World women’s day 2023: ಮಹಿಳಾ ದಿನದಂದು ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ರಾಜ್ಯ ಪ್ರವಾಸೋದ್ಯಮ ಇಲಾಖೆ

ಬೆಂಗಳೂರು: (World women’s day 2023) ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಹಿಳೆಯರಿಗೆ ಆಫರ್ ನೀಡಿದ್ದು, ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ರೂಂ ಬುಕ್ಕಿಂಗ್‌ನಲ್ಲಿ ವಿಶೇಷ 50 ಶೇಕಡಾ ರಿಯಾಯಿತಿ ಮತ್ತು ಆಹಾರದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಎಲ್ಲಾ ಮಹಿಳೆಯರು ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ.‌

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಅಂತರರಾಷ್ಟ್ರೀಯ ಮಹಿಳಾ ದಿನ(World women’s day 2023) ದಂದು ಸರ್ಕಾರಿ ಆತಿಥ್ಯ ಪ್ರಾಪರ್ಟಿಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ರೂಂ ಬುಕ್ಕಿಂಗ್‌ನಲ್ಲಿ ವಿಶೇಷ 50 ಶೇಕಡಾ ರಿಯಾಯಿತಿ ಮತ್ತು ಆಹಾರದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಎಲ್ಲಾ ಮಹಿಳೆಯರು ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಪ್ರಕಾರ, ಎಲ್ಲಾ ಮಹಿಳಾ ಏಕಾಂಗಿ ಪ್ರಯಾಣಿಕರು ಮತ್ತು ಗುಂಪು ಪ್ರಯಾಣಿಕರಿಗೆ ಮಾರ್ಚ್ 6 ಮತ್ತು ಮಾರ್ಚ್ 10 ರ ನಡುವೆ ಈ ಕೊಡುಗೆಯನ್ನು ಅನ್ವಯಿಸಲಾಗುತ್ತದೆ ಎಂದು ತಿಳಿಸಿದೆ.

“08.03.2023 ರಂದು ಆಚರಿಸಲಾಗುವ 48 ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ(World women’s day 2023)ಯ ಸಂದರ್ಭದಲ್ಲಿ, ಎಲ್ಲಾ ಮಯೂರ ಗ್ರೂಪ್‌ನಲ್ಲಿ ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ದಿಂದ ಹೋಟೆಲ್‌ಗಳ ರೂಂ ಬುಕ್ಕಿಂಗ್‌ನಲ್ಲಿ 50% ರಿಯಾಯಿತಿ ಮತ್ತು ಆಹಾರದ ಮೇಲೆ 20% ರಿಯಾಯಿತಿಯ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ. ” ಮಹಿಳಾ ಪ್ರವಾಸಿಗರು ಕರ್ನಾಟಕದ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಕೊಡುಗೆಯನ್ನು ಬಳಸಬೇಕೆಂದು ಇಲಾಖೆಯು ಒತ್ತಾಯಿಸಿದೆ.

“ಈ ಸೌಲಭ್ಯವು 06.03.2023 ರಿಂದ 10.03.2023 ರವರೆಗೆ ಅನ್ವಯಿಸುತ್ತದೆ. ಏಕಾಂಗಿ ಪ್ರಯಾಣಿಕರು/ಕುಟುಂಬ/ಗುಂಪಾಗಿ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ನೀಡಲಾಗುತ್ತಿದೆ ಆದ್ದರಿಂದ ಎಲ್ಲಾ ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.” ಎಂದು KSTDC ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : PUC Annual Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಇದನ್ನೂ ಓದಿ : Fire at Forest: ಬಂಡೀಪುರ ಅರಣ್ಯಕ್ಕೆ ಬೆಂಕಿ: ಹೊತ್ತಿ ಉರಿದ ಕಾಡು, ಅಪಾರ ಹಾನಿ

World women’s day 2023: State tourism department has given a bumper offer to women on women’s day

Comments are closed.