Bombay High Court : ದೈಹಿಕ ಸಂಬಂಧದ ಬಳಿಕ ಮದುವೆಯಾಗಲು ನಿರಾಕರಿಸಿದರೆ ಅದು ವಂಚನೆಯಲ್ಲ: ಬಾಂಬೆ ಹೈಕೋರ್ಟ್​

Bombay High Court : ಪರಸ್ಪರ ಒಪ್ಪಿಗೆಯೊಂದಿಗೆ ದೀರ್ಘಾವಧಿಯ ಕಾಲ ದೈಹಿಕ ಸಂಬಂಧವನ್ನು ಬೆಳೆಸಿದ ಬಳಿಕ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಕರೆಯಲು ಸಾಧ್ಯವಿಲ್ಲ ಅಂತಾ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಈ ಮೂಲಕ ಯುವಕನನ್ನು ತಪ್ಪಿತಸ್ಥ ಎಂದು ಆದೇಶ ನೀಡಿದ್ದ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.

ಸಂತ್ರಸ್ತೆಯೊಬ್ಬಳು ಮಹಾರಾಷ್ಟ್ರದ ಪಾಲ್ಘರ್​ ನಿವಾಸಿ ಕಾಶಿನಾಥ್​ ಘರತ್​ ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ಮೂರು ವರ್ಷಗಳ ಕಾಲ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆದರೆ ನಂತರದ ದಿನಗಳಲ್ಲಿ ಮದುವೆಯಾಗಲು ನಿರಾಕರಿಸಿ ನನ್ನನ್ನು ವಂಚಿಸಿದ್ದಾನೆ ಎಂದು ಆರೋಪ ಮಾಡಿದ್ದರು. ಈ ಸಂಬಂಧ ಆರೋಪಿ ಕಾಶಿನಾಥ್​ ಘರತ್​ ವಿರುದ್ಧ ಸೆಕ್ಷನ್​ 376 ಹಾಗೂ 417 ಅಡಿಯಲ್ಲಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ 1999ರ ಫೆಬ್ರವರಿ ತಿಂಗಳಲ್ಲಿ ತೀರ್ಪು ನೀಡಿದ ಹೆಚ್ಚುವರು ಸೆಷನ್ಸ್​ ನ್ಯಾಯಾಧೀಶರು ಆರೋಪಿ ಕಾಶಿನಾಥನನ್ನು ದೋಷಿ ಎಂದು ಘೋಷಿಸಿದರು. ಆದರೆ ಅತ್ಯಾಚಾರದ ಆರೋಪದಿಂದ ಕಾಶಿನಾಥನನ್ನು ಖುಲಾಸೆಗೊಳಿಸಲಾಗಿತ್ತು. ಕಾಶಿನಾಥ್​ಗೆ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ನೀಡಲಾಯ್ತು.

ಕೆಳಹಂತದ ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಶಿನಾಥ್​ ಬಾಂಬೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಜಾ ಪ್ರಭು ದೇಸಾಯಿ, ಸಂತ್ರಸ್ತೆಯ ಹೇಳಿಕೆಯಲ್ಲಿ ಆಕೆ ಯಾವುದೇ ರೀತಿಯಲ್ಲಿ ಮೋಸ ಹೋಗಿದ್ದಾಳೆ ಎಂಬುದು ಸಾಬೀತಾಗುತ್ತಿಲ್ಲ. ಇಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ದೈಹಿಕ ಸಂಪರ್ಕ ನಡೆದಿದೆ ಎಂದು ಹೇಳಿದ್ದಾರೆ.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ತೀರ್ಪು ನೀಡಿದ ಬಾಂಬೆ ಹೈಕೋರ್ಡ್, ಆರೋಪಿಯು ಸುಳ್ಳು ಮಾಹಿತಿಯನ್ನು ನೀಡಿ ಅಥವಾ ವಂಚನೆ ಮಾಡುವ ಮೂಲಕ ಲೈಂಗಿಕ ಸಂಬಂಧ ಬೆಳೆಸಿದ್ದಾರೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ. ಅಲ್ಲದೇ ಇಷ್ಟು ದೀರ್ಘ ಕಾಲದ ಸಂಬಂಧದ ಬಳಿಕ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

ಇದನ್ನು ಓದಿ :Lucknow list out IPL 2022 : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ

ಇದನ್ನೂ ಓದಿ : Golden Temple: ಗೋಲ್ಡನ್​​ ಟೆಂಪಲ್​ನಲ್ಲಿ ಕೊಲೆ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ..!

Refusing to marry after having physical relations is not cheating: Bombay High Court

Comments are closed.