ರೂಪಾಂತರಿ ಕೊರೊನಾ ಅಬ್ಬರ : ‍ಪ್ರೆಗ್ನೆನ್ಸಿ ಮುಂದೂಡುವಂತೆ ಸೂಚಿಸಿದ ಸರಕಾರ

ಬ್ರೆಜಿಲ್​ : ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಬ್ರೆಜಿಲ್ ನಲ್ಲಿ ರೂಪಾಂತರಿ ಕೊರೊನಾ ಹಾವಳಿ ಮಿತಿಮೀರಿದ್ದು, ಮಹಿಳೆಯರು ಪ್ರೆಗ್ನೆಂಟ್ ಆಗೋದನ್ನು ಮುಂದೂಡುವಂತೆ ಸರಕಾರ ಕರೆಕೊಟ್ಟಿದೆ.

ಬ್ರೆಜಿಲ್ ನಲ್ಲಿ ಕಳೆದ ಕೆಲ ದಿನಗಳಿಂದಲೂ ದಿನವೊಂದಕ್ಕೆ ಬರೋಬ್ಬರಿ 3 ರಿಂದ 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸಾವನ್ನಪ್ಪುತ್ತಿ ದ್ದಾರೆ. ಈ ಮೂಲಕ ವಿಶ್ವದಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿಯೂ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಬ್ರಿಜಿಲ್ ಮೊದಲ ಸ್ಥಾನದಲ್ಲಿದೆ. ಕೊರೊನಾ‌ ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಲೇ ಇದೆ. ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಸರಕಾರ ಹರಸಾಹಸವನ್ನೇ ಮಾಡುತ್ತಿದೆ.

ಅದ್ರಲ್ಲೂ ಬ್ರೆಜಿಲ್​ನಲ್ಲಿ ಆರ್ಭಟಿಸುತ್ತಿರೋ P1 ಅನ್ನೋ ರೂಪಾಂತರಿ ವೈರಸ್ ಗರ್ಭಿಣಿಯರಿಗೆ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಈ ವೇಳೆಯಲ್ಲಿ ಮಹಿಳೆಯರು ಗರ್ಭಧಾರಣೆಯನ್ನು ಮಾಡಿದ್ರೆ ಹುಟ್ಟುವ ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ಮಹಾಮಾರಿಯ ಕೆಟ್ಟ ಸಮಯ ಕಳೆಯುವ ವರೆಗೆ ಗರ್ಭಧಾರಣೆಗೆ ಮುಂದಾಗಬೇಡಿ ಅಂತ ಬ್ರೆಜಿಲ್ ಸರ್ಕಾರ ಹೇಳಿದೆ.

ಕೊರೊನಾ‌ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಬ್ರಿಜಿಲ್ ನ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದಲೇ ತುಂಬಿ ತುಳುಕುತ್ತಿದ್ದು, ಔಷಧ ಇಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವಂತೆ ತನ್ನ ಮಿತ್ರ ರಾಷ್ಟ್ರಗಳ ಬಳಿ ಸಹಾಯಕ್ಕೆ ಕೈ ಚಾಚಿದೆ ಬ್ರೆಜಿಲ್.

Comments are closed.