Abhishek Ambareesh – Aviva Wedding : ಅಭಿಷೇಕ್ ಅಂಬರೀಶ್ – ಅವಿವಾ ವಿವಾಹ : ಮನೆಗಳಲ್ಲಿ ಸಂಭ್ರಮಾಚರಣೆ

ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್‌ ಅಂಬರೀಶ್‌ ಹಾಗೂ ಸಂಸದೆ ಸುಮಲತಾ ಅವರ ಮಗನಾದ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ (Abhishek Ambareesh – Aviva Wedding) ಕ್ಷಣಗಣನೆ ಶುರುವಾಗಿದೆ. ನಾಳೆ (ಜೂನ್‌ 5) ನಡೆಯಲಿರುವ ಈ ಜೋಡಿಯ ವಿವಾಹಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ನಡುವೆ ಕನ್ನಡ ಸಿನಿರಂಗದ ಹಲವು ಸಿನಿತಾರೆಯರು ಹಿರಿಯ ನಟ ಅಂಬರೀಶ್‌ ಅವರ ಬೆಂಗಳೂರು ಮನೆಗೆ ಭೇಟಿ ನೀಡಿದ್ದಾರೆ. ಹಾಗೆಯೇ ಅಭಿಷೇಕ್‌ ಹಾಗೂ ಅವಿವಾ ಮದುವೆಯ ಪೂರ್ವ ಕಾರ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಾಕ್ಷಿಯಾಗಿದ್ದಾರೆ.

ಈಗಾಗಲೇ ಅಂಬರೀಶ್‌ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಮದುವೆ ಪೂರ್ವ ಕಾರ್ಯಗಳಿಗೆ ಈಗಾಗಲೇ ಚಾಲನೆ ನೀಡಿದ್ದು, ಅರಶಿನ ಶಾಸ್ತ್ರ, ಮದರಂಗಿ ಶಾಸ್ತ್ರವನ್ನು ನೆರವೇರಿಸಲಾಗಿದೆ. ಈ ಸುಂದರ ಕ್ಷಣಕ್ಕೆ ಸ್ಯಾಂಡಲ್‌ವುಡ್‌ ನಟ-ನಟಿಯರು ಸಾಕ್ಷಿಯಾಗಿದ್ದು, ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆ ಸಂಭ್ರಮದಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಇನ್ನು ಮದರಂಗಿ ಶಾಸ್ತ್ರದ ವೇಳೆ ಅಭಿಷೇಕ್‌ ಕೈ ಮೇಲೆ ಅಮ್ಮ ಸುಮಲತಾ ಮತ್ತು ಭಾವಿ ಪತ್ನಿ ಅವಿವಾ ಹೆಸರು ಮೂಡಿದ್ದು, ರೆಬೆಲ್‌ ಮತ್ತು ಮಂಡ್ಯ ಎನ್ನುವ ಪದವನ್ನು ಅಭಿ ಬರೆಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್‌ ಅಂಬರೀಶ್‌ ಮದುವೆ ಸಂಭ್ರಮದ ಫೋಟೋಗಳು ಹರಿದಾಡುತ್ತಿದೆ.

ಹಿರಿಯ ನಟ ಅಂಬರೀಶ್‌ ಬೆಂಗಳೂರು ಮನೆಯನ್ನು ಹೂವು ಮತ್ತು ಹಸಿರು ತೋರಣದಿಂದ ಸಿಂಗರಿಸಿದ್ದು, ಮನೆಯ ಮುಂದೆ ಚಪ್ಪರ ಹಾಕಲಾಗಿದೆ. ಹಾಗೆಯೇ ಇಂದು ಜೂನ್‌ 4ರಂದು ಚಪ್ಪರ ಪೂಜೆ ಕೂಡ ನೆರವೇರಲಿದೆ. ಈಗಾಗಲೇ ಜೆಪಿ ನಗರದಲ್ಲಿರುವ ಅಂಬಿ ಮನೆಗೆ ಸ್ಟಾರ್‌ ಸೆಲೆಬ್ರಿಟಿಗಳ ಆಗಮನವಾಗುತ್ತಿದ್ದು, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಮೇಘಾನಾ ರಾಜ್‌ ಸರ್ಜಾ, ಸೇರಿದಂತೆ ನಟ, ನಟಯರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ : Actress Rachita Ram : ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌

ಮದುವೆ ಸಂಭ್ರಮದಲ್ಲಿ ಸುಮಲತಾ ಜೊತೆಗಿನ ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ನಾಳೆ ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅಭಿಷೇಕ್‌ ಮತ್ತು ಅವಿವಾ ಜೋಡಿ ಹಸೆಮಣೆ ಏರಲಿದ್ದಾರೆ. ಇನ್ನು 9.30 ರಿಂದ 10.30ರ ನಡುವೆ ಸಲ್ಲುವ ಕರ್ಕಾಟಕ ಶುಭ ಲಗ್ನದ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್‌ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಜೂನ್‌ 7ರಂದು ಪ್ಯಾಲೇಸ್‌ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಜೂನ್‌ 16ರಂದು ಮಂಡ್ಯದಲ್ಲಿ ಬೀಗರ ಊಟದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

Abhishek Ambareesh – Aviva Wedding : Celebration at home

Comments are closed.