Nivedita Shetty Udupi : ಯುಪಿಎಸ್ಸಿ ಪರೀಕ್ಷೆ ಅನ್ನೋದು ಬಹುತೇಕ ಪಾಲಿಗೆ ಕಬ್ಬಿಣದ ಕಡಲೆ. ಕೋಚಿಂಗ್ ಪಡೆದುಕೊಂಡು ಎಷ್ಟೇ ಬಾರಿ ಪ್ರಯತ್ನ ಪಟ್ಟರೂ ಕೂಡ ಬಹುತೇಕರಿಗೆ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡೋದಕ್ಕೆ ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬರು ಇಂಜಿನಿಯರಿಂಗ್ ಕೆಲಸ ಮಾಡ್ತಾ, ಮದುವೆ ಆಗಿ ಮೂರು ವರ್ಷದ ಮಗು ಇದ್ದರೂ ಕೂಡ ಶ್ರಮವಹಿಸಿ, ಯಾವುದೇ ಕೋಚಿಂಗ್ ಇಲ್ಲದೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇವರು ನಿವೇದಿತಾ ಶೆಟ್ಟಿ. ಉಡುಪಿಯ ಸದಾನಂದ ಶೆಟ್ಟಿ ಮತ್ತು ಸಮಿತ ಶೆಟ್ಟಿ ಅವರ ಮಗಳು. ನಿವೇದಿತಾ ಶೆಟ್ಟಿ ಅವರ ಪತಿ ದಿವಾಕರ ಶೆಟ್ಟಿ ಅವರು ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಿವೇದಿತಾ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆರಂಭದಿಂದಲೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತೀರ್ಣರಾಗಬೇಕು ಅನ್ನೋದು ನಿವೇದಿತಾ ಶೆಟ್ಟಿ ಅವರ ಕನಸು.
ಇದನ್ನೂ ಓದಿ : 5,8,9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ : ರಾಜ್ಯ ಸರಕಾರದಿಂದ ಅಧಿಸೂಚನೆ ಪ್ರಕಟ
ಕೆಲಸದ ಜೊತೆ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೆ ಕೂಡ ಅಭ್ಯಾಸವನ್ನು ಮಾಡುತ್ತಿದ್ದರು. ಮೂರು ವರ್ಷದ ಮಗುವಿದ್ದರೂ ಕೂಡ ತಮ್ಮ ಶ್ರಮವನ್ನು ಕಡಿಮೆ ಮಾಡಲೇ ಇಲ್ಲ. ಕೆಲಸದ ಜೊತೆ ಜೊತೆಗೆ ಪರೀಕ್ಷೆಗೂ ಸಿದ್ದತೆಯನ್ನು ಮಾಡಿಕೊಂಡು 2022ರ ಯುಪಿಎಸ್‌ಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಯುಪಿಎಸ್‌ಸಿಯು 2022ರ ಸಿವಿಲ್ ಸರ್ವಿಸಸ್ ಪರೀಕ್ಷೆಯ consolidated ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ಬರೋಬ್ಬರಿ 11 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ ಕೇವಲ 1022 ಅಭ್ಯರ್ಥಿಗಳು ಮಾತ್ರವೇ ಉತ್ತೀರ್ಣರಾಗಿದ್ದಾರೆ. ಪ್ರತೀ ವರ್ಷವೂ ಯುಪಿಎಸ್‌ಪಿ ಪಾಸ್ ಮಾಡಬೇಕು ಅನ್ನೋ ಕನಸು ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೆಯೇ ಉಳಿದುಕೊಂಡಿರುತ್ತದೆ.
ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ
ಅದ್ರಲ್ಲೂ ಮದುವೆಯಾಗಿ, ಮಗು ಆದ ನಂತರವೂ ಯುಪಿಎಸ್‌ಪಿಯಲ್ಲಿ ಆಯ್ಕೆ ಆಗುವುದು ವಿರಳಾತಿ ವಿರಳ. ಸಾಧಿಸುವ ಛಲ ಇದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು ಅನ್ನೋದನ್ನು ಇದೀಗ ಉಡುಪಿಯ ನಿವೇದಿತಾ ಶೆಟ್ಟಿ ಮಾಡಿ ತೋರಿಸಿದ್ದಾರೆ. ಮಾತ್ರವಲ್ಲ ಅದೇಷ್ಟೋ ಯುಪಿಸಿಎಸ್ ಉತ್ತೀರ್ಣರಾಗ ಬೇಕು ಅನ್ನೋ ಕನಸು ಹೊಂದಿರುವವರಿಗೆ ಮಾದರಿಯಾಗಿದ್ದಾರೆ.

ನಿವೇದಿತಾ ಶೆಟ್ಟಿ ಯುಪಿಎಸ್‌ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ಪಡೆದುಕೊಂಡಿಲ್ಲ ಅನ್ನೋದು ವಿಶೇಷ. ಉಡುಪಿಯ ಮಿಲಾಗ್ರಿಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಪೂರೈಸಿರುವ ನಿವೇದಿತಾ ಶೆಟ್ಟಿ ಅವರು ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದು ಕೊಂಡಿದ್ದರು. ಅಂತಿಮ ವರ್ಷದ ಪದವಿ ಪಡೆಯುವಾಗಲೇ ಅವರಿಗೆ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಉದ್ಯೋಗವೂ ಸಿಕ್ಕಿತ್ತು.
ಇದನ್ನೂ ಓದಿ :ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ : ಮಕ್ಕಳ ದುಸ್ಥಿತಿ ಕಂಡು ಮರುಗಿದ ನ್ಯಾಯಾಧೀಶೆ ಅರುಣಾ ಕುಮಾರಿ
ಕೈತುಂಬಾ ಸಂಬಳ, ಪತಿ, ಮುದ್ದಾದ ಮಗುವಿದ್ದರೂ ಕೂಡ ನಿವೇದಿತಾ ಶೆಟ್ಟಿ ಅವರ ದೇಶ ಸೇವೆಯ ಕನಸನ್ನು ಮಾತ್ರ ಬಿಡಲೇ ಇಲ್ಲ. ಆರಂಭದಲ್ಲಿ ಕೆಲಸದ ಜೊತೆ ಜೊತೆಗೆ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ ಪರೀಕ್ಷೆ ಸಮೀಪಿಸುತ್ತಲೇ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
UPSC CSE Main Result 2022 Nivedita Shetty Udupi mother of a 3-year-old child, passed the UPSC exam without coaching