lavanya of dasapurandara fame : ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ರಾಜಾ – ರಾಣಿ’ ಖ್ಯಾತಿಯ ಶಶಿ ಹೆಗ್ಡೆ, ಲಾವಣ್ಯ

lavanya of dasapurandara fame : ಸಧ್ಯ ಕನ್ನಡ ಕಿರುತೆರೆ ತಾರೆಯರಲ್ಲಿ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದಷ್ಟೇ ನನ್ನರಸಿ ರಾಧೆ ಸೀರಿಯಲ್ ಖ್ಯಾತಿಯ ತೇಜಸ್ವಿನಿ ಪ್ರಕಾಶ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದೇ ರೀತಿ ಅಗ್ನಿಸಾಕ್ಷಿ ಖ್ಯಾತಿಯ ಐಶ್ವರ್ಯ ಸಾಲಿಮಠ ಕೂಡ ಮೂರುಗಂಟು ಬೆಸೆದುಕೊಂಡಿದ್ದರು. ಅದೇ ರೀತಿ ಇದೀಗ ರಾಜಾ – ರಾಣಿ ಧಾರವಾಹಿ ಖ್ಯಾತಿಯ ಶಶಿ ಹೆಗಡೆ ಹಾಗೂ ಲಾವಣ್ಯ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.


ಸಧ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರವಾಹಿಯಲ್ಲಿ ಪದ್ಮ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಲಾವಣ್ಯ ಕಿರುತೆರೆ ನಟ ಶಶಿ ಹೆಗಡೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿ ಎಂಬಲ್ಲಿ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮೇ 22ರಂದು ಮದುವೆಯಾಗಿದೆ .


ಪ್ರೀ ವೆಡ್ಡಿಂಗ್​ ಶೂಟ್​ನ ವಿಡಿಯೋವನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿರುವ ನಟ ಶಶಿಧರ ಹೆಗಡೆ ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿ ಎರಡು ದಿನಗಳಾಯಿತು. ಸಿಕ್ಕಳು ನಮ್ಮ ಮನೆಯ ಅರಸಿ. ನೀವೆಲ್ಲರು ನಮಗೆ ಹರಸಿ ಎಂದು ಶೀರ್ಷಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಎಂಗೇಜ್​ಮೆಂಟ್​ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿತ್ತು.


ಬಿಕಾಂ ಪದವಿಧರನಾದ ಶಶಿ ಹೆಗಡೆ ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳಿ ಕೆಲವು ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದರು. ಆದರೆ ತಾಯಿಯ ಕೊನೆಯ ಆಸೆಯಂತೆ ನಟನಾ ಕ್ಷೇತ್ರದಲ್ಲಿ ತಾವೇನಾದರೂ ಸಾಧನೆ ಮಾಡಬೇಕೆಂದುಕೊಂಡಿದ್ದ ಶಶಿಗೆ ಕಲರ್ಸ್ ಸೂಪರ್​ ಸೀರಿಯಲ್​​ನಲ್ಲಿ ಅವಕಾಶ ಸಿಕ್ಕಿತ್ತು. ಇದೇ ಧಾರವಾಹಿಯಲ್ಲಿ ಶಶಿಧರ್​ ತಂಗಿಯ ಪಾತ್ರದಲ್ಲಿ ನಟಿ ಲಾವಣ್ಯ ಕಾಣಿಸಿಕೊಳ್ಳುತ್ತಿದ್ದರು. ಈ ವೇಳೆ ಲಾವಣ್ಯ ಹಾಗೂ ಶಶಿ ಹೆಗಡೆ ನಡುವೆ ಪರಿಚಯವಾಗಿತ್ತು.

ಲಾವಣ್ಯರನ್ನು ಮೊದಲ ನೋಟದಲ್ಲೇ ಇಷ್ಟಪಟ್ಟಿದ್ದ ಶಶಿ ಲಾವಣ್ಯರೆದುರು ಪ್ರೇಮ ನಿವೇದನೆಯನ್ನು ಇಟ್ಟು ಬಳಿಕ ಲಾವಣ್ಯರ ತಾಯಿಯನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಹಸಮಣೆ ಏರಿದೆ. ಶಶಿ ಹೆಗ್ಡೆ ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ನಟಿಸುತ್ತಿದ್ದು ಶೀಘ್ರದಲ್ಲಿಯೇ ಕನ್ನಡ ಕಿರುತೆರೆಗೆ ಮರಳುವ ತಯಾರಿಯಲ್ಲಿದ್ದಾರೆ.

ಇದನ್ನು ಓದಿ : ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ

ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ

tv actress lavanya of dasapurandara fame gets married to shashi hegde

Comments are closed.