Umesh Katti Mounrng Announced : ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಆದೇಶ ಹೊರಡಿಸಿದ ಸಿಎಂ ಬೊಮ್ಮಾಯಿ

ಬೆಳಗಾವಿ : umesh katti mounrng announced : ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್​ ಕತ್ತಿ ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಉಮೇಶ್​ ಕತ್ತಿ ಮೃತದೇಹವನ್ನು ಬೆಂಗಳೂರಿನಿಂದ ಏರ್​ಲಿಫ್ಟ್​ ಮಾಡಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇಲ್ಲಿಂದ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕ ಬೆಲ್ಲದ ಬಾಗೇವಾಡಿಗೆ ತರಲಾಗಿದೆ.ಬೆಲ್ಲದ ಬಾಗೇವಾಡಿಗೆ ಸಿಎಂ ಸೇರಿದಂತೆ ಸಚಿವರು ಮತ್ತು ವಿಪಕ್ಷಗಳ ನಾಯಕರು ಆಗಮಿಸಿದ್ದು ತೋಟದಲ್ಲಿ ಉಮೇಶ್​ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ.

ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಶೋಕಾಚರಣೆಯನ್ನು ಮೂರು ದಿನಗಳ ಕಾಲ ವಿಸ್ತರಿಸಿದ್ದಾರೆ. ಈ ಮೊದಲು ಒಂದು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಆಯೋಜಿಸಲಾಗಿತ್ತು. ಆದರೆ ಇದನ್ನು ವಿಸ್ತರಿಸಿ ಮೂರು ದಿನಗಳಿಗೆ ಶೋಕಾಚರಣೆ ನಿಗದಿಪಡಿಸಲಾಗಿದೆ. ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು ಉಮೇಶ್​ ಕತ್ತಿ ನಿಧನದ ಪ್ರಯುಕ್ತ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಯನ್ನು ನಡೆಸಲಿದ್ದೇವೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಾವು ನಡೆಸುವುದಿಲ್ಲ. ನೆರೆ ನಿರ್ವಹಣೆ ಕಾರ್ಯವನ್ನು ಮಾತ್ರ ಮಾಡಲಿದ್ದೇವೆ . ಕತ್ತಿ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ಸರ್ಕಾರ ನಡೆಸಲಿದೆ. ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್​ 11ಕ್ಕೆ ಮುಂದೂಡಿದ್ದೇವೆ ಎಂದು ಹೇಳಿದ್ದಾರೆ.

ಸಚಿವ ಉಮೇಶ್​ ಕತ್ತಿ ನಿಧನದ ಬಳಿಕ ಜನೋತ್ಸವ ಕಾರ್ಯಕ್ರಮದ ಭವಿಷ್ಯವೇನು ಎಂಬ ಚರ್ಚೆ ಎದುರಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಲಿ ಸಚಿವನ ನಿಧನಕ್ಕೆ ಕೇವಲ 1 ದಿನ ಶೋಕಾಚರಣೆಗೆ ಘೋಷಣೆ ಮಾಡಿದ್ದು ತೀವ್ರ ಚರ್ಚೆಗೆ ಘ್ರಾಸವಾಗಿತ್ತು. ಜನೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದೆಂದೇ ಸರ್ಕಾರ ಮೂರು ದಿನಗಳ ಬದಲಾಗಿ ಒಂದು ದಿನ ಶೋಕಾಚರಣೆ ಮಾಡ್ತಿದೆ ಎಂದೆಲ್ಲ ಅಪಸ್ವರಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಇದನ್ನು ಓದಿ : SBI Recruitment 2022 : ಎಸ್‌ಬಿಐ ನೇಮಕಾತಿ 2022 : 5008 ಹುದ್ದೆ, 47,000 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : bjp janostava postpone : ಉಮೇಶ್​ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ

umesh katti three days mounrng announced

Comments are closed.