ಸೋಮವಾರ, ಏಪ್ರಿಲ್ 28, 2025
HomekarnatakaWake fit offer : ಕೆಲಸದ ಅವಧಿಯಲ್ಲಿ ಅರ್ಧ ಗಂಟೆ ನಿದ್ರೆ ಬ್ರೇಕ್ : ವೇಕ್...

Wake fit offer : ಕೆಲಸದ ಅವಧಿಯಲ್ಲಿ ಅರ್ಧ ಗಂಟೆ ನಿದ್ರೆ ಬ್ರೇಕ್ : ವೇಕ್ ಫಿಟ್ ಕಂಪನಿ ಹೊಸ ಆಫರ್‌

- Advertisement -

ಬೆಂಗಳೂರು : ಕೊರೋನಾದಿಂದ ಉದ್ಯೋಗ ಕಡಿತವಾಗ್ತಿರೋ ಹೊತ್ತಲ್ಲಿ ಕೆಲಸ ಸಿಗೋದೇ ಕಷ್ಟವಿದೆ. ಇನ್ನು ಕೆಲಸ ಕೊಡೋ ಕಂಪನಿಗಳು ಸರಿಯಾದ ಸಮಯಕ್ಕೆ ಸಂಬಳ ಕೊಟ್ಟರೇ ಅದೇ ಪುಣ್ಯ ಅನ್ನೋ ಸ್ಥಿತಿಯೂ ಇದೆ. ಆದರೆ ಇಲ್ಲೊಂದು ಸಾಫ್ಟವೇರ್ ಕಂಪನಿ (Wake fit offer )ಮಾತ್ರ ಕೆಲಸ, ಸಂಬಳದ ಜೊತೆಗೆ ಕೆಲಸದ ಅವಧಿಯಲ್ಲಿ ಅರ್ಧ ಗಂಟೆ ನಿದ್ದೇ ಮಾಡೋಕು ಅವಕಾಶ ನೀಡೋ ಮೂಲಕ ಸದ್ದು ಮಾಡಿದೆ.

ಹೌದು ಇತ್ತೀಚಿಗೆ ನಡೆದ ನಾಸಾದ ಅಧ್ಯಯನವೊಂದು ಕೆಲಸದ ಮಧ್ಯದಲ್ಲಿ ಮನುಷ್ಯ ಪಡೆಯೋ ಚಿಕ್ಕ ವಿರಾಮ ಹಾಗೂ ಸಣ್ಣ ನಿದ್ದೆ ಆತನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ ಎಂದು ವರದಿ ಮಾಡಿದೆ. ನಾಸಾದ ಹೊವರ್ಡ್ ವಿವಿಯ ಈ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನಲ್ಲಿರೋ ಸ್ಟಾರ್ಟ್ ಅಪ್ ಸಾಫ್ಟವೇರ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರತಿನಿತ್ಯ ಕೆಲಸದ ಅವಧಿಯಲ್ಲಿ ೩೦ ನಿಮಿಷಗಳ ನಿದ್ರಾ ವಿರಾಮ( Sleep Break) ನೀಡಲು ನಿರ್ಧರಿಸಿದೆ.

ಈಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದು, ಮಧ್ಯಾಹ್ನ 2 ರಿಂದ 2.30 ರವರೆಗಿನ ಸಮಯದಲ್ಲಿ ಉದ್ಯೋಗಿಗಳು ನಿದ್ರಿಸಬಹುದು. ಇದಕ್ಕಾಗಿ ಅವರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಈ ಕಾರಣಕ್ಕಾಗಿ ಸಂಬಳವನ್ನು ಕಟ್ ಮಾಡಲಾಗುವುದಿಲ್ಲ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗ ಹೇಳಿದೆ. ಕೇವಲ ನಿದ್ದೆ ಮಾಡಲು ಅವಕಾಶ ನೀಡಿರೋದು ಮಾತ್ರವಲ್ಲ ಕಂಪನಿ ನಿದ್ರೆ ಮಾಡಲು ಸ್ಥಳಾವಕಾಶ ಹಾಗೂ ಬೆಡ್ ವ್ಯವಸ್ಥೆಯನ್ನು ಕಲ್ಪಿಸಿದೆಯಂತೆ.

ವೇಕ್ ಫಿಟ್ ಎಂಬ ಸಂಸ್ಥೆ ಇಂತಹದೊಂದು ವಿಭಿನ್ನ ಆಫರ್ ನ್ನು ತನ್ನ ಉದ್ಯೋಗಿಗಳಿಗೆ ನೀಡುವ ಮೂಲಕ ಗಮನ ಸೆಳೆದಿದೆ. ಅಂದ ಹಾಗೇ ಈ ಸಂಸ್ಥೆ ಸ್ಲೀಪ್ ಸ್ಯುಲ್ಯೋಶನ್ ಗೆ ಸಂಬಂಧಿಸಿದಂತೆ ಕೆಲಸ ಮಾಡುವ ಸಂಸ್ಥೆಯಾಗಿದೆ. ಈ ನಿರ್ಧಾರದಿಂದ ಉದ್ಯೋಗಿಗಳ ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಉದ್ಯೋಗಿಗಳು ಮತ್ತಷ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದು ನಂಬಿದೆ.

ಕಂಪನಿಯ ಸಹಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಈ ವಿಚಾರವನ್ನು ಖಚಿತಪಡಿಸಿದ್ದು, ಅಧ್ಯಯನದ ಪ್ರಕಾರ ಈ ತಂತ್ರದಿಂದ ಮನುಷ್ಯನ ಕಾರ್ಯಕ್ಷಮತೆ ಶೇಕಡಾ ೩೩ ರಷ್ಟು ಉತ್ತಮಗೊಳ್ಳಲಿದೆ ಎಂಬುದು ಸಾಬೀತಾಗಿದ್ದಾರೆ ಎಂದಿದ್ದಾರೆ. ಸದ್ಯ ಎಂಪ್ಲಾಯ್ ಗಳಿಗೆ ಕೆಲಸದ ವೇಳೆಯಲ್ಲಿ ನಿದ್ದೆ ಮಾಡಲು ಅವಕಾಶ ಕೊಡೋ ಈ ಸಂಸ್ಥೆಯ ನಿರ್ಧಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : ಫುಡ್‌ ಪಾಯ್ಸನ್‌ ಆಗಿದೆಯಾ? ಅದಕ್ಕೆ ಕಾರಣ ಹೀಗೂ ಇರಬಹುದು

ಇದನ್ನೂ ಓದಿ : ವಿದ್ಯುತ್ ಮೀಟರ್ ಭದ್ರತಾ ಶುಲ್ಕ ಹೆಚ್ಚಳ : ಬೆಸ್ಕಾಂ ನಿರ್ಧಾರಕ್ಕೆ ಬೆಂಗಳೂರಿಗರ ಆಕ್ರೋಶ

Wake Fit Company New Offer Half Hour Sleep Break During Work

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular