ಬೆಂಗಳೂರು : ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿಯಲ್ಲಿ ನಡೆಸಿದ ಕಿಡಿಗೇಡಿತನವನ್ನು ವಿರೋಧಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ. ಬೆಳಗ್ಗೆ ಆರರಿಂದ ಸಂಜೆ ಆರು ಗಂಟೆಯವರೆಗೂ ಕರ್ನಾಟಕ ಬಂದ್ (Karnataka Bandh) ಇರಲಿದ್ದು ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕು. ಪಕ್ಷಬೇಧ ಮರೆತು ಪ್ರತಿಯೊಬ್ಬರೂ ಬಂದ್ಗೆ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಒಂದಾಗಿ ಈ ನಿರ್ಧಾರವನ್ನು ಕೈಗೊಂಡಿವೆ. ಇದೇ ವಿಚಾರವಾಗಿ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್ ಸರಿ ಸುಮಾರು 35 ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ ಎಂದು ಹೇಳಿದರು .
ಕರ್ನಾಟಕ ಬಂದ್ಗೆ ಈಗಾಗಲೇ ಊಬರ್ ಹಾಗೂ ಓಲಾಗಳು ಬೆಂಬಲ ನೀಡಿವೆ. ಇತ್ತ ಟ್ಯಾಕ್ಸಿ ಮಾಲೀಕರು, ದಲಿತ ಸಂಘರ್ಷ ಸಮಿತಿ, ಬೀದಿಬದಿ ವ್ಯಾಪಾರಿಗಳು, ಲಾರಿ ಮಾಲೀಕರ ಸಂಘ, ಹೋಟೆಲ್ ಉದ್ಯಮಿಗಳು, ಕಟ್ಟಡ ಕಾರ್ಮಿಕರ ಸಂಘ, ಸರ್ಕಾರಿ ನೌಕರರು ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ. ಚಿತ್ರೋದ್ಯಮ ಕೂಡ ಕರ್ನಾಟಕ ಬಂದ ಕುರಿತಂತೆ ಇನ್ನೂ ತನ್ನ ನಿಲುವನ್ನು ಹೊರ ಹಾಕಿಲ್ಲ.
ಡಿಸೆಂಬರ್ 31ರಂದು ಲವ್ ಯು ರಚ್ಚು ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆದರೆ ಅಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ಗೆ ಅಡಚಣೆಯುಂಟಾಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ಬಂದ್ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಭೆಯನ್ನು ಕರೆಯಲಾಗಿದೆ. ಈ ವಿಚಾರವಾಗಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ ಬಂದ್ಗೆ ಬೆಂಬಲ ನೀಡುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಇಲ್ಲ. ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತೆ ಕೋರಿ ಕನ್ನಡ ಪರ ಸಂಘಟನೆಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಪೂರಕವಾದ ಯಾವೊಂದು ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಕನ್ನಡದ ಉಳಿವಿಗೆ ಮುಂದಾದ ಕನ್ನಡ ಪರ ಸಂಗಟನೆಗಳು ಬಂದ್ಗೆ ಕರೆ ನೀಡಿವೆ.ಈ ದಿನದಂದು ಪ್ರತಿಭಟನಾ ಮೆರವಣಿಗೆ, ಬೃಹತ್ ಜಾಥಾಗಳನ್ನು ಕೈಗೊಳ್ಳಲಾಗುತ್ತೆ ಅಂತಾ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇದನ್ನು ಓದಿ : Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್
Vatal nagaraj calls for Karnataka Bandh on december 31st