ಬೆಂಗಳೂರು : ( Traffic Rules Violation ) ನ್ಯಾಯಾಲಯದ ಸೂಚನೆಯಂತೆ ಸಂಚಾರಿ ಪೊಲೀಸರು ರಾಜ್ಯದಲ್ಲಿ ಟ್ರಾಫಿಕ್ ದಂಡ ಪಾವತಿಗೆ ಶೇಕಡಾ 50 ರಷ್ಟು ರಿಯಾಯತಿ ಘೋಷಿಸಿದ್ದಾರೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ತಿರೋ ವಾಹನ ಸವಾರರು ದಂಡ ಕಟ್ಟಲು ಮುಗಿಬೀಳ್ತಿದ್ದು, ಇದುವರೆಗೂ ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆಗೆ ದಾಖಲೆಯ ಮೊತ್ತ ಹರಿದು ಬಂದಿದೆ.
ಕಳೆದ ನಾಲ್ಕು ದಿನಗಳಿಂದ ವಾಹನ ಸವಾರರಿಗೆ ಭರ್ಜರಿ ಆಫರ್ ಸಿಕ್ಕಿದೆ. ಗೊತ್ತೋ ಗೊತ್ತಿಲ್ಲದೆಯೋ ಸಂಚಾರಿ ನಿಯಮ ಉಲ್ಲಂಘಿಸಿ ದುಬಾರಿ ದಂಡ ಕಟ್ಟೋಕೆ ಆಗದೇ ಒದ್ದಾಡತಾ ಇದ್ದವರಿಗೆ ಇಲಾಖೆ ಟ್ರಾಫಿಕ್ ದಂಡ ಪಾವತಿಗೆ 50 % ರಿಯಾಯಿತಿ ಹಿನ್ನೆಲೆ ನೀಡಿದೆ. ಈ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಾಹನ ಸವಾರರು ದಿನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿಸುತ್ತಿದ್ದು, ಇದುವರೆಗೂ ನಗರದ 8 ಲಕ್ಷ 68 ಸಾವಿರ 405 ಕೇಸ್ ಗಳ ವಿಲೇವಾರಿ ಆಗಿದೆ ಎಂದು ಟ್ರಾಫಿಕ್ ಸ್ಪೆಶಕ್ ಕಮೀಷನರ್ ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ. ಇದುವರೆಗೂ ವಾಹನ ಸವಾರರಿಂದ 25 ಕೋಟಿ 42 ಲಕ್ಷ 52 ಸಾವಿರಕ್ಕೂ ಅಧಿಕ ಮೊತ್ತದ ದಂಡ ಸಂಗ್ರಹ ಆಗಿದೆ ಎಂದು ಸಲೀಂ ಮಾಹಿತಿ ನೀಡಿದ್ದಾರೆ. ಅಲ್ಲದೇ ವಾಹನ ಸವಾರರಿಗೆ ದಂಡ ಪಾವತಿಸುವಲ್ಲಿ ಸಮಸ್ಯೆಗಳಿದ್ರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ನಲ್ಲಿ ಪರಿಶೀಲಿಸಲು ಸೂಚನ ನೀಡಿದ್ದಾರೆ.
ಸದ್ಯ ಈ 50 ಡಿಸ್ಕೌಂಟ್ ಅವಕಾಶ ಫೆಬ್ರವರಿ 11 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ವಾಹನ ಸವಾರರ ಸ್ಪಂದನೆ ನೋಡಿಕೊಂಡು ಕಾಲಾವಧಿಯನ್ನ ವಿಸ್ತರಿಸುವ ಬಗ್ಗೆ ಚಿಂತನೆ ಇದೆ.ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಸಲೀಂ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಇನ್ನೂ 1 ಕೋಟಿ 80 ಲಕ್ಷ ಪ್ರಕರಣಗಳಿವೆ. ಅದರಲ್ಲಿ ಸದ್ಯ 8 ಲಕ್ಷ ಪ್ರಕರಣ ಗಳು ವಿಲೇವಾರಿಯಾಗಿದೆ. ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್ ಗಳ ಬಗ್ಗೆಯೂ ದೂರು ಬರ್ತಿವೆ.ಅಂತಹ ಪ್ರಕರಣಗಳನ್ನ ಪತ್ತೆ ಹಚ್ಚಲಾಗುತ್ತಿದೆ.ಅಂತಹವ್ರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಹಕಾರಿಯಾಗುತ್ತೆ ಎಂದಿದ್ದಾರೆ.
ಈ ಮಧ್ಯೆ ನಗರದಲ್ಲಿ 50% ರಿಯಾಯಿತಿ ದಂಡ ಪಾವತಿ ಕಟ್ಟಲು ಬಂದವ್ರಿಗೆ ಶಾಕ್ ಎದುರಾಗ್ತಿದ್ದು, ತಮ್ಮ ಗಾಡಿ ನಂಬರ್ ಪ್ಲೇಟ್ ನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ಡ್ರೈವ್ ಮಾಡ್ತಿರೋದು ಬೆಳಕಿಗೆ ಬರ್ತಿದೆ. ಅಲ್ಲದೇ ದಂಡ ಪಾವತಿಗೆ ಬಂದವರು ತಮ್ಮ ಗಾಡಿಗಳಮೇಲೆ 10-15 ಸಾವಿರ ದಂಡದ ಮೊತ್ತ ಇರೋದನ್ನು ನೋಡಿ ಕಂಗಾಲಾಗ್ತಿದ್ದು, ದಂಡ ಪಾವತಿಸದೇ ನಕಲಿ ನಂಬರ್ ಪ್ಲೇಟ್ ಮೇಲೆ ದೂರು ನೀಡ್ತಿರೋ ಘಟನೆಗಳು ವರದಿಯಾಗ್ತಿದೆ.
ಇದನ್ನೂ ಓದಿ : Attacked by Hindi speaker: ಬೆಂಗಳೂರು : ಕನ್ನಡ ಮಾತಾಡು ಎಂದಿದ್ದಕ್ಕೆ ಹಿಂದಿ ಭಾಷಿಕನಿಂದ ಹಲ್ಲೆ
ಇದನ್ನೂ ಓದಿ : ಮಂಗಳೂರು: ಕುಲಶೇಖರ ರೈಲ್ವೇ ಹಳಿ ಕಾಮಗಾರಿ ಹಿನ್ನಲೆ: ಇಂದಿನಿಂದ ಮಾ. 3 ರವರೆಗೆ ರೈಲು ಸಂಚಾರ ವ್ಯತ್ಯಯ
Traffic police collected 25 crore rupees in case of violation of traffic rules