
- ಪ್ಲೇಟ್ ಮೀಲ್ಸ್ ಊಟ – 60 ರೂ ಇಂದ – 70 ರೂ
- ಫುಲ್ ಮೀಲ್ಸ್ – 80 ರೂ ಇಂದ – 90 ರೂ.
- ಪ್ರತೀ ಚಾಟ್ಸ್ ಮೇಲೂ 5 ರೂ. ಏರಿಕೆ
- ಗೋಬಿ ಮಂಚೂರಿ, ಪಾನಿಪೂರಿ, ಸಮೋಸ ಬೆಲೆ 5 ರಿಂದ 10 ರೂ ಹೆಚ್ಚಳವಾಗೋ ಸಾಧ್ಯತೆ ಇದೆ.
ಈಗಾಗಲೇ ಅಡುಗೆ ಅನಿಲ್ , ಅಡುಗೆ ಎಣ್ಣೆ ದರವೂ ಗಗನಮುಖಿಯಾಗಿದೆ. ಹೋಗಲಿ ಮನೆಯಲ್ಲಿ ಅಡುಗೆ ಮಾಡೋದು ಕಷ್ಟ ಕಷ್ಟ ಹೊಟೇಲ್ ಗೆ ಹೋಗೋಣ ಅಂದ್ರೆ ಇನ್ಮುಂದೇ ಹೊಟೇಲ್ ಊಟ ತಿಂಡಿಯೂ ಮಧ್ಯಮ ಮತ್ತು ಬಡ ಕೂಲಿ ಕಾರ್ಮಿಕರ ಕೈಗೆಟುಕೋದು ಕಷ್ಟ ಎಂಬಂತ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ
ಇದನ್ನೂ ಓದಿ : ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್ ರೂಲ್ಸ್
Today On words Hotel Food Price Hike in Karnataka