ಯಾದಗಿರಿ : ರಥೋತ್ಸವದ ವೇಳೆಯಲ್ಲಿ ರಥದ ಮೇಲ್ಬಾಗ ಉರುಳು ಬಿದ್ದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಎಂಬಲ್ಲಿ ನಡೆದಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾತ್ರೆ ಹಾಗೂ ರಥೋತ್ಸವಕ್ಕೆ ನಿಷೇಧ ಹೇರಲಾಗಿದೆ. ಆದರೂ ಗ್ರಾಮಸ್ಥರು ಜಿಲ್ಲಾಡಳಿತ ಕಣ್ಣುತಪ್ಪಿಸಿ ಆತ್ಮಲಿಂಗೇಶ್ವರನ ರಥೋತ್ಸವ ನಡೆಸಲು ಮುಂದಾಗಿದ್ದರು. ರಥೋತ್ಸವದಲ್ಲಿ ನೂರಾರು ಭಕ್ತರು ನೆರೆದಿದ್ದರು.
ಭಕ್ತರು ರಥವನ್ನು ಎಳೆಯುವಾಗ ರಥದ ಮೇಲ್ಭಾಗ ಅರ್ಧಕ್ಕೆ ಕಟ್ ಆಗಿ ಭಕ್ತರ ಮೇಲೆ ಉರುಳಿದೆ. ರಥ ಮೈ ಮೇಲೆ ಬೀಳುತ್ತಿದ್ದಂತೆಯೇ ಭಕ್ತರ ಕೈ, ಕಾಲುಗಳು ಕಟ್ ಆಗಿದೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.