ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರ ಯುವಕರಿಗೆ ಯುವನಿಧಿ ಯೋಜನೆ (Youth Fund Scheme) ಘೋಷಿಸಿದ್ದು, ಇದೀಗ ಸರಕಾರ ಅದಕ್ಕೆ ಸಂಬಂಧಿಸಿದಂತೆ ಮಾನದಂಡ ಪ್ರಕಟಿಸಿದೆ. ಅದರಂತೆ ಪದವಿ, ಡಿಪ್ಲೋಮಾ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದ ನಿರುದ್ಯೋಗಿ ಯುವಕರು ಮಾತ್ರ ಯುವನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ.
ಯಾರಿಗೆ ಈ ಯೋಜನೆ ಪ್ರಯೋಜನ ಲಭ್ಯ :
ಈ ಯೋಜನೆಯ ಪ್ರಯೋಜನಕ್ಕೆ ಕಳೆದೆರಡು ವರ್ಷಗಳ ಅವಧಿಯಲ್ಲಿ ಪಾಸಾಗಿರುವ ಯುವಕರಿಗೆ ಮಾತ್ರ ಯುವನಿಧಿ ಯೋಜನೆ ಭತ್ಯೆ ಪಡೆಯಬಹುದು. ಅಷ್ಟೇ ಅಲ್ಲದೇ ಈ ಯೋಜನೆಯ ಪ್ರಯೋಜನವು ಎರಡು ವರ್ಷದೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೆಯೇ ಈ ಯೋಜನೆಗೆ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಭತ್ಯೆ ನೀಡಲಾಗುತ್ತದೆ. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಮಾಡಿದರೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ : Education Loan Fraud : ಶೈಕ್ಷಣಿಕ ಸಾಲದ ಹೆಸರಲ್ಲಿ ಬೆಂಗಳೂರಿನ ಕಂಪೆನಿಯಿಂದ ವಿದ್ಯಾರ್ಥಿ ಗಳಿಗೆ 18 ಕೋಟಿ ರೂ. ವಂಚನೆ
ಯುವನಿಧಿ ಯೋಜನೆಯ ಮಾನದಂಡವೇನು ?
ಈ ಯೋಜನೆಯ ಪ್ರಯೋಜನವು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ಪದವಿ, ಡಿಪ್ಲೋಮಾ ಬಳಿಕ ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಿರುವವರಿಗೆ ಈ ಭತ್ಯೆ ನೀಡುವುದಿಲ್ಲ. ಆದರೆ ಅಪ್ರೆಂಟಿಸ್ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಯುವನಿಧಿ ಭತ್ಯೆ ನೀಡುವುದಿಲ್ಲ ಎಂದು ಹೇಳಲಾಗಿದೆ.
Youth Fund Scheme criteria published: How to apply for the scheme?