ನವದೆಹಲಿ : ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದ ನಂತರ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ (Tsunami Warning) ನೀಡಲಾಗಿದೆ. 6.1 ತೀವ್ರತೆಯ ಭೂಕಂಪವು ಸುನಾಮಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಇದುವರೆಗೂ ಹಾನಿಯ ಕುರಿತು ಯಾವುದೇ ವರದಿಗಳಿಲ್ಲ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ದೃಢಪಡಿಸಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಟಿಮೋರ್ ದ್ವೀಪದ ಪೂರ್ವ ತುದಿಯಿಂದ 51.4 ಕಿಮೀ (32 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಈ ಪ್ರದೇಶವು ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಇದೆ. ಈಸ್ಟ್ ಟಿಮೋರ್ ಅನ್ನು ಟಿಮೋರ್- ಲೆಸ್ಟೆ ಎಂದೂ ಕರೆಯುತ್ತಾರೆ. ಇದು ಉತ್ತರದಲ್ಲಿ ಇಂಡೋನೇಷ್ಯಾ ಮತ್ತು ದಕ್ಷಿಣದಲ್ಲಿ ಆಸ್ಟ್ರೇಲಿಯಾವನ್ನು ಹೊಂದಿರುವ ದ್ವೀಪ ರಾಷ್ಟ್ರವಾಗಿದೆ.
ಹಿಂದೂ ಮಹಾಸಾಗರದ ಸುನಾಮಿ ಎಚ್ಚರಿಕೆ ಮತ್ತು ತಗ್ಗಿಸುವಿಕೆ ವ್ಯವಸ್ಥೆ (IOTWMS) ಈ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ ಸಮುದ್ರದಲ್ಲಿ ದೈತ್ಯಗಳು ಏರ್ಪಡುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ತಗ್ಗು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಇದನ್ನೂ ಓದಿ : ಮದ್ಯಪ್ರಿಯರಿಗೆ ಬಿಗ್ ಶಾಕ್ : ದುಬಾರಿಯಾಗಲಿದೆ ಮದ್ಯದ ಬೆಲೆ
ಇದನ್ನೂ ಓದಿ : Aryan Khan : ಡ್ರಗ್ ಸೇವನೆ ಪ್ರಕರಣದಲ್ಲಿ ಎನ್ಸಿಬಿಯಿಂದ ಶಾರೂಕ್ ಪುತ್ರ ಆರ್ಯನ್ ಖಾನ್ಗೆ ಕ್ಲೀನ್ಚಿಟ್
Tsunami Warning In Indian Ocean Region: check details