ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್‌ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ

ರಾಜ್ಯ ಸರಕಾರ ಹೊಸ ರೂಲ್ಸ್‌ ಜಾರಿಗೆ ತಂದಿದ್ದು, ಕರ್ನಾಟಕದ ಎಲ್ಲಾ ಶಾಲೆಗಳನ್ನು ವಿದ್ಯಾಂಜಲಿ 2.0 (Vidyanjali 2.0 ) ಪೋರ್ಟಲ್‌ನಲ್ಲಿ ನವೆಂಬರ್‌ ಅಂತ್ಯದ ಒಳಗಾಗಿ ನೋಂದಣಿ ಮಾಡುವಂತೆ ಸೂಚಿಸಿದೆ.

ಬೆಂಗಳೂರು : ಶಿಕ್ಷಣದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ಮೂಲಕ ಹೊಸ ಹೊಸ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ. ಇದೀಗ ರಾಜ್ಯ ಸರಕಾರ ಹೊಸ ರೂಲ್ಸ್‌ ಜಾರಿಗೆ ತಂದಿದ್ದು, ಕರ್ನಾಟಕದ ಎಲ್ಲಾ ಶಾಲೆಗಳನ್ನು ವಿದ್ಯಾಂಜಲಿ 2.0 (Vidyanjali 2.0 ) ಪೋರ್ಟಲ್‌ನಲ್ಲಿ ನವೆಂಬರ್‌ ಅಂತ್ಯದ ಒಳಗಾಗಿ ನೋಂದಣಿ ಮಾಡುವಂತೆ ಸೂಚಿಸಿದೆ.

ಕರ್ನಾಟಕ ರಾಜ್ಯ ಸಮಗ್ರ ಶಿಕ್ಷಾಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ರಾಜ್ಯ ಈಗಾಗಲೇ 44,880 ಶಾಲೆಗಳು ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿವೆ. ಇದೀಗ ರಾಜ್ಯದಲ್ಲಿನ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನೋಂದಣಿ ಕಡ್ಡಾಯವಾಗಿದೆ.

Karnataka Government new rules for schools, Registration on Vidyanjali 2.0 portal is mandatory
Image credit to Original Source

ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಭಾರತ ಸರಕಾರ, ಶಾಲಾ ಶಿಕ್ಷಣದಲ್ಲಿ ಸಮುದಾಯ, ಸ್ವಯಂ ಸೇವಕರು, ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ ಸೇವೆಗಳನ್ನು ಗುರುತಿಸಿ ಶಾಲೆಗಳಿಗೆ ಸದುಪಯೋಗವಾಗುವಂತೆ ಮಾಡುವ ಸಲುವಾಗಿ ಮಾಡಲು ಈ ವಿದ್ಯಾಂಜಲಿ ಕಾರ್ಯಕ್ರಮ ವನ್ನು ರೂಪಿಸಲಾಗಿದೆ.

ಇದನ್ನೂ ಒದಿ : 5,8,9ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ : ರಾಜ್ಯ ಸರಕಾರದಿಂದ ಅಧಿಸೂಚನೆ ಪ್ರಕಟ

ಶಾಲೆಗಳ ಜೊತೆಗೆ ಸಮುದಾಯ, ಸ್ವಯಂ ಸೇವಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಸ್ವಯಂ ಪ್ರೇರಿತ ಉಡುಗೊರೆ ಗಳನ್ನು ಒಟ್ಟುಗೂಡಿಸಲು ಅನುಕೂಲಕರವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ನೋಡಲ್‌ ಅಧಿಕಾರಿಗಳು ಈ ಕುರಿತು ತ್ವರಿತವಾಗಿ ಕ್ರಮವಹಿಸಿ ಶಾಲೆಗಳನ್ನು ನೋಂದಾಯಿಸುವ ಕಾರ್ಯವನ್ನು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Karnataka Government new rules for schools, Registration on Vidyanjali 2.0 portal is mandatory
Image Credit to Original Source

ಇದನ್ನೂ ಓದಿ : ಟ್ಯೂಶನ್ ಮಾಫಿಯಾಗೆ ಬೀಳುತ್ತಾ ಕಡಿವಾಣ: ಸರ್ಕಾರದಿಂದ ಹೊರಬಿತ್ತು ಖಡಕ್ ಆದೇಶ

ಶಾಲೆಗಳನ್ನು ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು http://vidyanjali.education.gov.in ಕ್ಲಿಕ್‌ ಮಾಡುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಬೇಕು. ಅಲ್ಲದೇ ವಿದ್ಯಾಂಜಲಿ 2.0 ಪೋರ್ಟಲ್‌ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡುವ ಸಲುವಾಗಿ ಪ್ರತಿ ಶಾಲೆಗಳಲ್ಲಿ ವಿದ್ಯಾಂಜಲಿಗೆ ಸಂಬಂಧಿಸಿದ ಜಾಹಿರಾತು ಫಲಕಗಳನ್ನು ಪ್ರದರ್ಶನ ಮಾಡಬೇಕು. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸುವ ಕುರಿತು ಸೂಕ್ತಕ್ರಮವನ್ನು ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರ ಈ ಬಾರಿ ಪಠ್ಯಪುಸ್ತಕದಲ್ಲಿಯೂ ಬದಲಾವಣೆಯನ್ನು ತಂದಿದೆ. ಈ ಹಿಂದೆ ಬಿಜೆಪಿ ಸರಕಾರ ಸಿದ್ದಪಡಿಸಿದ್ದ ಪಠ್ಯಪುಸ್ತಕದಲ್ಲಿನ ಕೆಲವು ಪಠ್ಯಗಳನ್ನು ಕಾಂಗ್ರೆಸ್‌ ಸರಕಾರ ಕೈ ಬಿಟ್ಟಿದೆ. ಅಲ್ಲದೇ ಪ್ರಸಕ್ತ ವರ್ಷದಿಂದ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ.  ಅಲ್ಲದೇ ಈ ಬಾರಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪಬ್ಲಿಕ್‌ ಪರೀಕ್ಷೆ ನಡೆಯಲಿದೆ.

Karnataka Government new rules for schools, Registration on Vidyanjali 2.0 portal is mandatory

Comments are closed.