ಕೋಟ : ಕರಾವಳಿಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಗುಂಡ್ಮಿಯ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನದಲ್ಲಿ (Gundmi Mani Chennakeshava Temple) ದೇವರ ವಿಶ್ವರೂಪ ದರ್ಶನ (Vishwaroopa darshana) ಅನಾವರಣಗೊಂಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಹಣತೆಗಳ ಬೆಳಕಿನಲ್ಲಿ ಶ್ರೀ ದೇವರ ವಿಶ್ವರೂಪ ದರ್ಶನವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ತಾಂಬೂಲಾರೂಢ ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡ ದೋಷರ ಪರಿಹಾರಕ್ಕಾಗಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ನಿನ್ನೆ ಹಣತೆಯ ಬೆಳಕಲ್ಲಿ ದೇವರ ವಿಶ್ವರೂಪ ದರ್ಶನದ ಬಳಿಕ ಪ್ರಸಾದ ವಿತರಣೆ ಮಾಡಲಾಗಿತ್ತು.

ನಂತರ ದೇವರಿಗೆ ಮುಷ್ಠಿ ಕಾಣಿಕೆ ಸಮರ್ಪಣೆ, ಸಪರಿವಾರ ಸಹಿತ ಶ್ರೀ ಮಾಣಿ ಚೆನ್ನಕೇಶವ ದೇವರಿಗೆ ಫಲ ತಾಂಬೂಲ ಸಹಿತ ಪ್ರಾರ್ಥನೆ, ಷಣ್ಣಾಳಿಕೇರ ಗಣಯಾಗ, ಮೃತ ಸಂಜೀವಿನಿ ಹೋಮ, ಮಧ್ಯಾಹ್ನ ‘ಪ್ರಸನ್ನ ಪೂಜೆ’ ನೆರವೇರಿಸಲಾಗಿದೆ.

ನವೆಂಬರ್ 22ರಂದು ಸಂಜೆ 6 ಗಂಟೆಯಿಂ ಬಾದಾಕರ್ಷಣೆ, ರಕ್ಷಾ ಸುದರ್ಶನ ಹೋಮ, ವಾಸ್ತು ಪೂಜೆ ನೆರವೇರಲಿದೆ. ನಂತರ ನವೆಂಬರ್ 23ರಂದು ಬೆಳಿಗ್ಗೆ 8.30ಕ್ಕೆ ‘ಚಕ್ರಾಬ್ದ ಮಂಡಲ ಪೂಜೆ, ಅಯುತ ಸಂಖ್ಯಾ ತಿಲಾಹೋಮ, ಚತುರ್ಮೂರ್ತಿ ಆರಾಧನೆ, ಆಚಾರ್ಯ ಪೂಜೆ, ಮಧ್ಯಾಹ್ನ 12:45 ಪ್ರಸನ್ನ ಪೂಜೆ, ಸಂಜೆ 6.30ರಿಂದ ಬಿಂಬ ಪರಿತ್ಯಾಗ ಹೋಮ – ಫಲ ಮಂತ್ರಾಕ್ಷತೆ ಕಾರ್ಯಕ್ರಮಗಳು ನೆರವೇರಲಿದೆ

ಇದನ್ನೂ ಓದಿ : Mani Chennakeshwa : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ

ದೇವರ ವಿಶ್ವರೂಪ ದರ್ಶನದ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಗೆ ಹಾಗೂ ಹೊರ ಭಾಗವನ್ನು ಸಂಪೂರ್ಣವಾಗಿ ಹಣತೆಯ ಬೆಳಕಿನಲ್ಲಿ ಅಲಂಕಾರ ಗೊಳಿಸಲಾಗಿತ್ತು. ದೇವಳದ ಸುತ್ತಲೂ ಚಿತ್ತಾಕರ್ಷಕ ರಂಗೋಲಿಗಳು ಹಣತೆಯ ಬೆಳಕಲ್ಲಿ ರಾರಾಜಿಸಿದ್ದವು. ಶ್ರೀ ಮಾಣಿ ಚೆನ್ನಕೇಶವ ದೇವರು ಹಣತೆಯ ಬೆಳಕಲ್ಲಿ ಭಕ್ತರಿಗೆ ವಿಶ್ವರೂಪ ದರ್ಶನ ಮಾಡಿದ್ದಾರೆ. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

ಇದನ್ನೂ ಓದಿ : Unusual Temples : ಭಾರತದ ಅಸಾಮಾನ್ಯ ದೇವಾಲಯಗಳಿವು; ಇಲ್ಲಿನ ಆಚರಣೆಗಳನ್ನು ಕೇಳಿದ್ರೆ ನಿಮಗೂ ಅಚ್ಚರಿಯಾಗಬಹುದು
Vishwaroopa darshana in Gundmi Mani Chennakeshava Temple